ಸಾಲಮನ್ನಾ ಮಾಡಿದ ಕುಮಾರಣ್ಣನ ಮತ್ತೊಂದು ದಿಟ್ಟ ಹೆಜ್ಜೆ
Recommended Video
ಬೆಂಗಳೂರು, ನವೆಂಬರ್ 4: ಸಾಲಮನ್ನಾ ಮಾಹಿತಿಗಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಹಾಯವಾಣಿಯೊಂದನ್ನು ತೆರೆದಿದ್ದಾರೆ.
9164305868 ನಂಬರ್ ಗೆ ಕಾಲ್ ಮಾಡಿದರೆ ಬೆಳೆ ಸಾಲಮನ್ನಾ ಮಾಹಿತಿ ಪಡೆಯಬಹುದಾಗಿದೆ. ಬೆಳಿಗ್ಗೆ 5 ರಿಂದ ಸಂಜೆ 6ರ ವರೆಗೆ ಕರೆ ಮಾಡಿ ಸಾಲ ಮನ್ನಾ ವಿವರ ಪಡೆಯಬಹುದು. ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.
ಬೆಳೆಸಾಲ ಬಗ್ಗೆ ಮಾಹಿತಿ ಪಡೆಯಲು ರೈತರು, ಪ್ರತಿ ದಿನ ನನ್ನ ಮನೆಗೆ ಬರುತ್ತಿದ್ದಾರೆ, ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ಸಹಾಯವಾಣಿ ಆರಂಭಿಸಿದ್ದೇನೆ ಹೀಗಾಗಿ ರೈತರು ತಮ್ಮ ಮನೆಯಿಂದಲೇ ಈ ನಂಬರ್ ಗೆ ಕರೆ ಮಾಡಿ, ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯದ ರೈತರ 46 ಸಾವಿರ ಕೋಟಿ ಸಾಲವನ್ನು ಒಂದೇ ಸಲಕ್ಕೆ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಅವರ ಆಶ್ವಾಸನೆಗಳು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿಲ್ಲ.
ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ 'ಬೆಳೆಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದೇನೆ. ರೈತರು ತಮ್ಮ ಮನೆಯಿಂದಲೇ 9164305868 ನಂಬರ್ ಗೆ ಬೆಳಗ್ಗೆ 10 ರಿಂದ 5 ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು
— H D Kumaraswamy (@hd_kumaraswamy) November 4, 2019
ಬಳಿಕ ಬಂದ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸಾಧ್ಯವಿಲ್ಲ. ಸಾಧ್ಯವಿಲ್ಲ, ರಾಜ್ಯದಲ್ಲಿ ನೆರೆಬಂದು ಸಾಕಷ್ಟು ನಷ್ಟವಾಗಿದೆ. ಹೀಗಾಗಿ ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿದ್ದರು.












Click it and Unblock the Notifications