• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಗೃಹಿಣಿ ಹ್ಯಾಫೆಲೆ ಸೂಪರ್ ಮಾಮ್ ರನ್ನರ್ ಅಪ್

|

ಬೆಂಗಳೂರು, ನವೆಂಬರ್ 02: ಜಾಗತಿಕ ಮಟ್ಟದ ಇಂಟೀರಿಯರ್ ವಿನ್ಯಾಸ ಸಂಸ್ಥೆಯಾಗಿರುವ ಹ್ಯಾಫೆಲೆ ನಡೆಸಿದ ಸೂಪರ್ ಮಾಮ್ ಸ್ಪರ್ಧೆಯಲ್ಲಿ ಬೆಂಗಳೂರಿನ ದಿವ್ಯಾ ಜೈನ್ ಮತ್ತು ನೀನಾ ಜಾಕೊಬ್ ಅವರು ರನ್ನರ್ ಅಪ್ ಆಗಿದ್ದಾರೆ. ಇತ್ತೀಚೆಗೆ ಹ್ಯಾಫೆಲೆ ಡಿಸೈನ್ ಸೆಂಟರ್ ನಡೆದ ಈ ನಾಗೋಲ್ಡ್ ಸೂಪರ್‍ಮಾಮ್ ಸೂಪರ್ ರೆಸಿಪಿ ಸ್ಪರ್ಧೆಯ ಅಂತಿಮ ಸ್ಪರ್ಧೆಗೆ 8 ಮಂದಿ ಆಯ್ಕೆಯಾಗಿದ್ದರು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವ ಸಂದೇಶ್ ಚಮತ್ಕಾರ

ದೇಶದ ವಿವಿಧ ನಗರಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಅಡುಗೆಕೋಣೆಯಲ್ಲಿ ತಮ್ಮ ಕೌಶಲ್ಯ, ಸಮರ್ಥತೆ ಮತ್ತು ಆವಿಷ್ಕಾರಗಳನ್ನು ಪ್ರದರ್ಶನ ಮಾಡಿದರು. ಇದರಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನಡೆಸಿದವರನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ದೀಪಾವಳಿ ವಿಶೇಷ ಪುರವಣಿ

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 1000 ಕ್ಕೂ ಹೆಚ್ಚು ಅಮ್ಮಂದಿರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅತ್ಯುತ್ತಮ ಮತ್ತು ವಿನೂತನವಾದ ರೆಸೆಪಿಯನ್ನು ತಯಾರಿಸಲು ಬಯಸಿದ್ದ ಕೇವಲ 25 ಮಂದಿ ಆಯ್ಕೆಯಾಗಿದ್ದರು.

ಕತ್ರೀನಾಳಿಗೆ ಬೆಂಗಳೂರಿನ ದೋಸೆ, ಫಿಲ್ಟರ್ ಕಾಫಿ ಇಷ್ಟವಂತೆ!

ಇವರೆಲ್ಲರೂ ಹ್ಯಾಫೆಲೆಯ ಕಿಚನ್‍ನಲ್ಲಿ ತಮ್ಮ ವಿನೂತನವಾದ ರೆಸಿಪಿಯನ್ನು ತಯಾರಿಸಿದ್ದರು. ಈ 25 ಮಂದಿಯಲ್ಲಿ ಅತ್ಯುತ್ತಮವಾದ ರೆಸೆಪಿ ತಯಾರಿಸಿದ 8 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಈ ಎಂಟೂ ಮಂದಿ ಮುಂಬೈನಲ್ಲಿ ನಡೆದ ಫೈನಲ್‍ನಲ್ಲಿ ಸ್ಪರ್ಧಿಸಿದರು.

ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!

ದೇಶದ ಖ್ಯಾತ ಚೆಫ್, ನಟಿ, ಮಾಡೆಲ್, ವಿಜೆ, ಚೆಫ್ ಮತ್ತು ಸೂಪರ್ ಮಾಮ್ ಕಾರ್ಯಕ್ರಮದ ರೂವಾರಿ ಮಾರಿಯಾ ಗೊರೆಟ್ಟಿ ಅವರು ಈ ಹ್ಯಾಫೆಲೆ ಸೂಪರ್‍ಮಾಮ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ನಾಸಿಕ್‍ನ ನಿಕಿತಾ ಬ್ರಹ್ಮೇಚಾ ಅವರು ಪ್ರಶಸ್ತಿ ಪಡೆದರೆ, ಬೆಂಗಳೂರಿನ ದಿವ್ಯಾ ಜೈನ್ ಮತ್ತು ನೀನಾ ಜಾಕೊಬ್ ಅವರು ಎರಡನೇ ಸ್ಥಾನ ಪಡೆದಿದ್ದಾರೆ.

English summary
Häfele, the international leader in Interior Functionality, brought a chance to shine for all those Super Moms unable to showcase their inner chefs due to their super busy lives. Chef Maria Gorretti, actress, model, VJ, Chef, TV host and Super Mom to two adorable children, arrived to judge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X