ಭಜ್ಜಿ-ಗೀತಾ ಅದ್ದೂರಿ ವಿವಾಹ ಅಕ್ಟೋಬರ್ ನಲ್ಲಿ ಪಕ್ಕಾ
ಜಲಂಧರ್, ಆಗಸ್ಟ್.22: ಭಾರತ ತಂಡದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ತಮ್ಮ ಪ್ರೇಯಸಿ ಬಾಲಿವುಡ್ ನಟಿ ಗೀತಾ ಬಸ್ರಾ ಅವರನ್ನು ಅಕ್ಟೋಬರ್ ನಲ್ಲಿ ಮದುವೆಯಾಗುವುದು ಪಕ್ಕಾ ಆಗಿದೆ.
ಪಂಜಾಬಿನ ಪತ್ರಿಕೆಯೊಂದು ವರದಿ ಮಾಡಿರುವಂತೆ ಆಕ್ಟೋಬರ್ 29 ರಂದು ಜಲಂಧರ್ ನಲ್ಲಿ ಇಬ್ಬರ ವಿವಾಹ ನಡೆಯಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯವನ್ನಾಡಲು ಹರ್ಭಜನ್‌ಗೆ ಅವಕಾಶ ಸಿಕ್ಕಿದರೆ ಮದುವೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಕಳೆದ ತಿಂಗಳು ಜಲಂಧರ್ ಗೆ ಭೇಟಿ ನೀಡಿದ್ದ ವೇಳೆ ಹರ್ಭಜನ್ ಸಿಂಗ್ ಕಾಂಗ್ರೆಸ್ ಮುಖಂಡರೊಬ್ಬರ ಬಳಿ ಮದುವೆ ಬಗ್ಗೆ ಹೇಳಿಕೊಂಡಿದ್ದರು. ಸದ್ಯ ಶ್ರೀಲಂಕಾ ವಿರುದ್ಧ ಹರ್ಭಜನ್ ಟೆಸ್ಟ್ ಆಡುತ್ತಿದ್ದಾರೆ.
ಬಾಲಿವುಡ್ ನಟಿ ಗೀತಾ ಬಸ್ರಾ ಹಲವಾರು ವರ್ಷಗಳಿಂದ ಹರ್ಭಜನ್ ಸಿಂಗ್ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋ ವೊಂದರ ವೇಳೆ ಪರಸ್ಪರ ಇಬ್ಬರಿಗೂ ಗೆಳೆತನವಾಗಿತ್ತು.
ತಮ್ಮ ಬಗ್ಗೆ ಹಬ್ಬಿದ್ದ ವದಂತಿ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಗೀತಾ, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ನಾನು ಮದುವೆಯಾಗುತ್ತಿದ್ದರೆ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಕದ್ದು ಮುಚ್ಚಿ ಮದುವೆಯಾಗಲ್ಲ ಎಂದು ಹೇಳಿಕೊಂಡಿದ್ದರು.












Click it and Unblock the Notifications