Get Updates
Get notified of breaking news, exclusive insights, and must-see stories!

ಗೌರಿ ಲಂಕೇಶ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ 3 ರೇಖಾಚಿತ್ರ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 14: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ ನಲವತ್ತು ದಿನದ ನಂತರ ಮಹತ್ವದ ಸುಳಿವೊಂದನ್ನು ಶನಿವಾರ ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಬಿಡುಗಡೆ ಮಾಡಿದ್ದಾರೆ. ಇಬ್ಬರು ಶಂಕಿತ ಆರೋಪಿಗಳ ಮೂರು ರೇಖಾಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅವರು, ತನಿಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಮಾಧ್ಯಮದ ಎದುರು ಹೇಳಿದ ಪ್ರಮುಖ ಅಂಶಗಳು ಹೀಗಿವೆ.

Gauri Lankesh murder: Three suspects sketch released by SIT

* ನಮಗೆ ಶಂಕಿತರ ರೇಖಾಚಿತ್ರ ಬಿಟ್ಟು ಯಾವುದೇ ಮಾಹಿತಿ ಇಲ್ಲ.

* ವೃತ್ತಿಪರ ಹಂತಕರೇ ಕೊಲೆ ಮಾಡಿರುವ ಶಂಕೆ ಇದೆ.

* ಗೌರಿ ಲಂಕೇಶ್ ಅವರ ವೈಯಕ್ತಿಕ, ವೃತ್ತಿಪರ ಹಾಗೂ ಸಾಮಾಜಿಕ ಕಾರ್ಯಕರ್ತೆ ಹೀಗೆ ಮೂರು ಆಯಾಮಗಳಿಂದಲೂ ಈ ಪ್ರಕರಣದ ತನಿಖೆ ನಡೆಯುತ್ತಿದೆ.

* ಆರೋಪಿಗಳ ವಯಸ್ಸು ಇಪ್ಪತ್ತೈದರಿಂದ ಮೂವತ್ತೈದು ಇರಬಹುದು.

* ಗೌರಿ ಲಂಕೇಶ್ ಹತ್ಯೆಗೆ ನಾಡ ಪಿಸ್ತೂಲು ಬಳಕೆ ಮಾಡಲಾಗಿದೆ.

* ಸಾರ್ವಜನಿಕರ ಮಾಹಿತಿ, ಸಿಸಿ ಟಿವಿ ಫೂಟೇಜ್ ಸಹಾಯದಿಂದ ಈ ರೇಖಾಚಿತ್ರ ಬಿಡಿಸಲಾಗಿದೆ.

* ಆರೋಪಿಗಳು ಮೂರು ದಿನ ಬೆಂಗಳೂರಿನಲ್ಲಿದ್ದು, ಗೌರಿ ಲಂಕೇಶ್ ಅವರ ಮನೆಯ ಹತ್ತಿರ ಕೂಡ ಬಂದು ಹೋಗಿದ್ದಾರೆ.

* ಬೈಕ್ ನಲ್ಲಿ ಬಂದವರ ಹೆಲ್ಮೆಟ್ ನ ಗಾಜು ಮೇಲಕ್ಕೆ ಸರಿದಾಗ ಅಥವಾ ಅವರೇ ತೆರೆದಾಗ ಕೂಡ ಕೆಲವು ಚಿತ್ರ ದೊರೆತಿವೆ.

* ಕೊಲೆ ನಡೆದ ದಿನ ಇಬ್ಬರು ಮನೆಗೆ ಬಂದಿರುವ ಸಾಧ್ಯತೆಯಿದೆ.

* ಈ ವರೆಗೆ ಇನ್ನೂರೈವತ್ತಕ್ಕೂ ಹೆಚ್ಚು ಮಂದಿ ವಿಚಾರಣೆ ನಡೆಸಲಾಗಿದೆ.

* ಈ ಹಿಂದಿನ ವಿಚಾರವಾದಿಗಳ ಕೊಲೆಗೂ ಗೌರಿ ಹತ್ಯೆಗೂ ಹೋಲಿಕೆ ಇಲ್ಲ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+