ಸೌರಭ್ ಹತ್ಯೆ: ಅರೆಸ್ಟ್, ಕೊಲೆ ಮಾಡ್ಸಿದ್ದು ಯಾರು ಗೊತ್ತಾ?
ಬೆಂಗಳೂರು, ಜೂನ್ 19: ಕಳೆದ ವಾರ ಎಚ್ಎಸ್ಆರ್ ಲೇಔಟ್ ಅಪಾರ್ಟ್ ಮೆಂಟಿನಲ್ಲಿ ಲಖ್ನೋ ಮೂಲದ ಸೌರಭ್ ರಸ್ತೋಗಿಯ ಹತ್ಯೆ ಮಾಡಿದ್ದವರು ಸಿಕ್ಕಿ ಬಿದ್ದಿದ್ದಾರೆ. ನಾಲ್ಕೇ ದಿನದಲ್ಲಿ ಪ್ರಕರಣ ಭೇಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಸೌರಭ್ ರಸ್ತೋಗಿ ಹತ್ಯೆಯ ರೂವಾರಿ ಬೇರೆ ಯಾರೂ ಅಲ್ಲ. ಸೌರಭ್ ಪತ್ನಿ ಅಂಕಿತಾ. ತನ್ನ ಪ್ರೇಮಿಗಾಗಿ ಈಕೆ ಪತಿಯನ್ನೇ ಹತ್ಯೆಮಾಡಿಸಿದ್ದಾಳೆ ಎಂದು ಟಿವಿ ವರದಿಗಳು ತಿಳಿಸಿವೆ.
ಅಂಕಿತಾ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ಆಕೆಗೆ ಪ್ರೇಮ ವ್ಯವಹಾರವಿತ್ತು. ಇದಕ್ಕೆ ಗಂಡ ಸೌರಭ್ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಗಂಡನನ್ನು ಮುಗಿಸಲು ಹೊಂಚುಹಾಕಿದ ಅಂಕಿತಾ, ತನ್ನ ಪ್ರೇಮಿಯೊಂದಿಗೆ ಕೈಜೋಡಿಸಿ, ಯೋಜನೆಯನ್ನು ಕಾರ್ಯಗತಗೊಳಿಸಿದ್ದಾಳೆ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಂಕಿತಾ, ಪ್ರಿಯಕರ ರಿಶ್ವಿನ್ ಜೈಲುಪಾಲು:
ಸೌರಭ್ ಕತ್ತು ಸೀಳಿ, ಭೀಕರವಾಗಿ ಸಾಯಿಸಲಾಗಿತ್ತು. ಮನೆಯಲ್ಲಿದ್ದ ಚಿನ್ನಾಭರಣ ದೋಚಿ, ಮರ್ಡರ್ ಫಾರ್ ಗೇನ್ ಎಂದು ನಿರೂಪಿಸಲಾಗಿತ್ತು. ಆದರೆ ಇದರಿಂದ ಪೊಲೀಸರ ದಿಕ್ಕುತಪ್ಪಿಸುವುದು ಸಫಲವಾಗಿಲ್ಲ. ಹೆಚ್ಎಸ್ಆರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಕ್ರೈಂ ಪೇದೆ ಸತೀಶ್ ಅವರ ಪರಿಶ್ರಮದಿಂದ ಪತ್ನಿ ಅಂಕಿತಾ ಮತ್ತು ಆಕೆಯ ಪ್ರಿಯಕರ ರಿಶ್ವಿನ್ ಜೈಲುಪಾಲಾಗಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಹಿಂದಿನ ಸುದ್ದಿ: 32 ವರ್ಷದ ಸೌರಭ್ ರಸ್ತೋಗಿ ಜೆನ್ ಪ್ಯಾಕ್ಟ್ ಔಟ್ ಸೋರ್ಸಿಂಗ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದರು. ಇಬ್ಬಲೂರಿನ ಸನ್ ಸಿಟಿ ಅಪಾರ್ಟ್ ಮೆಂಟಿನಲ್ಲಿ 8ನೇ ಮಹಯಡಿಯಲ್ಲಿ ಎರಡೂವರೆ ವರ್ಷದಿಂದ ಪತ್ನಿಯ ಜತೆ ವಾಸವಾಗಿದ್ದರು. ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಸೌರಭ್, ವಾರದ ಹಿಂದಷ್ಟೇ ನಗರಕ್ಕೆ ಹಿಂದಿರುಗಿದ್ದರು.
3 ದಿನದ ಹಿಂದೆ ಪತ್ನಿ ಅಂಕಿತಾ ಪುಣೆಯಲ್ಲಿರುವ ಸೋದರನ ಮನೆಗೆ ತೆರಳಿದ್ದರಿಂದ ಅಪಾರ್ಟ್ ಮೆಂಟಿನಲ್ಲಿ ಸೌರಭ್ ಒಬ್ಬರೇ ಇದ್ದರು. ಶನಿವಾರ ತಡ ರಾತ್ರಿ ದುಷ್ಕರ್ಮಿಗಳು ಸಲೀಸಾಗಿ ಮನೆಯೊಳಕ್ಕೆ ಪ್ರವೇಶ ಪಡೆದಿದ್ದು, ಸೌರಭ್ ಮೇಲೆ ಭೀಕರವಾಗಿ ಹಲ್ಲೆ ಮಾಡಿ, ತೀವ್ರ ಪ್ರತಿರೋಧದ ನಡುವೆ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ.
