ಬೆಂಗಳೂರಿಗರೇ ಹುಷಾರ್!: ನಕಲಿ ಲೋಕಾಯುಕ್ತ ದಾಳಿಗೆ ಹೆದರಿ ಹಣ ಕಳೆದುಕೊಳ್ಳದಿರಿ

ಬೆಂಗಳೂರು ಮಾರ್ಚ್ 31: ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು ಪಾಲಿಗೆ ಲೋಕಾಯುಕ್ತ ಸಂಸ್ಥೆ ಸಿಂಹಸ್ವಪ್ನವೇ ಸರಿ. ಆದರೆ ಅವರ ಹೆಸರನ್ನೇ ಬಳಸಿಕೊಂಡು ವಂಚನೆ ಮಾಡಿದ ಘಟನೆ ನಡೆದಿದೆ.

ನಕಲಿ ಲೋಕಾಯುಕ್ತ ದಾಳಿಗೆ ಹೆದರಿ ಸರ್ಕಾರಿ ಅಧಿಕಾರಿಯೊಬ್ಬರು 1 ಲಕ್ಷ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ 3 ಸರಗಳ್ಳರನ್ನು ಬಂಧಿಸಲಾಗಿದೆ. ಎಪಿ ಮೂಲದ ನಾಗೇಶ್ವರ ರೆಡ್ಡಿ (33), ಬಾಚುಪಲ್ಲಿ ವಿನೀತ್ ಕುಮಾರ್ ರೆಡ್ಡಿ (22) ಮತ್ತು ಶಿವಕುಮಾರ್ ರೆಡ್ಡಿ (19) ಎಂದು ಆರೋಪಿಗಳನ್ನು ಗುರುತಿಸಲಾಗಿದೆ.

Government official lost 1 lakh due to fake Lokayukta attack

ಲೋಕಾಯುಕ್ತ ಅಧಿಕಾರಿಗಳೆಂದು ಬಿಂಬಿಸಿ ದಾಳಿ ವಿಫಲಗೊಳಿಸಲು ಅಧಿಕಾರಿಯೊಬ್ಬರಿಂದ 1 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಮೂವರನ್ನು ಬಂಧಿಸಲಾಗಿದೆ.

ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ನ ಅಧಿಕಾರಿಯೊಬ್ಬರು ಮಾರ್ಚ್ 20 ರಂದು ಲೋಕಾಯುಕ್ತರು ಅವರ ಮನೆ ಮೇಲೆ ದಾಳಿ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ಕರೆ ಸ್ವೀಕರಿಸಿದರು. ಕರೆ ಮಾಡಿದ ವ್ಯಕ್ತಿ ತನ್ನನ್ನು ಅಶೋಕ್ ರಾವ್ ಎಂದು ಗುರುತಿಸಿಕೊಂಡಿದ್ದು, ಹಣ ಪಾವತಿಸಿದರೆ ದಾಳಿಯನ್ನು ತಡೆಯುವುದಾಗಿ ಹೇಳಿದ್ದಾನೆ.

ಅವಮಾನಕ್ಕೆ ಹೆದರಿದ ಅಧಿಕಾರಿ, ಆರೋಪಿಗಳು ಹಂಚಿಕೊಂಡ ಖಾತೆ ಸಂಖ್ಯೆಗೆ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆದರೆ ಕರೆ ಸುಲಿಗೆ ಎಂದು ತಿಳಿದಾಗ ಅವರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳನ್ನು ಪೊಲೀಸರು ಬೇಧಿಸಿದ್ದಾರೆ.

Government official lost 1 lakh due to fake Lokayukta attack

ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳಿಗೆ ಹೆದರಿಸಿ ವಸೂಲಿ

ಈ ಹಿಂದೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಹೆದರಿಸಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವಿಜಯನಗರ ಪೊಲೀಸರು ಬಂಧಿಸಿದ್ದರು.

