ಡಿಕೆ ಶಿವಕುಮಾರ್ ಸೂಚನೆಗೆ ಬಿಜೆಪಿ ಪಾದಯಾತ್ರೆ ಆಯೋಜನೆ: ಜಿ.ಪಮರೇಶ್ವರ್ ಹೇಳಿದ್ದೇನು?
ಬೆಂಗಳೂರು, ಜುಲೈ 30: ರಾಜಧಾನಿ ಬೆಂಗಳೂರಿಗೆ ಬಂದು, ಅವಧಿ ಮುಗಿದರೂ ಇಲ್ಲಿಯೇ ನೆಲೆಯೂರುವ ಬಾಂಗ್ಲಾದೇಶದ ನುಸುಳುಕೋರರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಸುರಿಯುತ್ತಿವೆ ಮಳೆಯಿಂದಾಗಿ ಉಂಟಾದ ನೆರೆ, ಪ್ರವಾಹ ಪ್ರದೇಶಗಳ ಭೇಟಿ, ಸಿಎಂ ಮತ್ತು ಡಿಸಿಎಂ ದೆಹಲಿ ಭೇಟಿ ವೇಳೆ ಸಚಿವರಿಗೆ ಆಹ್ವಾನ ಸೇರಿದಂತೆ ಕೆಲವು ಮಹತ್ವದ ವಿಚಾರಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಸುದ್ದಿಗಾರರ ಜೊತೆಗೆ ಮಂಗಳವಾರ ಮಾತನಾಡಿದ ಸಚಿವರು, ಬಾಂಗ್ಲಾದೇಶಿಗರು ಎಂದು ಹೇಳಿಕೊಂಡು ಬೆಂಗಳೂರಿಗೆ ಬರುತ್ತಾರೆ. ಯಾರೆಲ್ಲ ಬಾಂಗ್ಲಾದೇಶೀಯರು ಬೆಂಗಳೂರಿನಲ್ಲಿದ್ದಾರೋ ಅವರನ್ನು ಗುರುತಿಸುವ ಕಾರ್ಯಾ ಮಾಡಲಿದ್ದಾರೆ. ಸೂಕ್ತ ದಾಖಲಾತಿ ಇಲ್ಲದೇ ಬೆಂಗಳೂರಿನಲ್ಲಿ ನೆಲೆಯೂರಿದವರನ್ನು ಬಂಧಿಸಲಾಗುವುದು ಎಂದರು.

ಸೂಕ್ತ ದಾಖಲಾತಿ ಹೊಂದಿಲ್ಲದವರನ್ನು ಬಂಧಿಸಿ ಡಿಟೆಂನ್ಷನ್ ಸೆಂಟರ್ ಕಳುಹಿಸುತ್ತೇವೆ. ಅಲ್ಲಿಗೆ ಕಳುಹಿಸಿದ ಮೇಲೆ ಬಾಂಗ್ಲಾದೇಶ ಹೈಕಮಿಷನ್ ಮಾಹಿತಿ ಕೊಡುತ್ತೇವೆ. ಇದು ನಿರಂತರವಾಗಿ ನಡೆಯುವ ಕೆಲಸವಾಗಿದ್ದು, ನಾವೇನು ಯಾರನ್ನು ಹೊಡೆಯುವುದಾಗಲಿ ಮಾಡುವುದಿಲ್ಲ. ಅವರನ್ನು ಕೇಸ್ ಹಾಕಿ ಜೈಲಿಗೆ ಕಳುಹಿಸಲು ಆಗಲ್ಲ ಎಂದು ಹೇಳಿದರು.
ಪ್ರವಾಹ ಸ್ಥಳಗಳಿಗೆ ಭೇಟಿ ಬಗ್ಗೆ ಏನಂದ್ರು?
ಬಿಜೆಪಿಯಿಂದ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕುರಿತು ಮಾತನಾಡಿದ ಅವರು, ಈ ಮೊದಲೇ ಪ್ರತಿಪಕ್ಷಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡಬೇಕಿತ್ತು. ಆದರೆ ಆಗ ಭೇಟಿ ನೀಡಲಿಲ್ಲ ಎಂದು ಈಗ ಭೇಟಿ ನೀಡುತ್ತಿದ್ದಾರೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಸ್ಥಳಗಳಲ್ಲೇ ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಪ್ರವಾಹ ಪೀಡಿದ ಪ್ರದೇಶಗಳ ಜನರಿಗೆ ಎಲ್ಲ ರೀತಿಯಲ್ಲೂ ನಿರಂತರ ಪರಿಹಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಡಿಕೆಶಿ ಸೂಚನೆ ಮೇರೆಗೆ ಬಿಜೆಪಿ ಪಾದಯಾತ್ರೆ ಹೇಳಿಕೆ
ಡಿಸಿಎಂ ಡಿಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗೆ ಗೃಹ ಸಚಿವರ ವ್ಯಂಗ್ಯವಾಡಿದರು. ಬಿಜೆಪಿಯವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿದೆ. ನಮಗೆ ಬುದ್ಧಿ ಹೇಳುವ ಅಗತ್ಯವಿಲ್ಲ.
ಮೂರು ಬಾಗಿಲೋ ಆರು ಬಾಗಿಲೋ ಎಂದು ಹೇಳುವ ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳು ಇವೆ ಎಂದು ನಮಗೂ ಗೊತ್ತಿಲ್ಲ. ವರ ಪಕ್ಷದ ವಿಚಾರ ನಾವು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಅವರು ತಿರುಗೇಟು ಕೊಟ್ಟರು.
ಇನ್ನೂ ರಾಜ್ಯ ಸಂಪುಟ ಪುನಾರಚನೆ ಚರ್ಚೆ ವಿಚಾರವು, ಸಿಎಂ ಹಾಗೂ ಡಿಸಿಎಂ ಅವರಿಗೆ ಬಿಟ್ಟದ್ದು, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಸೇರಿದಂತೆ ವರಿಷ್ಠರ ಭೇಟಿ ವಿಚಾರ, ಯಾವ ಸಚಿವರನ್ನು ಕರೆದಿಲ್ಲ. ನಾಯಕರು ದೆಹಲಿಗೆ ಹೋಗುವುದು ಸಾಮಾನ್ಯ. ಹೈಕಮಾಂಡ್ ಆಹ್ವಾನದ ಮೇರೆಗೆ ಹೋಗಿ ಬರುತ್ತೇವೆ. ಅಲ್ಲಿ ನಾಯಕರು ರಾಹುಲ್ ಗಾಂಧಿಯವರನ್ನೂ ಪ್ರ್ಯತ್ಯೇಕವಾಗಿ ಭೇಟಿ ಮಾಡುತ್ತಾರೆ. ಸಚಿವರನ್ನು ಬಿಟ್ಟು ಸಿಎಂ, ಡಿಸಿಎಂ ಅವರ ಮಾತ್ರವೇ ದೆಹಲಿ ಬೇಟಿ ಬಗೆಗಿನ ಸುದ್ದಿಗಾರರ ಪ್ರಶ್ನೆಯನ್ನು ತಳ್ಳಿಹಾಕಿದರು. ಎಂದರು.
ಬಿಜೆಪಿ ಪಾದಯಾತ್ರೆಗೆ ಗೃಹ ಸಚಿವರ ಎಚ್ಚರಿಕೆ
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ನೀಡದ ವಿಚಾರ, ಸರ್ಕಾರ ಪಾದಯಾತ್ರೆಗೆ ಅನುಮತಿ ನೀಡಿಲ್ಲ ಎಂದು ತಿಳಿಸಿದೆ. ಪ್ರತಿಭಟನೆ ಅವರ ಹಕ್ಕು ಮಾಡಲಿ. ಈ ಹಿಂದೆ ಬಿಜೆಪಿ ಸರ್ಕಾರ ನಮಗೆ ಅನುಮತಿ ಕೊಟ್ಟಿರಲಿಲ್ಲ. ಜನರಿಗೆ ತೊಂದರೆ ಆಗದಂತೆ ಪಾದಯಾತ್ರೆ ಮಾಡುವವರಿಗೆ ಸರ್ಕಾರ ತೊಂದರೆ ಕೊಡಲ್ಲ. ಬೆದರಿಕೆ ಹಾಕಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ ನವರು ಪಾದಯಾತ್ರೆ ಮಾಡುವುದಿಲ್ಲ. ಆದರೆ ಜನರಿಗೆ ನೈಜ ಸಂಗತಿ ಏನೆಂದು ತಿಳಿಸಬೇಕು ತಿಳಿಸುತ್ತೇವೆ. ಸಮಾವೇಶದ ಮಾದರಿಯಲ್ಲಿ ಜನರಿಗೆ ಏನು ತಿಳಿಸಬೇಕೋ ತಿಳಿಸುತ್ತೇವೆ. ಅವರು ಪಾದಯಾತ್ರೆ ಮಾಡಿಕೊಳ್ಳಲಿ, ಆದರೆ ಜನರಿಗೆ ತೊಂದರೆ ಆದ್ರೆ ಮಾತ್ರ ಸುಮ್ಮನೆ ಇರುವುದಿಲ್ಲ. ಕಾನೂನುಬಾಹಿರ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications