ಬೆಂಗಳೂರಲ್ಲಿ ಲಂಡನ್ ಮಾದರಿ 3 ಹಂತದ ಆಡಳಿತಕ್ಕೆ ಶಿಫಾರಸು
ಬೆಂಗಳೂರು, ಜೂನ್ 29: ಆಡಳಿತಾತ್ಮಕವಾಗಿ ಬೆಂಗಳೂರನ್ನು ಐದು ಭಾಗ ಮಾಡುವುದರ ಜತೆಗೆ ಲಂಡನ್ ಮಾದರಿಯಲ್ಲಿ 3 ಹಂತದಲ್ಲಿ ಆಡಳಿತ ವ್ಯವಸ್ಥೆ ನಿರ್ಮಾಣಕ್ಕೆ ಶಿಫಾರಸು ಮಾಡಿದೆ.
ಬಿಬಿಎಂಪಿ ಪುನರ್ ರಚನೆ ಕುರಿತು ರಾಜ್ಯ ಸರ್ಕಾರ ರಚಿಸಿದ್ದ ಬಿ.ಎಸ್. ಪಾಟೀಲ್ ನೇತೃತ್ವದ ತ್ರಿಸದಸ್ಯ ಸಮಿತಿಯು ಸರ್ಕಾರಕ್ಕೆ ತನ್ನ ಅಂತಿಮ ವರದಿ ಸಲ್ಲಿಸಿದೆ. 5 ಪಾಲಿಕೆಗಳ ಮೇಲುಸ್ತುವಾರಿಗೆ ಪ್ರತ್ಯೇಕ ಗ್ರೇಟರ್ ಬೆಂಗಳೂರು ಮುನ್ಸಿಪಲ್ ಅಥಾರಿಟಿ ನಿರ್ಮಿಸಬೇಕು. ಈ ಪ್ರಾಧಿಕಾರದ ಮೇಯರ್ ಜನರಿಂದಲೇ ನೇರವಾಗಿ ಆಯ್ಕೆಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಬಿ.ಎಸ್. ಪಾಟೀಲ್ ಬೆಳೆಯುತ್ತಿರುವ ಬೆಂಗಳೂರಿನಂತಹ ಬೃಹತ್ ನಗರದ ಆಡಳಿತ ವ್ಯವಸ್ಥೆಯನ್ನು ಒಂದೇ ಪಾಲಿಕೆ ಮೂಲಕ ನಡೆಸಲು ಸಾಧ್ಯವಿಲ್ಲ, ಪಾಲಿಕೆ ವಿಭಜನೆಯಿಂದ ಬ್ರ್ಯಾಂಡ್ ಬೆಂಗಳೂರು ಮೌಮ್ಯವರ್ಧನೆಗೆ ಅನುಕೂಲವಾಗಲಿದೆಯೇ ವಿನಃ ಭೌಗೋಳಿಕವಾಗಿ ವಿಭಾಗಿಸುವ ಪ್ರಸ್ತಾಪ ಸಲ್ಲಿಸಿಲ್ಲ ಎಂದರು.

ಪ್ರಮುಖ ಶಿಫಾರಸುಗಳೇನು: ಮೂರು ಹಂತದ ಆಡಳಿತ, ಲಂಡನ್ ಮಾದರಿಯಲ್ಲಿ 3 ಹಂತದ ಆಡಳಿತ ವ್ಯವಸ್ಥೆ ಸೃಷ್ಟಿ ಗ್ರೇಟರ್ ಬೆಂಗಳೂರು ಅಥಾರಿಟಿ ಪಾಲಿಕೆ ಹಾಗೂ ವಾರ್ಡ್ ಮಟ್ಟದ ಆಡಳಿತಕ್ಕೆ ಕಾರ್ಪೊರೇಟರ್ ಅಧ್ಯಕ್ಷತೆಯಲ್ಲಿ 20 ಸದಸ್ಯರ ಸಮಿತಿ ಇದ್ದರೆ, ವಲಯವಾರು ಆಯ್ಕೆಗೊಂಡ ಸದಸ್ಯರು ಹಾಗೂ ಮೇಯರ್ ಪ್ರತಿ ಪಾಲಿಕೆಯ ಆಡಳಿತ ನಿರ್ವಹಣೆ ಮಾಡುತ್ತಾರೆ.
ಮೇಯರ್ ಅವಧಿ 5 ವರ್ಷ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ಪಾಲಿಕೆಯ ಮೇಯರ್‌ಗಳ ಅವದೀ 5 ವರ್ಷವಿರಬೇಕು ಎಂದು ಶಿಫಾರಸು ಮಾಡಿದೆ.












Click it and Unblock the Notifications