ಪಟ್ಟೇಗಾರಪಾಳ್ಯದ ನಿವಾಸಿ ತ್ಯಾಗರಾಜು ಅಲಿಯಾಸ್ ಬಸವರಾಜು, ಅಲಿಯಾಸ್ ಚಂದ್ರಶೇಖರ (58) ಬಂಧಿತ ಆರೋಪಿ. ಈತನಿಂದ ಒಂದು ಸ್ಕೂಟಿ, ಮೊಬೈಲ್ ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೊಪ್ಪಳದ ಆರ್‌ಟಿಓ ಇನ್ಸ್‌ಪೆಕ್ಟರ್ ಮೂರ್ತಿ ಎಂಬುವರಿಗೆ ಕರೆ ಮಾಡಿ 'ನಿನ್ನ ವಿರುದ್ಧ ದಾಳಿಗೆ ಸಿದ್ಧತೆ ಮಾಡಿದ್ದೇವೆ. 50 ಸಾವಿರ ರೂ. ಕೊಟ್ಟರೆ ದೊಡ್ಡ ಸಾಹೇಬ್ರ ಹತ್ತಿರ ಮಾತನಾಡಿ ಕಡತ ಕ್ಲೋಸ್ ಮಾಡಿಸುತ್ತೇನೆ' ಎಂದು ಚಂದ್ರಶೇಖರ್ ಹೆಸರಿನಲ್ಲಿ ಹೆದರಿಸಿದ್ದ.

ಈ ಬಗ್ಗೆ ಅನುಮಾನಗೊಂಡರೂ, ಆತ ಧರಿಸಿದ್ದ 'ಪೊಲೀಸ್ ಲೋಗೊ ಹೆಲ್ಮೆಟ್' ನೋಡಿ ಮುಂಗಡ 5 ಸಾವಿರ ರೂ. ಕೊಟ್ಟಿದ್ದಾರೆ. ಕಡತ ಕ್ಲೋಸ್ ಮಾಡಿದ ಬಳಿಕ ಉಳಿದ ಮೊತ್ತ ಕೊಡುವ ಬಗ್ಗೆ ಮಾತುಕತೆ ನಡೆದಿದೆ.

Government official lost 1 lakh due to fake Lokayukta attack

ಚಂದ್ರಶೇಖರ್ ಬಗ್ಗೆ ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಿಸಿದರೆ 'ಆ ಹೆಸರಿನವರು ಯಾರೂ ಇಲ್ಲ, ಎಂಬುದು ಖಚಿತವಾಗಿದೆ. ಆರ್‌ಟಿಓ ಇನ್ಸ್‌ಪೆಕ್ಟರ್ ಮೂರ್ತಿ ಈ ಕುರಿತು ವಿಜಯನಗರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆರೋಪಿಯ ಮೊಬೈಲ್ ವಿಳಾಸ ಮಾಹಿತಿ ಆಧರಿಸಿ ಮನೆಯಲ್ಲಿದ್ದ ತ್ಯಾಗರಾಜುನನ್ನು ಲೋಕಾಯುಕ್ತ ಪೊಲೀಸರು ಮತ್ತು ವಿಜಯನಗರ ಸಬ್‌ಇನ್ಸ್‌ಪೆಕ್ಟರ್ ಕೆ.ವೆಂಕಟೇಶ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ತ್ಯಾಗರಾಜು, ನಾನಾ ಹೆಸರಿನಲ್ಲಿ ಒಬ್ಬ ಅಧಿಕಾರಿಗೆ ಒಂದು ಸಲವಷ್ಟೇ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಕೊಡುವುದಾಗಿ ಹೇಳಿದವರಿಗಷ್ಟೇ ಎರಡನೇ ಬಾರಿ ಕರೆ ಮಾಡುತ್ತಿದ್ದ. ಕೊಡದಿದ್ದರೆ, ಎರಡನೆಯ ಬಾರಿ ಕರೆ ಮಾಡುತ್ತಿರಲಿಲ್ಲ. ಹೀಗಾಗಿ ಹಲವಾರು ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬಂದರೂ, ಈತನ ವಿರುದ್ಧ ಯಾರೂ ದೂರು ನೀಡಿರಲಿಲ್ಲ. ಕೊನೆಗೂ ಆತನ ಬಂಧನವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಹಿಂದೆ ಇಂತಹದ್ದೇ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ವೇಷದಲ್ಲಿ ಬಂದಿದ್ದ ಇಬ್ಬರು ಐಡಿ ಕಾರ್ಡ್ ತೋರಿಸಿ ಎಂದಾಕ್ಷಣ ತಾಲೂಕು ಕಚೇರಿಯಿಂದ ಎಸ್ಕೇಪ್ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+