ಪೊಲೀಸರಂತೆ ಬರುವ ಕಳ್ಳರು ಹೇಗೆಲ್ಲಾ ನಿಮ್ಮನ್ನು ಯಾಮಾರಿಸ್ತಾರೆ ನೋಡಿ..
ಬೆಂಗಳೂರು, ಫೆಬ್ರವರಿ 11: ಪೊಲೀಸರ ಸೋಗಿನಲ್ಲಿ ಬಂದು ಕಳ್ಳತನ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. ಇವರಿಗೆ ಮಹಿಳೆಯರೇ ಟಾರ್ಗೆಟ್, ನೀವು ಎಚ್ಚರದಿಂದಿರಿ.
ಕಳೆದ ನಾಲ್ಕು ತಿಂಗಳ ಹಿಂದೆ ಪೊಲೀಸರ ಸೋಗಿನಲ್ಲಿ ಬಂದ ಗ್ಯಾಂಗ್ ಒಂದು ಬಸವೇಶ್ವರನಗರ ಹಾಗೂ ಗಿರಿನಗರದಲ್ಲಿ ಇಬ್ಬರು ಮಹಿಳೆಯರನ್ನು ದೋಚಿ ಪರಾರಿಯಾಗಿದ್ದರು. ಅವರನ್ನು ಹಿಡಿಯಲು ನಿಜವಾದ ಪೊಲೀಸರು ಹಿಂದೆ ಬಿದ್ದಿದ್ದರು.
ಇದೀಗ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ನಗರಕ್ಕೇ ಅಂಥದ್ದೇ ಗ್ಯಾಂಗ್ ಒಂದು ಎಂಟ್ರಿ ಕೊಟ್ಟಿದೆ. ಆಭರಣ ಧರಿಸಿರುವ ಮಹಿಳೆಯರೇ ಇವರ ಟಾರ್ಗೆಟ್, ಈ ಏರಿಯಾದಲ್ಲಿ ಕಳ್ಳರು ಬಂದಿದ್ದಾರೆ, ನಿಮ್ಮ ಬಳಿ ಇರುವ ಚಿನ್ನವನ್ನು ಕೊಡಿ ನಾವು ಸುರಕ್ಷಿತವಾಗಿ ನಿಮ್ಮ ಮನೆಗೆ ತಲುಪಿಸುತ್ತೇವೆ ಎಂದು ಹೇಳಿ ಸರ, ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಾರೆ.

ಸರ್ವೇಶ್ವರನಗರದಲ್ಲಿ ಇತ್ತೀಚೆಗೆ ಜಯಮ್ಮ(60) ಮಹಿಳೆಯಿಂದ ಚಿನ್ನದ ಸರ ಹಾಗೂ ಹಣವನ್ನು ದೋಚಿದ್ದರು. ಈ ಬೀದಿಯಲ್ಲಿ ಕಳ್ಳರ ಗುಂಪೊಂದು ಬಂದಿದೆ, ನೀವು ಚಿನ್ನವನ್ನು ನನಗೆ ನೀಡಿ, ಬಳಿಕ ನಾವು ನಿಮಗೆ ತಲುಪಿಸುತ್ತೇವೆ ಎಂದು ಸುಲಭವಾಗಿ ದರೋಡೆ ಮಾಡಿದ್ದರು. ಇದೀಗ ಬೆಂಗಳೂರಿನಾದ್ಯಂತ ಕಳ್ಳರ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ.












Click it and Unblock the Notifications