ದಟ್ಟ ಮಂಜು : ಕೆಐಎನಲ್ಲಿ 104 ವಿಮಾನ ಹಾರಾಟದಲ್ಲಿ ವ್ಯತ್ಯಯ
ಬೆಂಗಳೂರು, ಜನವರಿ 14 : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಭಾನುವಾರ ಮುಂಜಾನೆ ದೇವನಹಳ್ಳಿಯಲ್ಲಿ ಅಪಾರ ಪ್ರಮಾಣದಲ್ಲಿ ಮಂಜು ಕವಿದಿದೆ. ಇದರಿಂದಾಗಿ ಮುಂಜಾನೆ 4 ಗಂಟೆಯಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ರನ್ ವೇ ಮೇಲೆ ದಟ್ಟ ಮಂಜು ಆವರಿಸಿದೆ.
104ಕ್ಕೂ ಹೆಚ್ಚು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ವಿಮಾನ ನಿಲ್ದಾಣ ಜನರಿಂದ ತುಂಬಿ ಹೋಗಿದೆ.

ಬೆಳಗ್ಗೆ 8.30ರ ಬಳಿಕ ದಟ್ಟ ಮಂಜು ಕಡಿಮೆಯಾಗಿದ್ದು ವಿಮಾನಗಳ ಹಾರಾಟ ಆರಂಭವಾಗಿದೆ. ವಿಮಾನಗಳ ವೇಳಾಪಟ್ಟಿ ಬದಲಾವಣೆ ಆಗಿರುವುದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬೆಂಗಳೂರು ಹವಾಮಾನ : ತಾಪಮಾನ 18ºC , ಗಾಳಿ 0.76 , ತೇವಾಂಶ 0.83 , ಒತ್ತಡ 1015.77 pa, ಮಂಜುಭರಿತ ವಾತಾವರಣ #bengaluru #weather
— ಹವಾಮಾನ ವರದಿ ಬೆಂಗಳೂರು (@blr_weather) January 14, 2018
ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿಯೂ ಮಂಜಿನ ಕಾರಣದಿಂದಾಗಿ ಎರಡು ದಿನ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿಯೂ ದಟ್ಟ ಮಂಜು ಕವಿದಿದ್ದರಿಂದ ಸಂಚಾರ ನಿಧಾನಗತಿಯಲ್ಲಿ ಸಾಗಿತ್ತು.












Click it and Unblock the Notifications