ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತರ ಸೂಚನೆಯೇನು?
ಬೆಂಗಳೂರು, ಮೇ 30: ಕೋರಮಂಗಲ ಕೇಂದ್ರೀಯ ಸದನದಿಂದ ಈಜಿಪುರಕ್ಕೆ ನಿರ್ಮಿಲಸಾಗುತ್ತಿರುವ ಎರಡನೇ ಅತೀ ಉದ್ದದ ಮೇಲ್ಸೇತುವೆಯಾಗಿರುವ ಬೆಂಗಳೂರು ಈಜೀಪುರ ಮೇಲ್ಸೇತುವೆ ವಿಳಂಬವಾಗುತ್ತಲೇ ಬಂದಿದೆ. ಈ ಕಾಮಗಾರಿ ಸಂಬಂಧ ಅಧಿಕಾರಿಗಳು ಡೈರಿ ವೃತ್ತದಿಂದ ಕಾಲ್ನಡಿಗೆಯಲ್ಲೇ ಬಂದು ಪರಿಶೀಲಿಸಿದ್ದಾರೆ. ಗುತ್ತಿಗೆದಾರರಿಗೆ ಮಹತ್ವದ ಸೂಚನೆ ನೀಡಿರುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.
ವರ್ಷಗಳಿಂದಲೇ ಅರ್ಧಕ್ಕೆ ನಿಂತ ಈಜೀಪುರ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂದು ಜನ ಕಾಯುತ್ತಿದ್ದಾರೆ. ಈ ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಈಜೀಪುರ ಮೇಲ್ಸೇತುವೆ ಮೇಲ್ಭಾಗಕ್ಕೆ ತೆರಳಿ ಕಾಮಗಾರಿ ಎಷ್ಟಾಗಿದೆ? ಎಲ್ಲಿಗೆ ನಿಂತಿದೆ ಎಂದು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಗುತ್ತಿರುವ ಸಮಸ್ಯೆ, ಅಡಚಣೆ ಕುರಿತು ಚರ್ಚಿಸಿದರು. ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಸೆಂಟ್ ಜಾನ್ಸ್ ಬಳಿ ರಾಂಪ್‌ಗೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದೇ ವಿಚಾರವಾಗಿ ಸಂಬಂಧಿಸಿದವರ ಜೊತೆ ಸಭೆ ಆಯೋಜಿಸಿ ಕೂಡಲೇ ಭೂಮಿ ವಶಕ್ಕೆ ಪಡೆದುಕೊಳ್ಳಬೇಕು. ನಂತರ ರ‍್ಯಾಂಪ್ ಕಾಮಗಾರಿ ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ.

ಈಜೀಪುರ ಮೇಲ್ಸೇತುವೆಯ ಬಾಕಿ ಉಳಿದ ಕಾಮಗಾರಿ ಮುಗಿಸಲು ಬಿ.ಎಸ್.ಸಿ.ಪಿ.ಎಲ್ ಇನ್ಫ್ರಾಸ್ಟ್ರಕ್ಚರ್ ಲಿ., ಗುತ್ತಿಗೆದಾರರು ಕೆಲಸ ಮುಂದುವರಿಸಿದ್ದಾರೆ. ಸದ್ಯ 762 ರಲ್ಲಿ 416 ಸೆಗ್ಮೆಂಟ್ ಕಾಸ್ಟಿಂಗ್ ಹಾಗೂ 762 ರಲ್ಲಿ 291 ಸೆಗ್ಮೆಂಟ್ ಎರೆಕ್ಷನ್ ಮಾಡಲಾಗಿದೆ. ಮೇಲ್ಸೇತುವೆಯ ಕೆಳಭಾಗದ ರಸ್ತೆಯನ್ನು ಸರಿಯಾಗಿ ನಿರ್ವಹಿಸಬೇಕು. ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ನಿರ್ವಹಣೆ ಸರಿಯಾಗಿ ಇಲ್ಲದಿರುವುದನ್ನು ಕಂಡು ಕೂಡಲೇ ದುರಸ್ಥಿಗೆ ಕ್ರಮ ವಹಿಸಬೇಕು. ಬೀವಲು ಮಳೆ ನೀರು ಚರಂಡಿಗಳಿಗೆ ಸರಾಗಿ ಹರಿದು ಹೋಗಲು ಅನುಕೂಲ ಕಲ್ಪಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಗುಣನಿಯಂತ್ರಣ ವಿಭಾಗದ ಮುಖ್ಯ ಅಭಿಯಂತರರು ವಿವರಿಸಿದರು.
ಮಡಿವಾಳ ಬಸ್ ಪಿಕ್ ಅಪ್ ಪಾಯಿಂಟ್ ಬಳಿಯ ರಸ್ತೆ ಬದಿ ಸಾಕಷ್ಟು ತ್ಯಾಜ್ಯ ಬಿಸಾಡಿರುವುದನ್ನು ಕಂಡು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಬಂದು ಸ್ವಚ್ಛತಾ ಕಾರ್ಯ ಮಾಡಬೇಕು. ಈ ಜಾಗದಲ್ಲಿ ಹೆಚ್ಚು ಬಸ್ ಗಳು ನಿಲ್ಲಲಿದ್ದು, ಹೆಚ್ಚು ಮಂದಿ ಸಂಚರಿಸುತ್ತಾರೆ. ಆದ ಕಾರಣ ಸದಾ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೆಕೆಂದು ಸೂಚಿಸಿದರು.
ಜಂಕ್ಷನ್ ಅಭಿವೃದ್ಧಿಗೆ ಆದ್ಯತೆ ನೀಡಿ
ಮಡಿವಾಳ ಕೆಳಸೇತುವೆಯ ಮೇಲ್ಭಾಗದಲ್ಲಿರುವ ಜಂಕ್ಷನ್ ಬಳಿ ಪಾದಚಾರಿ ಮಾರ್ಗಗಳು, ರಸ್ತೆ ಅಭಿವೃದ್ಧಿ ಸೇರಿದಂತೆ ಜಂಕ್ಷನ್ ಸಮಗ್ರ ಅಭಿವೃದ್ಧಿ ಮಾಡಬೇಕು. ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಯಿಂದ ಪಾಚದಾರಿಗಳ ಓಡಾಟಕ್ಕೆ ಸಮಸ್ಯೆಯಾಗಲಿದೆ. ಅದನ್ನು ಸರಿಪರಿಸುವಂತೆ ಮಹೇಶ್ವರ್ ರಾವ್ ಅವರು ನಿರ್ದೇಶಿಸಿದರು.
ಇನ್ನೂ ಡಬಲ್ ರಸ್ತೆಯ ಡೈರಿ ಸರ್ಕಲ್ ಬಳಿಯಿರುವ ಕ್ರೈಸ್ಟ್ ಕಾಲೇಜು ಬಳಿಯಿಂದ ಸೆಂಟ್ ಜಾನ್ಸ್ ಕಾಲೇಜು ಜಂಕ್ಷನ್, ಮಡಿವಾಳ ಕೆಳಸೇತುವೆ, ಕೋರಮಂಗಲ 100 ಅಡಿ ರಸ್ತೆ, ಕೇಂದ್ರೀಯ ಸದನ, ಈಜೀಪುರ ಮೇಲ್ಸೇತುವೆ ರಸ್ತೆ, ಸೋನಿ ಜಂಕ್ಷನ್ ವರೆಗೆ 3.5 ಕಿ.ಮೀ ನಡಿಗೆ ಮೂಲಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿ ಉತ್ತಮ ರಸ್ತೆಗಳ ನಿರ್ಮಾಣದ ಜೊತೆಗೆ ಪಾದಚಾರಿ ಮಾರ್ಗಗಳನ್ನು ಸರಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.












Click it and Unblock the Notifications