Bengaluru: ಸಿದ್ದರಾಮಯ್ಯ ನಿವಾಸದ ಮುಂದೆ ಹನುಮನ ಪೋಸ್ಟರ್ ತೆರವು: ವಿಡಿಯೋ ವೈರಲ್
ಬೆಂಗಳೂರು ಮೇ 14: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸದ ಮುಂದೆ ಇದ್ದ ಶ್ರೀರಾಮ ಹಾಗೂ ಹನುಮನ ಪೋಸ್ಟರ್ ತೆರವುಗೊಳಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
#WATCH | Poster of Lord Ram and Bajrang Bali that was put outside Congress leader Siddaramaiah's residence in Bengaluru is now being removed. #KarnatakaElectionResults pic.twitter.com/vtotK0erSu
— ANI (@ANI) May 14, 2023
ಬೆಂಗಳೂರಿನಲ್ಲಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಹೊರಗೆ ಹಾಕಲಾಗಿದ್ದ ರಾಮ ಮತ್ತು ಭಜರಂಗ ಬಲಿಯ ಪೋಸ್ಟರ್ ಅನ್ನು ಈಗ ತೆಗೆದುಹಾಕಲಾಗಿದೆ. ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಜಯ ಗಳಿಸಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಈ ಬೆಳವಣಿಗೆ ಕಂಡು ಬಂದಿದೆ.

ಈ ಬಾರಿ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಚುನಾವಣೆಗೂ ಮೊದಲಿನಿಂದಲೂ ಬಿಜೆಪಿ ಸಿದ್ದರಾಮಯ್ಯ ಅವರನ್ನು 'ಹಿಂದೂ ವಿರೋಧಿ, ಹಿಂದೂ ದ್ವೇಷಿ' ಎಂದು ಹೇಳಿಕೊಂಡು ಬಂದಿದೆ. ಸದ್ಯ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಅನಿರೀಕ್ಷಿತ ಸಿದ್ದರಾಮಯ್ಯ ಅವರ ಗೆಲುವಿನಿಂದಾಗಿ ಅವರ ಬೆಂಗಳೂರು ನಿವಾಸದ ಮುಂದೆ ಇದ್ದ ಶ್ರೀರಾಮನ ಪೋಸ್ಟರ್ ತೆರವುಗೊಳಿಸಲಾಗಿದೆ.
ಹೀಗಾಗಿ ಬಿಜೆಪಿ ತಮ್ಮನ್ನು ಹಿಂದೂ ವಿರೋದಿ ಎಂದು ಬಿಂಬಿಸುತ್ತಿದೆ ಎಂದು ಸಿದ್ದರಾಮಯ್ಯ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಹೇಳುತ್ತಾರೆ. ಆದರೆ, ನಾನು ಹಿಂದೂ ಧರ್ಮದ ವಿರೋಧಿಯಲ್ಲ. ನಾನೂ ಹಿಂದೂನೆ. ನಾನು ಮನುವಾದದ ವಿರೋಧಿ ಹಾಗೂ ಹಿಂದುತ್ವದ ವಿರೋಧಿ. ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು. "ಯಾವುದೇ ಧರ್ಮವು ಕೊಲೆ ಮತ್ತು ಹಿಂಸೆಯನ್ನು ಬೆಂಬಲಿಸುವುದಿಲ್ಲ ಆದರೆ ಹಿಂದುತ್ವ ಮತ್ತು ಮನುವಾದವು ಕೊಲೆ, ಹಿಂಸೆ ಮತ್ತು ತಾರತಮ್ಯವನ್ನು ಬೆಂಬಲಿಸುತ್ತದೆ" ಎಂದು ತಿಳಿಸಿದ್ದರು.
ಆದರೆ ಬಿಜೆಪಿ ಮಾತ್ರ ಸಿದ್ದರಾಮಯ್ಯ ಹಿಂದೂಗಳಿಗಿಂತ ಮುಸ್ಲೀಂ ಸಮುದಾಯದವರಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಅವರು ಹಿಂದೂ ವಿರೋಧಿ ಎನ್ನುವ ಮಾತನ್ನು ಹೆಚ್‌ಡಿ ಕುಮಾರಸ್ವಾಮಿ ಅವರು ಒಪ್ಪುವುದಿಲ್ಲ. ಸಿದ್ದರಾಮಯ್ಯ ಅವರು ಸ್ವಪಕ್ಷದಲ್ಲಿರುವ ಮುಸ್ಲಿಂ ಮುಖಂಡರನ್ನು ಸೋಲಿಸಲು ಯಾವ ತಂತ್ರಗಳನ್ನೆಲ್ಲ ಮಾಡಿದ್ದಾರೆ ಎಂದು ಸುದೀರ್ಘ ಟ್ವೀಟ್‌ನಲ್ಲಿ ಹಿಂದೊಮ್ಮೆ ಕುಮಾರಸ್ವಾಮಿ ಸರಣಿ ಆರೋಪಗಳನ್ನು ಮಾಡಿದ್ದರು. ಒಟ್ಟಿನಲ್ಲಿ ಬಿಜೆಪಿಗೆ ಕಾಂಗ್ರೆಸ್ ಗೆಲುವು ನುಂಗಲಾಗದ ತುತ್ತಾಗಿದೆ.
ಇತ್ತ ರಾಜ್ಯದಲ್ಲಿ ನೂತನ ಸರ್ಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದು, ಶಾಸಕರ ಬೆಂಬಲ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.












Click it and Unblock the Notifications