Road Rage In Bengaluru: ಹಾರ್ನ್ ಮಾಡಿದ್ದಕ್ಕೆ ಅಡ್ಡ ಗಟ್ಟಿ ಕಾರಿನ ಗಾಜು ಒಡೆದು ಹಲ್ಲೆ: ಮೂವರು ಪುಂಡರ ಬಂಧನ
ಬೆಂಗಳೂರು, ಜುಲೈ 14: ಸಿಲಿಕಾನ್ ಸಿಟಿಯಲ್ಲಿ ಪುಂಡರ್ ಗ್ಯಾಂಗ್ ದರ್ಪ, ಹಲ್ಲೆಗಳು ಮುಂದುವರಿದಿವೆ. ಇವರಿಂದ ನಾಗರಿಕರ ನೆಮ್ಮದಿ ಸಂಚಾರಕ್ಕೆ ಹಾಗೂ ಉದ್ಯಾನ ನಗರವೆಂಬ ಹೆಸರಿಗೆ ಕುತ್ತು ಬರುತ್ತಿದೆ. ರಸ್ತೆಯಲ್ಲಿ ಅಡ್ಡಾ ದಿಡ್ಡಿ ತೆರಳುತ್ತಿದ್ದವರಿಗೆ ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ವರ್ತೂರು ಬಳಿ ನಡೆದಿದೆ.
#Rogues on #Bengaluru #Roads
— Rakesh Prakash (@rakeshprakash1) July 13, 2023
Four bikers #attack the occupants of a car in #Varthur (#Whitefield #police division) for #HONKING at them. They chase follow & thrash the car owner.
How to deal with such thugs?@NammaBengaluroo @WFRising @0RRCA @RisingVarthur @TOIBengaluru pic.twitter.com/UaaRTt9cdo
ಕಾರು ಚಾಲಕ ವರ್ತೂರು ಮಾರ್ಗವಾಗಿ ತೆರಳುತ್ತಿದ್ದಾಗ. ಮೂರರಿಂದ ನಾಲ್ಕು ಜನರಿದ್ದ ಬೈಕ್ ಗುಂಪು ರಸ್ತೆಯಲ್ಲಿ ಮನಬಂದಂತೆ ಸಂಚರಿಸುತ್ತಿದ್ದರು. ಇದನ್ನು ಕಂಡು ರಸ್ತೆ ಬಿಡುವಂತೆ ಹಿಂದಿನಿಂದ ಕಾರಿನ ಚಾಲಕ ಹಾರ್ನ್ ಮಾಡಿದ್ದಾನೆ. ಅಷ್ಟೇ ಕೋಪಗೊಂಡ ಈ ಪುಂಡರು ಕಾರು ಅಡ್ಡಗಟ್ಟಿ ಹಲ್ಲೆ ಮುಂದಾಗಿದ್ದಾರೆ. ಅಪಾರ್ಟ್ ಮೆಂಟ್‌ಗೂ ಬಂದೂ ಕಾರಿನ ಗ್ಲಾಸ್ ಒಡೆದು ದರ್ಪ ಮೆರೆದಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಕುರಿತು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ರೆಕಾರ್ಡ್ ಆದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಆಗಿದೆ. ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಬೆಂಗಳೂರಿನಲ್ಲಿ ನಾಗರಿಕರ ಸುರಕ್ಷತೆ ಇದೆಯೇ? ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಘಟನೆಯ ಹಿನ್ನೆಲೆ
ಹಾರ್ನ್ ಮಾಡಿದ್ದಕ್ಕೇನೆ ಕೋಪಗೊಂಡು ಇಬ್ಬರು ಬೈಕ್ ಸವಾರರು ನಡು ರಸ್ತೆಯಲ್ಲಿಯೇ ಕಾರು ನಿಲ್ಲಿಸಿದ್ದಾರೆ. ಚಾಲಕನ ಹತ್ತಿರ ಇವರಿಬ್ಬರು ಮಾತನಾಡಲು ಬರುತ್ತಿರುವಾಗಲೇ ಮತ್ತೊಬ್ಬ ಸ್ಕೂಟರ್‌ನಲ್ಲಿ ಬಂದು ನೇರ ಕಾರಿಗೆ ಡಿಕ್ಕಿಹೊಡೆದಿರುವುದು ರೆಕಾರ್ಡ್ ಆಗಿದೆ.
Zero tolerance towards such deceptive elements. Please note, the accused have been arrested!
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 14, 2023
In the future, please dial #Namma112 for immediate and swift intervention.#WeServeWeProtect https://t.co/unxmI2MPjB pic.twitter.com/wk3nmjX7c7
ಕಾರು ಬೆನ್ನಟ್ಟಿ ಹಲ್ಲೆ: ಮೂವರು ಬಂಧನ
ಇದರಿಂದ ಭಯಗೊಂಡ ಚಾಲಕ ಅವರಿಂದ ತಪ್ಪಿಸಿಕೊಂಡು ಯೂಟನ್ ತೆಗೆದುಕೊಂಡು ವಾಪಾಸ್ ಮರಳುತ್ತಿದ್ದಾನೆ. ಈ ವೇಳೆ ಕಾರನ್ನು ಬೆನ್ನಟ್ಟಿ ಬಂದ ಪುಂಡರು ಗುಂಜೂರು ಅಪಾರ್ಟ್ ಮೆಂಟ್ ಬಳಿ ಮತ್ತೆ ಕಾರು ತಡೆದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕಾರಿನ ಗಾಜು ಒಡೆದು ದರ್ಪ ತೋರಿದ್ದಾರೆ.

ಈ ಸಂಬಂಧ ಟ್ವೀಟ್ ಮೂಲಕ ದೂರು ನೀಡಲಾಗಿದೆ. ದೂರು ಸ್ವೀಕರಿಸಿರುವ ಬೆಂಗಳೂರು ನಗರ ಪೊಲೀಸರು ಮೂವರು ಪುಂಡರನ್ನು ಬಂಧಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ತೊಂದರೆಗಳು ಉಂಟಾದಲ್ಲಿ 112ಗೆ ನಂಬರ್‌ಗೆ ಸಂಪರ್ಕಿಸಿ ಸಹಾಯ ಪಡೆಯುವಂತೆ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications