ಬೆಂಗಳೂರಿನ ಈ ಲೇಔಟ್‌ಗೆ ಒಲಿದ ಕಾಂಕ್ರೀಟ್ ರಸ್ತೆಯ ಭಾಗ್ಯ: ಸ್ಥಳೀಯರಲ್ಲಿ ಸಂತಸ...
ಬೆಂಗಳೂರು ಮಾರ್ಚ್ 4: ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಗಣಪತಿನಗರದ ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಅಂದಾನಪ್ಪ ಲೇಔಟ್ ರಸ್ತೆ ಮಣ್ಣು, ಧೂಳಿನಿಂದ ಗುಂಡಿಮಯವಾಗಿತ್ತು. ಈ ರಸ್ತೆಗೆ ಇದುವರೆಗೂ ಡಾಂಬರೀಕರಣ ಮಾಡಿರಲಿಲ್ಲ. ಜನರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದರು. ಕೊನೆಗೂ ಎಚ್ಚೆತ್ತ ಅಧಿಕಾರಿಗಳು ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ.
ಎಡಿಫೈ ಸ್ಕೂಲ್‌ನಿಂದ ತಮ್ಮೆನಹಳ್ಳಿ, ಕುದುರೆಗೆರೆ, ಅಂದನಪ್ಪ ಲೇಔಟ್ ಕಡೆಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಸಂಪೂರ್ಣ ಕಿತ್ತುಹೋಗಿತ್ತು. ಶಾಲೆಗಳಿಗೆ ಹೋಗುವ ಮಕ್ಕಳ ಸ್ಥಿತಿ ಹೇಳುತ್ತಿರದಾಗಿತ್ತು. ರಸ್ತೆಯಲ್ಲಿ ಧೂಳು ತುಂಬಿಕೊಂಡು ವಾಹನಗಳು ಸಂಚಾರ ಮಾಡಿದರೆ ಹಿಂದೆ ಬರುವ ವಾಹನ ಸವಾರರ ಕಣ್ಣಿಗೆ ಧೂಳು ರಾಚುತ್ತಿತ್ತು. ಇದರ ಬಗ್ಗೆ ಹಲವಾರು ಸುದ್ದಿ ಪ್ರಸಾರವಾಗಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ಪ್ರಕಟಣೆಗೊಂಡ ಕೆಲವೇ ದಿನಗಳಲ್ಲಿ ರಸ್ತೆಗೆ ಲೋಕೋಯಫಗಿ ಇಲಾಖೆಯಿಂದ ಕಾಂಕ್ರೀಟ್ ಹಾಕಿಸಲಾಗಿದೆ.

ಶಾಸಕ ಎಸ್.ಮುನಿರಾಜು ಮಾತನಾಡಿ, ರಸ್ತೆಯ ಸಮಸ್ಯೆ ಬಹಳ ದಿನಗಳಿಮದ ಹಾಗೆಯೇ ಇತ್ತು. ಅನೇಕ ದೂರುಗಳು ಬಂದಿದ್ದವು. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಆದರೂ ಜನರ ಹಿತ ದೃಷ್ಟಿಯಿಂದ ರಸ್ತೆಗೆ ಕಾಂಕ್ರೀಟ್ ಹಾಕಿಸಲಾಗಿದೆ ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಮೋಹನ್ ಮಾತನಾಡಿ, ರಸ್ತೆಗೆ ಕಾಂಗ್ರೀಟ್ ಹಾಕಿಸಲಾಗಿದೆ. ಒಳ್ಳೆಯ ಗುಣಮಟ್ಟದ ರಸ್ತೆ ಅಭಿವೃದ್ಧಿ ಮಾಡಿಸಿದ್ದೇವೆ. ಈಗ ಸುತ್ತಮುತ್ತಲ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಹಾಳಾದ ರಸ್ತೆಗಳು:
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಲು ಪ್ರಮುಖ ಕಾರಣ ಹಾಳಾದ ರಸ್ತೆಗಳು. ನಗರದಲ್ಲಿ ಬಹುತೇಕ ಕಡೆ ಈ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಹಲವಾರು ವಾಹನ ಸವಾರರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೂ ಕೂಡ ರಸ್ತೆ ದುರಸ್ಥಿ ಕಾರ್ಯ ಮಾತ್ರ ನಗರದ ಹಲವಾರು ಪ್ರದೇಶದಲ್ಲಿ ಹಾಗೇ ಉಳಿದಿದೆ.
ಬೆಂಗಳೂರು ಸುರಂಗ ರಸ್ತೆ
ಸಿಲಿಕಾನ್ ಸಿಟಿಯ ಕುಖ್ಯಾತ ಟ್ರಾಫಿಕ್ ಜಾಮ್‌ಗೆ ಪರಿಹಾರ ಹುಡುಕಲು ಸರ್ಕಾರ, ಸಾರಿಗೆ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ರಾಜಧಾನಿಯಲ್ಲಿ ಸಂಚಾರ ದಟ್ಟಣೆಗೆ ಇಲ್ಲಿಯವರೆಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಇದೇ ಹಿನ್ನೆಲೆಯಲ್ಲಿ ಬಿಬಿಎಂಪಿ ಕೂಡ ಹಲವು ಯೋಜನೆಗಳನ್ನು ಜಾರಿಗೊಳಿಸಲು ಸಿದ್ಧವಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಲೋಕಸಭೆ ಚುನಾವಣೆಗೆ ಮುನ್ನವೇ 3.9 ಕಿ.ಮೀ ಸುರಂಗ ರಸ್ತೆಯನ್ನು ಪೂರ್ಣಗೊಳಿಸುವ ಕೆಲಸ ಪ್ರಾರಂಭವಾಗಲಿದೆ. ಮೊದಲ ಸುರಂಗ ರಸ್ತೆಯು ಹೆಬ್ಬಾಳದ ಬಳಿಯ ಎಸ್ಟೀಮ್ ಮಾಲ್ ಪ್ರದೇಶದಿಂದ ಬೆಂಗಳೂರು ಅರಮನೆ ಮೈದಾನದವರೆಗೆ ಇರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಆರಂಭಿಕವಾಗಿ 3.9 ಕಿ.ಮೀ ಇರುವ ಸುರಂಗವನ್ನು ನಂತರ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ಕಡೆಗೆ ಸುಮಾರು 17 ಕಿ.ಮೀಗೆ ವಿಸ್ತರಿಸಲಾಗುವುದು. ಚುನಾವಣೆಗೂ ಮುನ್ನವೇ ಇದನ್ನು ಮಾಡಲು ನಾವು ಬಯಸಿದ್ದೇವೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ದೀರ್ಘಾವಧಿಯ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ವಾಹನಗಳ ಸಂಚಾರ ಮತ್ತು ದಟ್ಟಣೆ ಹೆಚ್ಚಿರುವ ಎರಡು ಸ್ಥಳಗಳಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿದೆ.












Click it and Unblock the Notifications