ಪಂಡಿತ್ ಬಸವರಾಜ ರಾಜಗುರುವಿಗೆ ಗುರುವಂದನೆ ಸಲ್ಲಿಸಲು ಬನ್ನಿ
ಸಂಗೀತಾಸಕ್ತ 'ಗೆಳೆಯರ ಬಳಗ'ವು ವಿಖ್ಯಾತ ಹಿಂದುಸ್ಥಾನಿ ಗಾಯಕ, ಪದ್ಮಭೂಷಣ ದಿವಂಗತ ಪಂಡಿತ್. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಪ್ರತಿ ವರ್ಷದಂತೆ ಈ ವರ್ಷವೂ 'ಗುರುವಂದನಾ' ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಬೆಂಗಳೂರು, ಏಪ್ರಿಲ್ 07: ಸಂಗೀತಾಸಕ್ತ 'ಗೆಳೆಯರ ಬಳಗ'ವು ವಿಖ್ಯಾತ ಹಿಂದುಸ್ಥಾನಿ ಗಾಯಕ, ಪದ್ಮಭೂಷಣ ದಿವಂಗತ ಪಂಡಿತ್. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಪ್ರತಿ ವರ್ಷದಂತೆ ಈ ವರ್ಷವೂ ಗುರುವಂದನಾ' ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಶನಿವಾರ(ಏಪ್ರಿಲ್ 08) ಹಲವಾರು ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಮಲ್ಲೇಶ್ವರದ ಸೇವವಾಸದನದಲ್ಲಿ ಸಂಜೆ ಐದು ಗಂಟೆಗೆ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ; ಕಿರಣ್ ಮಗೇಗಾರ್ ಅವರ ಬಾನ್ಸುರಿ ವಾದನ ಹಾಗೂ ಯುವ ಗಾಯಕ ನರಸಿಂಹ ಜೋಶಿ ಅವರ ಗಾಯನ ನಡೆಯಲಿದೆ.
ಈ ಕಲಾವಿದರಿಗೆ ಸಹವಾದನದಲ್ಲಿ ಗುರುಮೂರ್ತಿ ವೈದ್ಯ, ಶ್ರೀವತ್ಸ ಕೌಲಗಿ, ಸಂತೋಷ್ ಸಾಗರ (ತಬಲಾ) ಹಾಗೂ ಮಧುಸೂದನ ಭಟ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ. ಹೆಚ್ಚಿನ ವಿವರಗಳಿಗೆ ಸಂಪರ್ಕ: 80953-04253
ಸ್ಥಳ: ಸೇವಾಸದನ, 14ನೇ ಕ್ರಾಸ್, ಮಲ್ಲೇಶ್ವರ.
ಸಮಯ: ಶನಿವಾರ ಸಂಜೆ 5
ಗೆಳೆಯರ ಬಳಗ : ಗೆಳೆಯರ ಬಳಗ'ವು ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಳೆದ ಐದು ವರ್ಷಗಳಲ್ಲಿ; ಹೆಸರಾಂತ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ.ಪಿ. ಹೆಗಡೆ ಪಡಿಗೇರಿ, ಪಂ. ಪರಮೇಶ್ವರ ಹೆಗಡೆ, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಪೂರ್ಣಿಮಾ ಭಟ್ ಕುಲಕರ್ಣಿ, ನಾಗರಾಜ್ ಶಿರನಾಲಾ, ನಾಗಭೂಷಣ ಬಾಳೆಹದ್ದ, ಸತೀಶ್ ಮಾಳಕೊಪ್ಪ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಜೊತೆಗೆ ಉದಯೋನ್ಮುಖ ಗಾಯಕರಾದ ವಿಶಾಲ್ ಕಂಪ್ಲಿ, ರಘುನಂದನ್ ಬ್ರಹ್ಮಾವರ, ಹರೀಶ್ ಹಳವಳ್ಳಿ, ಸುಮಾ ಹಿತ್ಲಳ್ಳಿ ಅವರೂ ಈ ಕಾರ್ಯಕ್ರಮಗಳಲ್ಲಿ ಗಾಯನವನ್ನು ಪ್ರಸ್ತುತಪಡಿಸಿದ್ದರು. ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿಭಾವಂತ ಹಿರಿಕಿರಿಯ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಒಳ್ಳೆಯ ಸಂಗೀತ ವಾತಾವರಣವನ್ನು ನಿರ್ಮಾಣ ಮಾಡುವುದು ಈ ಬಳಗದ ಮೂಲ ಉದ್ದೇಶ.

