ವಿದೇಶಿ ಮಹಿಳೆಯ ಅಶ್ಲೀಲ ಫೋಟೊ ಕ್ಲಿಕ್ಕಿಸಿ ಬ್ಲ್ಕಾಕ್‌ಮೇಲ್: ಸಿನಿಮಾ ವಿತರಕ ಅರೆಸ್ಟ್
ಬೆಂಗಳೂರು, ಮಾರ್ಚ್ 6: ವಿದೇಶಿ ಮಹಿಳೆಯ ಅಶ್ಲೀಲ ಫೋಟೊ ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸಿನಿಮಾ ವಿತರಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರೂಪೇಶ್ ಬಂಧಿತ ವ್ಯಕ್ತಿ, ಆಸ್ಟ್ರೇಲಿಯಾದಲ್ಲಿ ಮಹಿಳೆ ಜೊತೆ ರೂಪೇಶ್ ಸ್ನೇಹ ಬೆಳೆಸಿದ್ದ. ಮಹಿಳೆ ಸುತ್ತಾಟ ನಡೆಸಿದ್ದ ಆತ ಆಕೆಗೆ ಜ್ಯೂಸ್ನಲ್ಲಿ ಮತ್ತು ಬರುವ ಔಷಧಿ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಫೋಟೋ ಕ್ಲಿಕ್ಕಿಸಿಕೊಂಡು ಆಕೆಯ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
33 ವರ್ಷದ ರೂಪೇಶ್ ಅನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೂಪೇಶ್, ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಸಿನಿಮಾ ವಿತರಣೆ ಮಾಡುತ್ತಾನೆ ಎಂದು ತಿಳಿದು ಬಂದಿದೆ.

ನೊಂದ ಮಹಿಳೆ ಭಾರತಕ್ಕೆ ವಾಪಸ್ಸಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ತಕ್ಷಣವೇ ಪೊಲೀಸರು ಆತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications