ರಸ್ತೆ ಕಾಮಗಾರಿ ನೆಪದಲ್ಲಿ ಕೋಟ್ಯಂತರ ರೂ ಲೂಟಿ; ರಾಮಲಿಂಗಾ ರೆಡ್ಡಿ ಆರೋಪ

ಬೆಂಗಳೂರು, ಜೂನ್ 03: ರಸ್ತೆ ಕಾಮಗಾರಿಯ ಹೆಸರಲ್ಲಿ ಸರ್ಕಾರ ಕೋಟಿ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 12 ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡರ್ ಅಭಿವೃದ್ಧಿಯಲ್ಲಿ ಅವ್ಯವಹಾರ ನಡೆದಿದೆ. ಇದರಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ದೂರಿದರು.

ಈ ಕಾಮಗಾರಿಗೆ ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಬಳ್ಳಾರಿ, ತುಮಕೂರು ರಸ್ತೆಗಳಲ್ಲಿ ಹಲವು ಸಿಗ್ನಲ್ ಫ್ರೀ ರಸ್ತೆಗಳ ಗುತ್ತಿಗೆ ಕೊಟ್ಟಿದ್ದಾರೆ. ಕೂಡಲೇ ಈ ಗುತ್ತಿಗೆ ರದ್ದು ಮಾಡಬೇಕು. ಅಗತ್ಯ ಇರುವ ರಸ್ತೆಗೆ ಮಾತ್ರ ಟೆಂಡರ್ ಆಹ್ವಾನಿಸಬೇಕು ಎಂದು ಆಗ್ರಹಿಸಿದ್ದಾರೆ.

Government Robbed Crores Of Rs In The Name Of Road Works Alleges Ramalinga Reddy

ಈ ಕಾಮಗಾರಿಗಾಗಿ 5 ವರ್ಷದಲ್ಲಿ ಏಳು ನೂರು ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಪ್ರತಿವರ್ಷ ನಿರ್ವಹಣೆಗೆ ಸುಮ್ಮನೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಅದನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವಾದಲ್ಲಿ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶೇ 80ರಷ್ಟು ವಾಹನ ದಟ್ಟಣೆ ಇದೆ. 190 ಕಿ.ಮೀ ಉದ್ದದ ವಾಹನ ದಟ್ಟಣೆ ರಸ್ತೆಗಳಿವೆ. ರಸ್ತೆಗಳ ನಿರ್ವಹಣೆಗೆ ಟೆಂಡರ್ ಕೊಡಲಾಗಿದೆ. 477.29 ಕೋಟಿ ಮೊತ್ತಕ್ಕೆ 650 ಕೋಟಿ ಹೆಚ್ಚಿಗೆ ಸೇರಿಸಲಾಗಿದೆ. ಒಟ್ಟು 1120 ಕೋಟಿ ಅಂದಾಜು ತಯಾರಿಸಿದೆ ಎಂದು ಆರೋಪ ಮಾಡಿದ್ದಾರೆ.

Recommended Video

      ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಲ ಸೇರಿಕೊಂಡ BJP ಅತೃಪ್ತರು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+