ಸೌರಭ್ ರಾತ್ರಿ 10 ಗಂಟೆಯಲ್ಲಿ ನೆರೆಮನೆಯವರೊಂದಿಗೆ ಮಾತನಾಡಿದ್ದಾರೆ. ಆದರೆ 10.30ರ ಬಳಿಕ ಪತ್ನಿ ಅಂಕಿತಾ ಹಲವು ಬಾರಿ ಪತಿ ಸೌರಭ್ ಮೊಬೈಲಿಗೆ ಕರೆ ಮಾಡಿದ್ದಾರೆ. ಆದರೆ ಅವರ ಕರೆಗಳು ನಿರುತ್ತರವಾಗಿವೆ. ತಡಮಾಡದೆ ಅಪಾರ್ಟ್ ಮೆಂಟಿನಲ್ಲಿ ವಾಸವಾಗಿರುವ ಪರಿಚಿತ ಮೃನಾಲ್ ಎಂಬುವವರಿಗೆ ಕರೆ ಮಾಡಿದ ಅಂಕಿತಾ, ತಮ್ಮ ಮನೆಗೆ ಹೋಗಿ ಪತಿಯ ಬಗ್ಗೆ ಸ್ವಲ್ಪ ವಿಚಾರಿಸ್ತೀರಾ ಎಂದು ವಿನಂತಿಸಿದ್ದಾರೆ.
ಅದರಂತೆ ಸೌರಬ್ ಮನೆಗೆ ಬಂದ ಮೃನಾಲ್ ಹಲವು ಬಾರಿ ಕಾಲಿಂಗ್ ಬೆಲ್ ಒತ್ತಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ, ಸೌರಬ್ ನಿದ್ರೆಗೆ ಜಾರಿರಬಹುದು ಎಂದು ಬಗೆದ ಮೃನಾಲ್ ವಾಪಸಾಗಿದ್ದಾರೆ. ಇತ್ತ, ಆತಂಕದಲ್ಲೇ ರಾತ್ರಿ ಕಳೆದ ಅಂಕಿತಾ ಭಾನುವಾರ ಬೆಳಗಾಗುತ್ತಿದ್ದಂತೆಯೇ ಮತ್ತೆ ಪತಿ ಸೌರಭ್ ಮೊಬೈಲಿಗೆ ಕರೆ ಮಾಡಿದ್ದಾರೆ. ಮತ್ತೆ ಉತ್ತರವಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಅಂಕಿತಾ ಮತ್ತೆ ಮೃನಾಲ್ ಮೊರೆಹೋಗಿದ್ದಾರೆ.
ಮೃನಾಲ್ ಮತ್ತೆ ಮತ್ತೆ ಸೌರಭ್ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆಗ ಅಪಾಯದ ಸುಳಿವರಿತ ಮೃನಾಲ್, ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದವರೇ ಬಾಗಿಲನ್ನು ಒಡೆದು ಒಳಪ್ರವೇಶಿಸಿದ್ದಾರೆ. ನಡುಮನೆಯಲ್ಲಿ ರಸಕ್ತದ ಮಡುವಿನಲ್ಲಿ ಸೌರಭ್ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಮನೆಯೆಲ್ಲಾ ಜಾಲಾಡಿದ್ದು, ವಸ್ತಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡುಬಂದಿದೆ. ಚಿನ್ನ, ಹಣ ದೋಚಿರುವ ಸಾಧ್ಯತೆಯಿದೆ. ಪತ್ನಿ ಅಂಕಿತಾಗೆ ವಿಷಯ ತಿಳಿಸಿರುವ ಪೊಲೀಸರು ಆಕೆಯಿಂದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಈ ಮಧ್ಯೆ, ಶನಿವಾರ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದ್ದ ಸೌರಭ್, ರಾತ್ರಿ ತಮ್ಮ ಮನೆಗೆ ಇಬ್ಬರು ಸ್ನೇಹಿತರು ಬರುತ್ತಿರುವುದಾಗಿ ಹೇಳಿದ್ದಾರೆ. ಮತ್ತೊಂದು ವಿಷಯವೆಂದರೆ ದುಷ್ಕರ್ಮಿಗಳು ಬಲವಂತವಾಗಿ ಸೌರಭ್ ಮನೆ ಪ್ರವೇಶಿಸಿರುವ ಕುರುಹುಗಳಿಲ್ಲ. ಹಾಗಾಗಿ ಪರಿಚಿತರೇ ಹತ್ಯೆ ಮಾಡಿರುವ ಸಾಧ್ಯತೆಯಿದೆ. ಸೌರಭ್, ತೀವ್ರ ಪ್ರತಿರೋಧ ತೋರಿರುವ ಕುರುಹುಗಳು ಕಂಡಿವೆ ಎಂದು ಪೊಲೀಸರು ಲೆಕ್ಕಾಚಾರ ಹಾಕಿದ್ದಾರೆ.
ಸೌರಭ್ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು, ಕರೆಗಳ ಜಾಡು ಜಾಲಾಡುತ್ತಿದ್ದಾರೆ. ಆರೋಪಿಗಳ ಪತ್ತೆಗೆ 2 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications