ಆಚಾರ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಬೆಂಗಳೂರು, ಫೆ.24 : ಸಂತಸ, ಸಂಭ್ರಮ ಮತ್ತು ಸ್ವಲ್ಪ ಬೇಸರಕ್ಕೆ ಆಚಾರ್ಯ ಕಾಲೇಜಿನ ಆವರಣ ಸಾಕ್ಷಿಯಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜು ಬಿಟ್ಟು ಹೋಗುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಬೇಸರ ಮಾಡಿಕೊಂಡಿದ್ದರೆ, ನಿಮಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದು ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಿದ್ದರು.
ಫೆ.5ರಂದು ಆಚಾರ್ಯ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಎರಡು ವರ್ಷ ಓದಿದ ಕಾಲೇಜನನ್ನು ಬಿಟ್ಟು ಹೋಗುವ ಅಗಲಿಕೆಯಲ್ಲಿ ವಿದ್ಯಾರ್ಥಿಗಳು ಬೇಸರಗೊಂಡಿದ್ದರು. ಜೀವನದಲ್ಲಿ ಪಿಯುಸಿ ಕೇವಲ ಒಂದು ಹಂತ ಮುಂದೆ ನೀವು ಸಾಧಿಸಬೇಕಾದದ್ದು ಬಹಳಷ್ಟಿದೆ ಎಂದು ಉಪನ್ಯಾಸಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಕಳುಹಿಸಿಕೊಟ್ಟರು.
ಪ್ರೊ.ಬ್ರಹ್ಮ ಬೀಳ್ಕೊಡುಗೆ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು. ಭಾರತೀಯ ಶಿಕ್ಷಣ ವ್ಯವಸ್ಥೆಯ ಸಾಮರ್ಥ್ಯ ಎಂಬ ವಿಷಯದ ಕುರಿತು ಅವರು ಮಾಡಿದ ಭಾಷಣ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ದಾರಿ ದೀಪವಾಗುವಂತ್ತಿತ್ತು. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಮುಂದಿನ ದಾರಿಗಳ ಬಗ್ಗೆ ಅವರಿಗೆ ಸ್ಪಷ್ಟವಾದ ಮಾರ್ಗದರ್ಶನ ಮಾಡಿದರು. ಚಿತ್ರಗಳಲ್ಲಿ ನೋಡಿ ಬೀಳ್ಕೊಡುಗೆ ಸಮಾರಂಭ

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಆಚಾರ್ಯ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಫೆ.5ರಂದು ಆಯೋಜಿಸಲಾಗಿತ್ತು. ಸಂತಸ, ಸಂಭ್ರಮ ಮತ್ತು ಸ್ವಲ್ಪ ಬೇಸರಕ್ಕೆ ಆಚಾರ್ಯ ಕಾಲೇಜಿನ ಆವರಣ ಸಾಕ್ಷಿಯಾಯಿತು.

ವಿದ್ಯಾರ್ಥಿಗಳೊಂದಿಗೆ ಪ್ರೊ.ಬ್ರಹ್ಮ ಸಂವಾದ
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರೊ.ಬ್ರಹ್ಮ ವಿದ್ಯಾರ್ಥಿಗಳೊಂದಿಗೆ ಮುಂದಿನ ಶಿಕ್ಷಣದ ಕುರಿತು ಅಗತ್ಯ ಮಾಹಿತಿಯನ್ನು ನೀಡಿದರು.

ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು
ಪಶ್ಚಿಮ ಬಂಗಾಳ ಮೂಲದ ಅನನ್ಯಾದಾಸ್ ಗುಪ್ತ ಎರಡು ವರ್ಷ ಕಾಜೀಜಿನಲ್ಲಿ ಓದಿದ ಅನುಭವ ಹಂಚಿಕೊಂಡರು.ಉಪನ್ಯಾಸಕರು ತಮಗೆ ಪಾಠ ಮಾಡುತ್ತಿದ್ದ ಬಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾಲೇಜಿಗೆ ವಂದಿಸಿದ ಪೋಷಕರು
ಹೊರ ರಾಜ್ಯದ ವಿದ್ಯಾರ್ಥಿಗಳು ಮತ್ತು ಪೋಷಕರು ಆಚಾರ್ಯ ಕಾಲೇಜಿನ ಸಿಬ್ಬಂದಿಗೆ ವಂದನೆ ಸಲ್ಲಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.












Click it and Unblock the Notifications