GBA: ಬೆಂಗಳೂರಿನ ಬೆಳ್ಳಂದೂರು ಕೆರೆಯಿಂದ ವರ್ತೂರು ಕೋಡಿವರೆಗೆ ಬಫರ್ ರಸ್ತೆ ಅಭಿವೃದ್ಧಿ

GBA: ಬೆಂಗಳೂರಿನ ಬೆಳ್ಳಂದೂರು ಕೆರೆಯಿಂದ ವರ್ತೂರು ಕೋಡಿವರೆಗೆ ಬಫರ್ ರಸ್ತೆ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ ಮುಂದಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ-ಸ್ಮೈಲ್ ವತಿಯಿಂದ ಕೈಗೊಂಡಿರುವ ವಿವಿಧ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಮತ್ತು ಗುಣಮಟ್ಟದ ಕುರಿತು ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಬಿ ಸ್ಮೈಲ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಮುನ್ನ ರಸ್ತೆ, ಪಾದಚಾರಿ ಮಾರ್ಗ, ಡ್ರೈನೇಜ್ ಹಾಗೂ ಯುಟಿಲಿಟಿ ಚೇಂಬರ್‌ಗಳಲ್ಲಿರುವ ಎಲ್ಲಾ ದೋಷಗಳನ್ನು ಸರಿಪಡಿಸಬೇಕು. ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

GBA

GBA: ರಸ್ತೆ ಹಾಳಾಗದಂತೆ ಯುಟಿಲಿಟಿ ಡಕ್ಟ್‌ ರೂಪಿಸಿ

ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ರಸ್ತೆ ಅಗೆದು ಕೇಬಲ್ ಅಥವಾ ಇತರೆ ಯುಟಿಲಿಟಿ ಕಾಮಗಾರಿ ಕೈಗೊಳ್ಳುವ ಪರಿಸ್ಥಿತಿ ಉಂಟಾಗದಂತೆ ಮುಂಚಿತವಾಗಿಯೇ ಯೋಜನೆ ರೂಪಿಸಬೇಕು. ಅಗತ್ಯವಿರುವ ಕಡೆ ಯುಟಿಲಿಟಿ ಡಕ್ಟ್ ವ್ಯವಸ್ಥೆ ಕಲ್ಪಿಸುವ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಭವಿಷ್ಯದಲ್ಲಿನ ಮಳೆ ಪ್ರಮಾಣ, ತಗ್ಗುಪ್ರದೇಶ ಹಾಗೂ ನೀರಿನ ಹರಿವಿನ ದಿಕ್ಕಿಗೆ ಅನುಗುಣವಾಗಿ ಡ್ರೈನೇಜ್ ಸಾಮರ್ಥ್ಯವನ್ನು ರೂಪಿಸುವಂತೆ ಹಾಗೂ ಅಸ್ತಿತ್ವದಲ್ಲಿರುವ ಡ್ರೈನೇಜ್ ವ್ಯವಸ್ಥೆಯೊಂದಿಗೆ ಹೊಸ ಕಾಮಗಾರಿಗಳನ್ನು ಸಮರ್ಪಕವಾಗಿ ಸಂಪರ್ಕಿಸಿ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವರ್ತೂರು ಕೋಡಿಯಿಂದ ಎಚ್‌ಎಎಲ್‌ವರೆಗೆ ಹಾಗೂ ಹೂಡಿಯಿಂದ ಐಟಿಪಿಎಲ್‌ವರೆಗೆ ಕೈಗೊಳ್ಳಲಾಗುತ್ತಿರುವ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ, ಒ.ಎಫ್.ಸಿ ಹಾಗೂ ಗೇಲ್ ಗ್ಯಾಸ್ ಕಾಮಗಾರಿಗಳಿಂದ ಹಾನಿಗೊಳಗಾದ ಪಾದಚಾರಿ ಮಾರ್ಗಗಳನ್ನು ಪುನರ್‌ಸ್ಥಾಪಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ನಿರ್ದೇಶನ ನೀಡಿದ್ದಾರೆ.

ಬಫರ್ ರಸ್ತೆ ಅಭಿವೃದ್ಧಿಗೆ ಮರುಸಮೀಕ್ಷೆ

ಬೆಳ್ಳಂದೂರು ಕೆರೆಯಿಂದ ವರ್ತೂರು ಕೋಡಿವರೆಗೆ ಬಫರ್ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಸಮೀಕ್ಷೆ ಹಾಗೂ ಗಡಿ ಗುರುತಿಸುವಿಕೆಯನ್ನು ಮರುಪರಿಶೀಲಿಸುವಂತೆ ಭೂ ಮಾಪನ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಯಿತು. ಕಳೆದ 25 ವರ್ಷಗಳಲ್ಲಿ ಆಗಿರುವ ಮಳೆ ಪ್ರಮಾಣದ ಅಂಕಿ-ಅಂಶಗಳನ್ನು ಆಧರಿಸಿ ರಾಜಕಾಲುವೆಯ ಅಗಲವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಅಲ್ಲದೆ ಇದೇ ಸಂದರ್ಭದಲ್ಲಿ ಬಿ-ಸ್ಮೈಲ್ ಕಾಮಗಾರಿಗಳು ನಗರದ ದೀರ್ಘಕಾಲೀನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಾರ್ವಜನಿಕರ ಸುರಕ್ಷತೆ ಹಾಗೂ ಅನುಕೂಲಕ್ಕೆ ಆದ್ಯತೆ ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಯುಕ್ತರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+