ಗೌರಿ ಹತ್ಯೆ ಆರೋಪಿಗಳಿಗೆ ಎಸ್‌ಐಟಿಯಿಂದ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್'?

Recommended Video

      ಗೌರಿ ಲಂಕೇಶ್ ಹಂತಕರಿಗೆ ಸಿಕ್ತು ಥರ್ಡ್ ಡಿಗ್ರಿ ಟ್ರೀಟ್ಮೆಂಟ್

      ಬೆಂಗಳೂರು, ಜೂನ್ 19: ಗೌರಿ ಹತ್ಯೆ ಆರೋಪಿಗಳಿಗೆ ಎಸ್‌ಐಟಿ ಪೊಲೀಸರು 'ಥರ್ಡ್ ಡಿಗ್ರಿ ಟ್ವೀಟ್‌ಮೆಂಟ್' ನೀಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳಿಗೆ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದೆ.

      ಗೌರಿ ಹತ್ಯೆ ಆರೋಪಿಗಳಾದ ಅಮೋಲ್ ಕಾಳೆ, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ ಯಡವೆ, ರಾಮಚಂದ್ರ ದೆಗ್ವೇಕರ್ ಅವರುಗಳಿಗೆ ವಿಚಾರಣೆ ವೇಳೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಗಳ ಪರ ವಕೀಲ ರಿಟ್ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು.

      ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಕೆ.ಎನ್.ಫಣೀಂದ್ರ, ಈ ಕುರಿತು ದಾಖಲೆಗಳನ್ನು ಪರಿಶೀಲಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದೆ.

      Gauri Murder accused filed RIT application to high court

      ಅರ್ಜಿದಾರರಿಗೆ ಪೊಲೀಸರು ನೀಡಿರುವ ಚಿತ್ರಹಿಂಸೆಯ ಬಗ್ಗೆ 1 ಮತ್ತು 3ನೇ ಎಸಿಎಂಎಂ ಕೋರ್ಟ್‌ ಗಮನಕ್ಕೆ ತರಲಾಗಿದೆ. ಆದರೂ, ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಆದೇಶಿಸಿಲ್ಲ' ಎಂದು ಆಕ್ಷೇಪಿಸಿದ್ದರು.

      ಆರೋಪಿಗಳ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ಪರ ವಕೀಲ ರಾಚಯ್ಯ, ಆರೋಪಿಗಳನ್ನುಇ ಈಗಾಗಲೇ ಹಲವು ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಆದರೆ ಅವರು ಇದರ ಬಗ್ಗೆ ಒಮ್ಮೆಯೂ ನ್ಯಾಯಾಧೀಶರ ಗಮನಕ್ಕೆ ತಂದಿಲ್ಲ' ಎಂದರು.

      ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಸೂಚನೆ ನೀಡಿರುವುದರಿಂದ ವಿಚಾರಣಾ ನ್ಯಾಯಾಲಯವು ಆರೋಪಿಗಳ ವೈದ್ಯಕೀಯ ಪರೀಕ್ಷೆ ಹಾಗೂ ಹೇಳಿಕೆ ದಾಖಲಿಗೆ ಎಸ್‌ಐಟಿಗೆ ಸೂಚಿಸಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+