'ನಿನ್ನ ಮೂಗು ದಪ್ಪ ಇದೆ ಮದುವೆಯಾದ್ರೆ ಸ್ನೇಹಿತರ ಮುಂದೆ ಅವಮಾನವಾಗುತ್ತೆ'
ಬೆಂಗಳೂರು, ಜನವರಿ 4: ಬಣ್ಣ ಕಪ್ಪು, ಹುಡುಗ ನೋಡೋಕೆ ಚೆನ್ನಾಗಿಲ್ಲ, ಮೆಳ್ಳಗಣ್ಣು ಹೀಗೆ ಹತ್ತಾರು ಕಾರಣಗಳನ್ನು ಕೊಟ್ಟು ಮದುವೆ ಮುರಿದಿದ್ದನ್ನು ನೋಡಿದ್ದೇವೆ.
ಆದರೆ ಇಲ್ಲೊಬ್ಬಳು ಯುವತಿ ಹುಡುಗನ ಮೂಗು ದಪ್ಪ ಎಂದು ಮದುವೆ ಮುರಿದಿರುವ ಘಟನೆ ನಡೆದಿದೆ.
ಜ್ಯೋತಿ ಪ್ರಕಾಶ್ ಹಾಗೂ ಹಿಮಬಿಂದು ಅವರ ಮದುವೆ ಕೋರಮಂಗಲದಲ್ಲಿ ನಿಶ್ಚಯವಾಗಿತ್ತು. ಮದುವೆ ಹತ್ತಿರ ಬರುತ್ತಿದ್ದಂತೆ ಹುಡುಗಿ ಮದುವೆ ತಯಾರಿ ಬಿಟ್ಟು ವಿದೇಶ ಪ್ರಯಾಣಕ್ಕೆ ತೆರಳಿದ್ದಳು.
ವಿದೇಶದಿಂದ ಬಂದ ಬಳಿಕ ಜ್ಯೋತಿ ಪ್ರಕಾಶ್ ಎಷ್ಟು ಬಾರಿ ಕರೆ ಮಾಡಿದ್ರು ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಯುವತಿಯ ಸಹೋದರಿಗೆ ಕರೆ ಮಾಡಿದಾಗ ಈ ವಿಚಾರವನ್ನು ಜ್ಯೋತಿ ಪ್ರಕಾಶ್‌ಗೆ ತಿಳಿಸಿದ್ದಾರೆ.

ಹಿಮಬಿಂದುಯಿಂದ ಅವಮಾನ ಆಗಿದೆ. ಅಲ್ಲದೆ ನಿಶ್ವಿತಾರ್ಥಕ್ಕೆ 5 ಲಕ್ಷ ಹಣವನ್ನು ಖರ್ಚು ಮಾಡಿದ್ದೀನಿ. ಯುವತಿ ಹಾಗೂ ಆಕೆಯ ಮನೆಯವರು ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಜ್ಯೋತಿ ಪ್ರಕಾಶ್ ದೂರಿನ ಆಧಾರದ ಮೇಲೆ ಹಿಮಬಿಂದು ಮತ್ತು ಆಕೆಯ ಪೋಷಕರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಮ್ಯಾಟ್ರಿಮೋನಿಯಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಈಗಾಗಲೇ ನಿಶ್ಚಿತಾರ್ಥ ಮುಗಿಸಿದ ಜೋಡಿ, ಇದೇ ತಿಂಗಳು ಮದುವೆ ಆಗಬೇಕಿತ್ತು. ಅಷ್ಟರಲ್ಲಿ ಮದುವೆ ಮುರಿದು ಬಿದ್ದಿದೆ.












Click it and Unblock the Notifications