ಕುಡುಕ ಮಗನ ಚಿತ್ರಹಿಂಸೆ ತಾಳಲಾರದೆ ಆತನನ್ನು ಕೊಂದು, ಹೊಲದಲ್ಲಿ ಸುಟ್ಟುಹಾಕಿದ ರೈತ
ಬೆಂಗಳೂರು, ಜುಲೈ. 02: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುರುವಾರ ರಾತ್ರಿ 58 ವರ್ಷದ ರೈತರೊಬ್ಬರು ತನ್ನ 28 ವರ್ಷದ ಮದ್ಯವ್ಯಸನಿ ಮಗನನ್ನು ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿರುವ ದಾರುಣ ಘಟನೆ ವರದಿಯಾಗಿದೆ. ಕುಡಿತದ ವ್ಯಸನಿಯಾಗಿದ್ದ ಮಗನ ಚಿತ್ರಹಿಂಸೆ ತಾಳಲಾರದೆ ತಂದೆಯೇ ತನ್ನ ಮಗನನ್ನು ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿ ನಿವಾಸಿ ಜಯರಾಮಯ್ಯ ಎಂದು ಗುರುತಿಸಲಾಗಿದ್ದು, ಇವರು ತಮ್ಮ ಮಗ 28 ವರ್ಷದ ಆದರ್ಶ ಎಂಬುವವರನ್ನು ಕೊಲೆ ಮಾಡಿದ್ದಾರೆ. ಮೊದಲು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ ಕುಡಿತದ ಚಟಕ್ಕೆ ಬಿದ್ದು ನಿರುದ್ಯೋಗಿಯಾಗಿದ್ದರು. ಹಣಕ್ಕಾಗಿ ಮನೆಯವರನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ.

ಮೃತ ವ್ಯಕ್ತಿ ಹಣಕ್ಕಾಗಿ ತನ್ನ ತಾಯಿತನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಇದರ ಪರಿಣಾಮವಾಗಿ ಆಕೆಗೆ ಆರು ಹೊಲಿಗೆಗಳನ್ನು ಹಾಕಬೇಕಾಯಿತು. ದಿನ ನಿತ್ಯ ಇದೇ ಘಟನೆಗಳನ್ನು ನೋಡಿ ಹತಾಶರಾದ ಜಯರಾಮಯ್ಯ , ತನ್ನ ಮಗ ಆಗಾಗ್ಗೆ ಹೋಗುತ್ತಿದ್ದ ಬಾರ್‌ಗೆ ಮಗನನ್ನು ಹುಡುಕಿಕೊಂಡು ಹೋದರು. ಆತನನ್ನು ಅಲ್ಲಿಂದ ಎತ್ತಿಕೊಂಡು ಹೋಗಿ ಹೊಡೆಯತೊಡಗಿದ. ಮನೆಗೆ ಬಂದ ನಂತರ ಮಗನ ಕೈಕಾಲು ಕಟ್ಟಿ ಥಳಿಸುತ್ತಲೇ ಇದ್ದರು.
ನಂತರ ತನ್ನ ಮಗನನ್ನು ಸಮೀಪದ ಫಾರ್ಮ್‌ಹೌಸ್‌ಗೆ ಎಳೆದೊಯ್ದು, ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಗುರುವಾರ ರಾತ್ರಿ ದುರಂತ ನಡೆದಿದ್ದು, ಘಟನೆ ಬಳಿಕ ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಈ ಆಘಾತಕಾರಿ ವಿಷಯವನ್ನು ತಿಳಿಸು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯ ದೊಡ್ಡಬೆಳವಂಗಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಎರಡು ವರ್ಷಗಳ ಹಿಂದೆ ಆದರ್ಶ್ ಅವರನ್ನು ಡಿ-ಅಡಿಕ್ಷನ್ ಸೆಂಟರ್‌ಗೆ ಸೇರಿಸಲಾಗಿತ್ತು. ಮನೆಗೆ ಹಿಂದಿರುಗಿದ ನಂತರ, ಅವರು ಕುಡಿಯುವುದನ್ನು ಮುಂದುವರೆಸಿದರು. ಮೊದಲಿಗಿಂತ ಹೆಚ್ಚು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ಕುಡಿಯಲು ಹಣ ಕೊಡಲು ನಿರಾಕರಿಸಿದರೆ ತಾಯಿಯನ್ನು ಗದರಿಸುತ್ತಿದ್ದರು. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications