ಫೆ.22ಕ್ಕೆ ಅಂಕಿತ ಪುಸ್ತಕ ಪ್ರಕಾಶನದಿಂದ ನಾಲ್ಕು ಪುಸ್ತಕಗಳ ಬಿಡುಗಡೆ
ಬೆಂಗಳೂರು, ಫೆಬ್ರವರಿ 18: ಇದೇ ಶನಿವಾರ, ಫೆಬ್ರವರಿ 22ಕ್ಕೆ ಅಂಕಿತ ಪುಸ್ತಕ ಪ್ರಕಾಶನದಿಂದ ನಾಲ್ಕು ಪುಸ್ತಕಗಳು ಬಿಡುಗಡೆಗೊಳ್ಳುತ್ತಿವೆ. ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಫಕೀರ್ ಮುಹಮ್ಮದ್ ಕಟ್ಪಾಡಿ ಅವರ "ಸೂಫಿ ಅಧ್ಯಾತ್ಮ ಚಿಂತನೆಗಳು", ಪ್ರತಿಭಾ ನಂದಕುಮಾರ್ ಅವರ "ಕೌಬಾಯ್ಸ್ ಮತ್ತು ಕಾಮ ಪುರಾಣಗಳು" (ಕವನಗಳು), "ಪ್ರತಿಭಾ ಕಾವ್ಯ" ಹಾಗೂ ರಘುನಾಥ ಚ.ಹ. ಅವರ "ಜಾಮೂನು ಪದ್ಯಗಳು" (ಮಕ್ಕಳ ಕವನಗಳು) ಪುಸ್ತಕಗಳು ಫೆ.22ರ ಬೆಳಿಗ್ಗೆ 10.30ಕ್ಕೆ ಬಿಡುಗಡೆಗೊಳ್ಳಲಿವೆ. ಇದೇ ಕಾರ್ಯಕ್ರಮದಲ್ಲಿ ಪ್ರತಿಭಾ ನಂದಕುಮಾರ್ ಅವರ ಕವನ "ಕಾಗದದ ಸಾಕ್ಷಿ" -ಸಿಂಗಲ್ಸ್ ವಿಡಿಯೋ ಆಲ್ಬಂ ಕೂಡ ಬಿಡುಗಡೆಗೊಳ್ಳಲಿದೆ.

ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್, ಲೇಖಕಿ ವಿನಯಾ ಒಕ್ಕುಂದ ಅವರು ಆಗಮಿಸಲಿದ್ದಾರೆ.
ಅಂದೇ ಬೆಳಿಗ್ಗೆ 10.10ರಿಂದ 10.30ರವರೆಗೆ ಸೂಫಿ ಸಂಗೀತ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.












Click it and Unblock the Notifications