ಜಿಬಿಎ ಎಡವಟ್ಟಿಗೆ ಆಕ್ರೋಶ: ಈ ಕಾರಣಕ್ಕೆ ಬೆಂಗಳೂರು ಬಂದ್‌ಗೆ ಕರೆ!
Bengaluru Bandh: ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬದಲಾಗಿ, ಗ್ರೇಟರ್ ಬೆಂಗಳೂರು ಆಡಳಿತ ಪ್ರಾರಂಭವಾಗಿದೆ. ಗ್ರೇಟರ್ ಬೆಂಗಳೂರು ಆಡಳಿತವು ರಚನೆಯಾದ ಮೇಲೆ ಬೆಂಗಳೂರಿನಲ್ಲಿ ಹಲವು ಮಹತ್ವದ ಬದಲಾವಣೆಗಳು ನಡೆದಿವೆ. ಅಲ್ಲದೇ ಮುಖ್ಯವಾಗಿ ಬೆಂಗಳೂರಿನಲ್ಲಿ ಕಸ ಹಾಗೂ ರಸ್ತೆಗುಂಡಿಗಳ ಪರಿಹಾರಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳು ಹೇಳುತ್ತಿವೆ. ಆದರೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳು ಹಾಗೂ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ಧಾರದಿಂದ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ಮಾಡುವ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ನಿತ್ಯವೂ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಅಲ್ಲದೇ ಒಂದು ದಿನ ಬಂದ್ ಎಂದರೆ ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಎಂದೇ ಅರ್ಥ. ಅಲ್ಲದೇ ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಈಗಾಗಲೇ ಬೆಂಗಳೂರಿನ ವಿವಿಧ ಭಾಗದಲ್ಲಿ ವ್ಯಾಪಾರ ಹಾಗೂ ವಹಿವಾಟಿಗೆ ಹಿನ್ನಡೆ ಆಗಿದೆ.

ಇದೀಗ ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿರುವ ಎಡವಟ್ಟನ್ನು ವಿರೋಧಿಸಿ, ಬೆಂಗಳೂರು ಬಂದ್‌ಗೆ ಕರೆ ನೀಡುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಜಿಬಿಎ ಕಠಿಣ ಕಾನೂನು ಕ್ರಮಕ್ಕೆ ಬೆಂಗಳೂರು ಸ್ಥಳೀಯ ಆಡಳಿತ ಹಾಗೂ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಾಟಾಳ್ ನಾಗರಾಜ್ ಅವರು ವಿರೋಧಿಸಿದ್ದಾರೆ. ಕಸ ಹಾಕುವವರ ಮನೆಯ ಮುಂದೆಯೇ ಕಸ ತಂದು ಸುರಿಯುತ್ತೇವೆ ಎಂದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಣಕವಾಗಿದೆ. ಈ ರೀತಿ ಮಾಡುವುದು ತಪ್ಪು ಎಂದು ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಬೆಂಗಳೂರು ಬಂದ್‌ಗೆ ಕರೆ ನೀಡುವುದಾಗಿಯೂ ಅವರು ಹೇಳಿದ್ದಾರೆ.
ಜಿಬಿಎ ಮುಂದೆ ಕಸ ಸುರಿದು ಪ್ರತಿಭಟನೆ: ಇನ್ನು ಬೆಂಗಳೂರಿನಲ್ಲಿ ಜನರ ಮನೆಯ ಮುಂದೆ ಕಸ ಸುರಿಯುವ ಜಿಬಿಎ ನಿರ್ಧಾರವನ್ನು ವಿರೋಧಿಸಿರುವ ವಾಟಾಳ್ ನಾಗರಾಜ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಂದೆ ಕಸ ಸುರಿದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಜಿಬಿಎ ಕೇಂದ್ರ ಕಚೇರಿಯ ಮುಂದೆ ವಾಟಾಳ್ ನಾಗರಾಜ್ ಅವರು ಗೋಣಿಚೀಲದಲ್ಲಿ ಕಸ ತಂದು ಸುರಿಯಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಹೈಡ್ರಾಮಾ ಸೃಷ್ಟಿ ಆಗಿತ್ತು. ಕಸ ಸುರಿಯುವುದಕ್ಕೆ ಬೆಂಗಳೂರು ಪೊಲೀಸರು ಅಡ್ಡಿಪಡಿಸಿದ್ದು, ಕಸದ ಚೀಲವನ್ನು ಕಿತ್ತುಕೊಂಡಿದ್ದಾರೆ.












Click it and Unblock the Notifications