ಭಾನುವಾರದ ಕರ್ಫ್ಯೂ ವಿರೋಧಿಸಿದ ಮಾಜಿ ಆರೋಗ್ಯ ಸಚಿವ ಖಾದರ್
ಬೆಂಗಳೂರು, ಮೇ 23: ನಾಳೆಯ ಕರ್ಫ್ಯೂವನ್ನು ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ವಿರೋಧ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅವರು ಅಸಮಾಧಾನ ಹೊರ ಹಾಕಿದ್ದಾರೆ.
Recommended Video
''ನಿನ್ನೆ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ವಿಜಯ್ ಭಾಸ್ಕರ್ ಅವರ ಜೊತೆ ಲಾಕ್ ಡೌನ್ ವಿಚಾರವಾಗಿ ಮಾತನಾಡ್ತಾ ಇದ್ದೆ .ಸಂಡೇ ಲಾಕ್ ಡೌನ್ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ದಿನಸಿ ಅಂಗಡಿ ಓಪನ್, ಮಾರುಕಟ್ಟೆ ಓಪನ್, ಹಾಲು ತರಕಾರಿ ಓಪನ್, ಎಲ್ಲಾ ಓಪನ್ ಮಾಡಿ ಜನರನ್ನ ಮಾತ್ರ ಓಡಾಡ ಬೇಡಿ ಅಂದ್ರೆ ಹೇಗೆ.?? ಎಂದು ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.
''ಒಂದೆಡೆ ಕರ್ಫ್ಯೂ ಇದೆ ಹೊರ ಬರಬೇಡಿ ಅಂತಾ ಹೇಳ್ತಾ ಇರೋ ಪೋಲಿಸರು ಸೆಕ್ಷನ್ 144 ಕೂಡ ಜಾರಿಯಲ್ಲಿದೆ ಅಂತಾರೆ. ಹೀಗಾಗಿ ಸಂಡೇ ಲಾಕ್ ಡೌನ್‌ನ ವೈಜ್ಙಾನಿಕತೆಯೇ ಅರ್ಥವಾಗ್ತಾ ಇಲ್ಲ.'' ಎಂದು ಅಸಮಾಧಾನ ಹೊರ ಹಾಕಿದ್ದಾರೆ.

''ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದೊಂದು ಬೇಕಾಬಿಟ್ಟಿ ಲಾಕ್ ಡೌನ್. ಎನಿವೇ ಈ ಯು ಟರ್ನ್ ಸರ್ಕಾರ ತಜ್ಞರ ಜೊತೆ ಕುಳಿತು ತೀರ್ಮಾನಿಸೋದು ಒಳಿತು.'' ಎಂದು ಖಾದರ್ ಟ್ವೀಟ್ ಮಾಡಿದ್ದಾರೆ.
ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದೊಂದು ಬೇಕಾಬಿಟ್ಟಿ ಲಾಕ್ ಡೌನ್ . ಎನಿವೇ ಈ ಯು ಟರ್ನ್ ಸರ್ಕಾರ ತಜ್ಙರ ಜೊತೆ ಕುಳಿತು ತೀರ್ಮಾನಿಸೋದು ಒಳಿತು #ಬೇಕಾಬಿಟ್ಟಿ #ಲಾಕ್ #ಡೌನ್.(3) @CMofKarnataka @csogok @DCDK9 @compolmlr
— UT Khadér (@utkhader) May 23, 2020
ಲಾಕ್‌ಡೌನ್‌ನಲ್ಲಿ ಬಹುತೇಕ ಸಡಿಲಿಕೆ ನೀಡಿದ್ದ ಸರ್ಕಾರ, ಬೆಳಗ್ಗೆ ಏಳರಿಂದ ಸಂಜೆ ಏಳರವರೆಗೆ ಜನರ ಓಡಾಟಕ್ಕೆ ಅವಕಾಶ ನೀಡಿದೆ. ಆದರೆ, ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್ ಮಾಡಿದ್ದು, ದಿನಸಿ, ಹಾಲು, ಮಾರುಕಟ್ಟೆ ತೆರೆಯಲು ಸಮ್ಮತಿ ನೀಡಿದೆ. ಈ ನಿಮಯವನ್ನು ಖಾದರ್ ವಿರೋಧ ಮಾಡಿದ್ದಾರೆ.












Click it and Unblock the Notifications