ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

G20 Summit : ಬೆಂಗಳೂರಲ್ಲಿ ಡಿ.13ಕ್ಕೆ ಜಿ20 ಸಮ್ಮಿಟ್, ಪೂರ್ವಭಾವಿ ಸಭೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 05: ಭಾರತ ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಡಿಸೆಂಬರ್ 13 ರಿಂದ 15 ರ ವರೆಗೆ ಬೆಂಗಳೂರಿನಲ್ಲಿ ಜಿ-20 ಮೊದಲ ಹಂತದ 'ಶೃಂಗಸಭೆ' ನಡೆಯಲಿದೆ. ಈ ಸಂಬಂಧ ನಗರದಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಡಿಸೆಂಬರ್ 13 ರಿಂದ 15ರವರೆಗೆ ಮೂರು ದಿನ 'ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಪ್ರತಿನಿಧಿಗಳ ಸಭೆ ನಡೆಯಲಿದೆ. ಡಿಸೆಂಬರ್ 16 ಮತ್ತು 17 ರಂದು ಎರಡು ದಿನ ಜಿ 20 ಚೌಕಟ್ಟು ನಿರೂಪಣೆಗೆ ಸಂಬಂಧಿಸಿದ ತಂಡದ ಸಭೆ ಜರುಗಲಿದೆ.

ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮ

ಡಿಸೆಂಬರ್ 1 ರಂದು ಭಾರತ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಅಧಿಕೃತವಾಗಿ ವಹಿಸಿಕೊಂಡಿತು. ಈ ಪೈಕಿ ಹೈದ್ರಾಬಾದ್, ಬೆಂಗಳೂರು ಸೇರಿದಂತೆ ದೇಶಾದ್ಯಂತ ಸುಮಾರು 200 ಸಭೆಗಳು ನಡೆಯುವ ಸಾಧ್ಯತೆಯಿದೆ. ಅದರಲ್ಲಿ ಬೆಂಗಳೂರಿನಲ್ಲಿ ಜಿ 20 ಮೊದಲ ಹಂತದ ಶೃಂಗಸಭೆ ನಡೆಯಲಿದೆ ಎಂದು ಉನ್ನತ ಮಟ್ಟದ ಸಭೆ ಪಾಲ್ಗೊಂಡಿದ್ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

G20 Summit 1st Meeting held in Bengaluru G20 Summit 1st Meeting

ಸಭೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರಲ್ಲಿ ಜಿ20 ಶೃಂಗ ಸಭೆ ನಡೆಯುವ ಕುರಿತ ಮಾಹಿತಿ, ಪೂರ್ವಭಾವಿ ಸಭೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

English summary
G20 Summit 1st Meeting held in Bengaluru on December 13 to 15th,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X