ಎನ್ ಎಸ್ ಡಿ ವಿದ್ಯಾರ್ಥಿಗಳಿಂದ ಪ್ರಯೋಗ ನಾಟಕ

ಬೆಂಗಳೂರು,ನವೆಂಬರ್ 14: ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ವತಿಯಿಂದ ಪ್ರಸ್ತುತ ೬ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಮೊದಲ ರಂಗ ಪ್ರಯೋಗಾತ್ಮಕವಾಗಿ, ರಾಷ್ಟ್ರಕವಿ ಕುವೆಂಪು ವಿರಚಿತ ಸುಪ್ರಸಿದ್ಧ "ಬೆರಳ್ಗೆ ಕೊರಳ್" ನಾಟಕವನ್ನು ಅಭಿನಯಿಸುತ್ತಿದ್ದಾರೆ. ಇಂದಿನ ಕಾಲಮಾನಕ್ಕೆ ಅತ್ಯಂತ ವಿರಳವೆನಿಸುವ ಹಳಗನ್ನಡದಲ್ಲಿ ಅಭಿನಯಿಸುತ್ತಿರುವುದು ಇದರ ವಿಶೇಷವೆನಿಸಿದೆ.

ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದಲ್ಲಿ ದಕ್ಷಿಣ ಭಾರತದ ಆರೂ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಈ ವರ್ಷ ಹರಿಯಾಣದಿಂದಲೂ ಒಬ್ಬ ವಿದ್ಯಾರ್ಥಿನಿ ರಂಗ ತರಬೇತಿಗೆ ಒಳಪಟ್ಟಿದ್ದು, ಎಲ್ಲರೂ ಕನ್ನಡ ಕಲಿತು ಅದರಲ್ಲೂ ಕ್ಲಿಷ್ಟಕರ ಹಳಗನ್ನಡದಲ್ಲಿಯೇ ಅಭಿನಯಿಸುತ್ತಿರುವುದು ಹೆಗ್ಗಳಿಕೆ.

Experimental Drama By NSD Students

ಈ ನಾಟಕವನ್ನು ದಕ್ಷಿಣ ಭಾರತದ ಖ್ಯಾತ ರಂಗ ತಜ್ಞೆ, ನಿರ್ದೇಶಕಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀಮತಿ ಪ್ರಸನ್ನ ರಾಮಸ್ವಾಮಿರವರು ನಿರ್ದೇಶಿಸುತ್ತಿದ್ದಾರೆ. ರಂಗ ಸಜ್ಜಿಕೆ ಮತ್ತು ರಂಗ ಪರಿಕರ ಶ್ರೀ ಶಶಿಧರ್ ಅಡಪ, ಸಂಗೀತವನ್ನು ಶ್ರೀ ರಾಜಗುರು ಹೊಸಕೋಟೆ ಹಾಗೂ ವಸ್ತ್ರವಿನ್ಯಾಸ ಶ್ರೀಮತಿ ಛಾಯಾ ಭಾರ್ಗವಿ ನಿರ್ವಹಿಸಿದ್ದಾರೆ. ಈ ರಂಗ ಪ್ರಯೋಗವನ್ನು ಪ್ರೇಕ್ಷಕರಿಗಾಗಿ ನವೆಂಬರ್ ೧೫, ೧೬ ಮತ್ತು ೧೭ ರಂದು ಪ್ರದರ್ಶಿಸುತ್ತಿದ್ದಾರೆ.

ಸ್ಥಳ: ಎನ್ ಎಸ್ ಡಿ ಸ್ಟುಡಿಯೋ ಥಿಯೇಟರ್,ಮಲ್ಲತ್ತಹಳ್ಳಿ. ಬೆಂಗಳೂರು
ಸಮಯ: ಸಂಜೆ ೭ಗಂಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+