ಬ್ಯಾಂಕ್‌ನ ಬಾಕಿ ಹಣ ವಸೂಲಿಗೆ ತೆರಳಿದ್ದವರ ಮೇಲೆ ಗುಂಡಿನ ದಾಳಿ
ಬೆಂಗಳೂರು, ಜನವರಿ 30: ಬ್ಯಾಂಕ್ ಹಣ ಬಾಕಿ ವಸೂಲಿಗೆ ತೆರಳಿದವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಬ್ಯಾಂಕ್ ಹಣ ವಸೂಲಿಗೆ ತೆರಳಿದ್ದ ಅಬ್ದುಲ್ ಸಮದ್ ಎಂಬುವರ ಮೇಲೆ ಗುಂಡು ಹಾರಿಸಿದ್ದಾರೆ. ಬಾಣಸವಾಡಿ ಸಮೀಪದ ಅಪಾರ್ಟ್‌ಮೆಂಟ್ ನಲ್ಲಿ ಈ ಘಟನೆ ನಡೆದಿದೆ.
ಮಾತಿಗೆ ಮಾತು ಬೆಳೆದು ಸಾಲಗಾರನೇ ಗನ್‌ನಿಂದ ಗುಂಡು ಹಾರಿಸಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ಸಮದ್ ಅವರ ಎದೆ ಭಾಗಕ್ಕೆ ಗುಂಡು ತಗುಲಿದೆ. ಸಮದ್‌ನ ಸಹೋದರ ಸೈಯದ್ , ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಣ ವಸೂಲಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, 20 ಲಕ್ಷ ಹಣ ಕೊಡುವುದು ಬಾಕಿ ಇತ್ತು.

ಕೇಳಲು ಹೋಗಿದ್ದ ಸಮಯದಲ್ಲಿ ಇಬ್ಬರ ನಡುವೆ ಮಾತು ಮಾತು ಬೆಳೆದು ಬಳಿಕ ಅದು ಹಲ್ಲೆ ಹಂತಕ್ಕೆ ಬಂದು ತಲುಪಿತ್ತು. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.












Click it and Unblock the Notifications