ಸುರ ಕಾ ಬಾದಶಾಹ
ಬಸವರಾಜ ಮಹಾಂತಸ್ವಾಮಿ ರಾಜಗುರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲಿ ಜನಿಸಿದರು. 1917 ಆಗಸ್ಟ್ 24ರಂದು ಜನಿಸಿದರು. ಬಸವರಾಜ ರಾಜಗುರು ಅವರು ಆರಂಭದಲ್ಲಿ ರಂಗಗೀತೆಗಳನ್ನು ಕಲಿತು ಹಾಡಿದರೂ ಗದಗಿನ ಅಂಧ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಸಂಪರ್ಕದಿಂದ ಶಾಸ್ತ್ರೀಯ ಗಾಯನ ವೃತ್ತಿಗೆ ಬಂದರು.
ಕಿರಾಣಾ, ಗ್ವಾಲಿಯರ ಹಾಗು ಪತಿಯಾಳಾ ಘರಾಣಾಗಳ ಆಳ ಜ್ಞಾನ ಉಳ್ಳವರಾಗಿದ್ದರು. ಈ ಮೂರೂ ಘರಾಣಾಗಳ ಶ್ರೇಷ್ಠ ಅಂಶಗಳನ್ನು ಒಳಗೊಂಡ ಸಂಗೀತ ಅವರದಾಗಿತ್ತು. ಬಸವರಾಜ ರಾಜಗುರು ತಮ್ಮ ಗುರು ಪಂಚಾಕ್ಷರಿ ಗವಾಯಿಗಳಿಗೆ ಕೊಟ್ಟ ಮಾತಿನಂತೆ, ತಮ್ಮ ಸಂಗೀತ ವಿದ್ಯೆಯನ್ನು ನಿರ್ವಂಚನೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಧಾರೆಯರೆದರು.

ಧನಂಜಯ ಹೆಗಡೆ
ಉತ್ತರ ಕನ್ನಡ ಮೂಲದ ಗುಣವಂತೆಯ ಧನಂಜಯರ ತಂದೆ ಜಿ.ಎಸ್. ಹೆಗಡೆ, ತಾಯಿ ಗೀತಾ ಹೆಗಡೆ. ತಾಯಿಯಿಂದ ಶುರುವಾದ ಸಂಗೀತ ಕಲಿಕೆ ಪಂ. ವಿನಾಯಕ್ ತೊರವಿಯವರ ಮಾರ್ಗದರ್ಶನದಲ್ಲಿ ಮುಂದುವರೆಯಿತು. ದೇಶದ ಅತ್ಯಂತ ಪ್ರತಿಭಾವಂತ ಯುವ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಮುಂಬೈನ ಗಂಧರ್ವ ಮಹಾವಿದ್ಯಾಲಯದ ಸಂಗೀತ ವಿಶಾರದ ಪದವಿ ಗಳಿಸಿದ ಇವರ ಅನೇಕ ಸಿ.ಡಿ. ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಎಂ.ಕಾಂ. ಪದವೀಧರರಾಗಿರುವ ಧನಂಜಯ್ ಪ್ರಸ್ತುತ ಮುಂಬೈನ ಕರ್ನಾಟಕ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಿರಣ್ ಮಗೇಗಾರ್
ಉತ್ತರ ಕನ್ನಡದ ಸಿದ್ದಾಪುರದ ಕಿರಣ್ ಬಾಲ್ಯದಿಂದಲೂ ಸಂಗೀತಾಸಕ್ತರು. ಸಂಗೀತದ ಪ್ರಾಥಮಿಕ ಪಾಠಗಳನ್ನು ಶಿರಸಿಯ ವಿದ್ವಾನ್ ಪ್ರಭಾಕರ ಭಟ್ ಅವರ ಬಳಿ ಕಲಿತ ಕಿರಣ್, ಆ ಬಳಿಕ ಪಂ. ವೆಂಕಟೇಶ್ ಗೋಡ್ಖಿಂಡಿ ಅವರ ಬಳಿ ಬಾನ್ಸುರಿಯ ಅಭ್ಯಾಸವನ್ನು ಮುಂದುವರಿಸಿದರು. 2005ರಿಂದ ಪದ್ಮವಿಭೂಷಣ ಡಾ. ಎನ್. ರಾಜಂ ಅವರ ತಮ್ಮ ಕಲಿಕೆಯನ್ನು ಮುನ್ನಡೆಸುತ್ತಿದ್ದಾರೆ. ಪುಣೆಯಲ್ಲಿ ನಡೆದ 12ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಕರ್ನಾಟಕದ ಪರವಾಗಿ ಪಾಲ್ಗೊಂಡು ಬಹುಮಾನ ಪಡೆದಿರುವ ಕಿರಣ್, ರಾಷ್ಟ್ರಮಟ್ಟದ ಹಲವಾರು ವಾದನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.

ನರಸಿಂಹ ಜೋಶಿ
ಕಲಾತ್ಮಕ, ಧಾರ್ಮಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ನರಸಿಂಹ ಜೋಶಿ ಬಾಲ್ಯದಿಂದಲೂ ಸಂಗೀತದ ಗುಂಗು ತುಂಬಿಕೊಂಡವರು. ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸಂಗೀತಾಭ್ಯಾಸ ಮಾಡಿರುವ ಜೋಶಿ, ಇನ್ನೊಬ್ಬ ಶ್ರೇಷ್ಠ ಗಾಯಕ ಪಂ. ಎಂ.ಪಿ. ಹೆಗಡೆ ಪಡಿಗೇರಿ ಅವರ ಬಳಿ ಸಂಗೀತದ ಉನ್ನತಾಭ್ಯಾಸ ಕೈಗೊಂಡಿದ್ದಾರೆ. ವೃತ್ತಿಯಲ್ಲಿ ಟೆಕ್ಸ್‌ಟೈಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಂಗೀತದ ನಂಟನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಗೆಳೆಯರ ಬಳಗ'ದ ಮೂಲಕ ಕಳೆದ ಐದು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದ್ದಾರೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications