ಕುಷ್ಠರೋಗಕ್ಕೆ ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ

ಬೆಂಗಳೂರು,ಜನವರಿ 30: ಕುಷ್ಠ ರೋಗಿಗಳಿಗೆ ಬಿಇಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ಮಹಾತ್ಮ ಗಾಂಧಿ ಸ್ಮರಣಾರ್ಥ ಬಿಬಿಎಂಪಿ ಯಿಂದ ಹಮ್ಮಿಕೊಂಡಿರುವ ಕುಷ್ಠರೋಗ ವಿರುದ್ಧ ಅಂತಿಮ ಹೋರಾಟ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನಿಂದ ಫೆ.13ರವರೆಗೆ ಕುಷ್ಠರೋಗದ ವಿರುದ್ಧ ಅಂತಿಮ ಹೋರಾಟ ಶೀರ್ಷಿಕೆಯಡಿ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. 2016-2017 ಸಾಲಿನಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮವು ಅನುಷ್ಠಾನಗೊಂಡಿದೆ.

Free Treatment For Leprosy At BBMP And Government Hospital

ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್‍ಗಳಿದ್ದು, 141 ಆರೋಗ್ಯ ಕೇಂದ್ರಗಳು, 5 ಸಾರ್ವಜನಿಕ ಆಸ್ಪತ್ರೆಗಳು, 6 ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, 2 ಸ್ವಯಂ ಸೇವಾ ಸಂಸ್ಥೆಗಳು ಸದರಿ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈ ಸಂದರ್ಭ ಎಲ್ಲಾ ವೈದ್ಯರು ಹಾಗೂ ಪಾಲಿಕೆಯ ಸಿಬ್ಬಂದಿ ಕುಷ್ಠರೋಗ ಮುಕ್ತ ಪಾಲಿಕೆ ನಿರ್ಮಾಣದ ಪ್ರತಿಜ್ಞಾ ಸ್ವೀಕರಿಸಲಿದ್ದಾರೆ. ಆಂದೋಲನದ ಮೂಲಕ ಜನರನ್ನು ಸಂಪರ್ಕಿಸಿ, ರೋಗದ ಲಕ್ಷಣ ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

Recommended Video

      Union Budget : ನಮ್ಮ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗತ್ತೆ | R Ashok | Oneindia Kannada

      ಕುಷ್ಠ ರೋಗ ನಿರ್ಮೂಲನಕ್ಕೆ ಮುಂದಾಗಿರುವ ಪಾಲಿಕೆಯ ಆರೋಗ್ಯ ಇಲಾಖೆಯು ಜ.30 ರಿಂದ ಫೆ.13ರವರೆಗೆ ಕುಷ್ಠರೋಗ ವಿರುದ್ಧ ಅಂತಿಮ ಹೋರಾಟ ಶೀರ್ಷಿಕೆಯಡಿ ಜಾಗೃತಿ ಆಂದೋಲನ ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+