ಗಣೇಶ ಚತುರ್ಥಿ: ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು
ಬೆಂಗಳೂರು, ಸೆಪ್ಟೆಂಬರ್ 8: ಗಣೇಶ ಚತುರ್ಥಿಯ ಅಂಗವಾಗಿ ಯಶವಂತಪುರದಿಂದ ಬೆಳಗಾವಿಗೆ ವಿಶೇಷ ರೈಲು ವ್ಯವಸ್ಥೆಯನ್ನು ನೈಋತ್ಯ ರೈಲ್ವೆ ಇಲಾಖೆ ಮಾಡಿದೆ.
ಈಗಾಗಲೇ ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವ ರೈಲುಗಳು ಸಾಮಾನ್ಯ ದಿನಗಳಲ್ಲಿಯೇ ಅತಿ ಹೆಚ್ಚು ಜನದಟ್ಟಣೆಯನ್ನು ಹೊಂದಿರುತ್ತದೆ, ಸಾಮಾನ್ಯ ದಿನಗಳಲ್ಲಿ ಕೂಡ ರೈಲು ಸಂಚಾರವನ್ನು ಹೆಚ್ಚಳ ಮಾಡುವಂತೆ ರೈಲ್ವೆ ಬಳಕೆದಾರರ ಸಂಘ ಹಾಗೂ ಪ್ರಯಾಣಿಕರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ.
ಇದೀಗ ಗೌರಿ-ಗಣೇಶ ಹಬ್ಬದ ಅಂಗವಾಗಿ ಸೆಪ್ಟೆಂಬರ್ 12ರಂದು ರಾತ್ರಿ 8.45ಕ್ಕೆ ಹೊರಡುವ ರೈಲು(065581) ಮರು ದಿನ ಬೆಳಗ್ಗೆ 8.10ಕ್ಕೆ ಬೆಳಗಾವಿ ತಲುಪಲಿದೆ.

ಸೆಪ್ಟೆಂಬರ್ 16ರಂದು ಸಂಜೆ 5.20ಕ್ಕೆ ಬೆಳಗಾವಿಯಿಂದ ಹೊರಡುವ ರೈಲು(06582) ಮರುದಿನ ಬೆಳಗ್ಗೆ 5 ಗಂಟೆಗ ಯಶವಂತಪುರ ತಲುಪಲಿದೆ.ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿದೆ.
ಈಗಾಗಲೇ ಸರ್ಕಾರಿ ಬಸ್‌ಗಳು ಹಾಗೂ ರೈಲುಗಳು ಫುಲ್ ಆಗಿವೆ, ಇನ್ನು ಖಾಸಗಿ ಬಸ್‌ಗಳು 600-700ರೂ ಪ್ರಯಾಣ ದರ ಏರಿಕೆ ಮಾಡಿದೆ. ಹಾಗಾಘಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದರಿಂದ ನೈಋತ್ಯ ರೈಲ್ವೆಯು ಎರಡು ದಿನ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಿದೆ.












Click it and Unblock the Notifications