ನರೇಂದ್ರ ಮೋದಿ ಪ್ರಧಾನಿಯಾದ ಸಂಭ್ರಮದಲ್ಲಿ ಬೆಂಗಳೂರಲ್ಲಿ ಉಚಿತ ಹೇರ್ ಕಟ್

ಬೆಂಗಳೂರು, ಮೇ 30: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂಭ್ರಮವನ್ನು ದೇಶದ ನಾನಾ ಬಗೆಯಲ್ಲಿ ನಾನಾ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಉಚಿತವಾಗಿ ಕ್ಷೌರ ಮಾಡುವ ಮೂಲಕ ವ್ಯಕ್ತಿಯೊಬ್ಬರು ಈ ದಿನವನ್ನು ಸ್ಮರಣೀಯ ಮಾಡಿದ್ದಾರೆ ಎಂಬ ಒಕ್ಕಣೆಯುಳ್ಳ ಫೋಟೋ ಹರಿದಾಡುತ್ತಿದೆ.

ಮಹಿಳೆಯೊಬ್ಬರು ಕುರ್ಚಿ ಮೇಲೆ ಕುಳಿತು, ಅವರಿಗೆ ಹೇರ್ ಕಟ್ ಮಾಡುತ್ತಿದ್ದು, ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಚಿತ್ರ ಹಿನ್ನೆಲೆಯಲ್ಲಿ ಕಾಣುತ್ತಿದೆ. ಅಂದಹಾಗೆ ಈ ರೀತಿ ಉಚಿತವಾದ ಸೇವೆಗಳು ದೇಶದಾದ್ಯಂತ ನಾನಾ ಮಂದಿ, ನಾನಾ ರೀತಿಯಲ್ಲಿ ನೀಡುತ್ತಿದ್ದಾರೆ.

Free hair cut in Bengaluru during Narendra Modi oath taking ceremony

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ದೋಸೆ- ಜ್ಯೂಸ್ ಉಚಿತವಾಗಿ ನೀಡುವುದಾಗಿ ಕರ್ನಾಟಕದ ಹೋಟೆಲ್ ನವರೊಬ್ಬರು ಘೋಷಿಸಿದ್ದರೆ, ತಮ್ಮ ಬೇಕರಿಯ ಜನಪ್ರಿಯ 'ಕಾಂಗ್ರೆಸ್ ಕಡ್ಲೇಬೀಜ'ದ ಹೆಸರನ್ನು 'ಮೋದಿ ಮಸಾಲ' ಎಂದು ಬದಲಿಸಿದ್ದಾರೆ ಎಂದು ಕೂಡ ವಾಟ್ಸ್ ಅಪ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+