ಪ್ರೇಯಸಿಯ ಹೊಸ ಲವ್ವರ್ ಅನ್ನು ಕೊಂದ ಹಳೇಯ ಪ್ರೇಮಿ ಅಂದರ್

ಬೆಂಗಳೂರು, ಮೇ10: ಪ್ರೀತಿ ಎರಡು ಜೀವಗಳನ್ನು ಬೆಸೆಯುವ ಪವಿತ್ರ ಬೆಸುಗೆ. ಪ್ರೀತಿಯಲ್ಲಿ ಸ್ವಾರ್ಥಿಗಳಾಗದೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಾಗಬೇಕು. ಪ್ರೀತಿ ಯಶಸ್ವಿಯಾದರೇ ಮದುವೆಯ ಜೀವನಕ್ಕೆ ಅಣಿಯಾಗಿ ಹೊಸ ಜೀವನ ಪ್ರಾರಂಭ. ಅದೇ ಪ್ರೀತಿ ವ್ಯತ್ಯಾಸವಾದರೇ ಜೀವನ ಫಜೀತಿ. ಅರೇಕ್ಷಣ ಯಾಮಾರಿದರೂ ಯಮಲೋಕದ ದಾರಿ ಖಚಿತ. ತನ್ನ ಪ್ರೇಯಸಿಯನ್ನೇ ಪ್ರೀತಿಸುತ್ತಿದ್ದ ಪ್ರಿಯಕರನನ್ನು ಹಳೇಯ ಪ್ರೇಮಿ ಕೊಂದು ಪೊಲೀಸರಿಗೆ ಸಿಕ್ಕಿಬಿದ್ದ ದುರಂತದ ಕಥಾನಕವಿದು.

ಪ್ರಿಯತಮನ ಕೊಂದ ಪ್ರೇಯಸಿಯ ಮಾಜಿ ಲವ್ವರ್..!

ಒಂದು ಕೊಲೆ ನಡೆದಿದೆ. ಅಷ್ಟಕ್ಕೂ ಆ ಕೊಲೆಯಾಗಿದ್ದು ಒಂದು ಹುಡುಗಿಯ ಪ್ರೀತಿಗಾಗಿ.ಈ ಪ್ರೇಮ ಕತೆ ಶುರುವಾಗೋದು ಕೋವಿಡ್ ಪೂರ್ವ ಕಾಲದಲ್ಲಿ. ಅಂದರೆ ಕಳೆದ ಎರಡು ವರ್ಷಗಳ ಹಿಂದೆ ಭದ್ರಾವತಿ ಮೂಲದ ಯುವತಿಯೊಬ್ಬಳು ಬೆಂಗಳೂರಿನ ಬೆಳ್ಳಂದೂರಿನ ಗಾರ್ಮೆಂರ್ಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಗಾರ್ಮೇಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದ ಕಿರಣ್ ಎಂಬಾತನ ಜೊತೆಗೆ ಪ್ರೇಮಾಂಕರವಾಗಿ ಬಿಟ್ಟಿತ್ತು. ಇಬ್ಬರು ಚೆನ್ನಾಗಿಯೇ ಇದ್ದರು, ಆದರೆ ಕಿರಣ್ ಕೆಲವು ಬಾರಿ ಕುಡಿದು ಬಂದು ಗಲಾಟೆ ಮಾಡೊದು ಮಾಡುತ್ತಿದ್ದ. ಇದೇ ಕಾರಣಕ್ಕೆ ಯುವತಿ ಲವ್ ಬ್ರೇಕಪ್ ಮಾಡಿ ಕೊಂಡಿದ್ದಳು. ಅಷ್ಟರಲ್ಲಿ ಕೋವಿಡ್ ಶುರುವಾಗಿ ಕೆಲಸ ಮಾಡ್ತಿದ್ದ ಫ್ಯಾಕ್ಟರಿ ಮುಚ್ಚಿದ್ದ ಕಾರಣ ವಾಪಸ್ಸು ಭದ್ರಾವತಿ ಗೆ ಯುವತಿ ಹೋಗಿದ್ದಳು. ಇದರಿಂದಾಗಿ ಕಿರಣ್ ಜೊತಗಿನ ಸಂಬಂಧವು ಕಡಿಕೊಂಡಿದ್ದಳು. ಈ ವೇಳೆ ಶಿವಮೊಗ್ಗದಲ್ಲಿ ಮತ್ತೊಂದು ಗಾರ್ಮೆಂಟ್ಸ್‌ಗೆ ಕಳೆದ ಏಳು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾಳೆ. ಅಲ್ಲಿ ಸಮರ್ಥ್ ಎಂಬ ಯುವಕನ ಜೊತೆಗೆ ಮತ್ತೆ ಲವ್ ಶುರುವಾಗಿದೆ.

Bengaluru: Ex Lover Kill her New boyfriend

ದುಡಿಮೆಗಾಗಿ ಸಿಲಿಕಾನ್ ಸಿಟಿಗೆ ಬಂದ ಲವರ್ಸ್

ಸಮರ್ಥ್ ಮತ್ತು ಯುವತಿ ಶಿವಮೊಗ್ಗದಲ್ಲಿ ಹೆಚ್ಚಾಗಿ ದುಡಿಯಲು ಆಗಲ್ಲಾ ಅಂತ ಬೆಂಗಳೂರಿಗೆ ಬರುವ ಪ್ಲಾನ್ ಮಾಡುತ್ತಾರೆ. ಅದರಂತೆ ಯುವತಿ ಮೊದಲೇ ಬಂದು ಒಂದು ಕೆಲಸಕ್ಕೆ ಸೇರಿದ್ದಾಳೆ. ಎರಡು ತಿಂಗಳ ನಂತರ ಸಮರ್ಥ್ ಸಹ ಬಂದು ಕೆಲಸಕ್ಕೆ ಸೇರಿದ್ದಾನೆ. ಯುವತಿಯ ಜೊತೆ ಸಮರ್ಥ್ ಕೆಲ ದಿನಗಳ ಹಿಂದೆ ಶಿವಮೊಗ್ಗಕ್ಕೂ ಹೋಗಿ ಬಂದಿದ್ದ. ಕಳೆದ ಶುಕ್ರವಾರ ಯುವತಿ ಕೆಲಸ ಮಾಡುತ್ತಿದ್ದ ಕಂಪನಿ ಬಳಿಯಿಂದ ಆಕೆಯನ್ನು ಪಿಕ್ ಅಪ್ ಮಾಡಿಕೊಂಡು ಬೊಮ್ಮನಹಳ್ಳಿಯ ವಾಸವಿದ್ದ ಮನೆಗೆ ಬಂದಿದ್ದಾರೆ. ಈ ವೇಳೆ ಯುವತಿ ಹಳೆ ಲವ್ವರ್ ಕಿರಣ್ ಗಲಾಟೆ ಮಾಡಿದ್ದಾನೆ. ಪ್ರೇಮಿಗಳಿಬ್ಬರು ವಾಸವಿದ್ದ ಮನೆಗೆ ತನ್ನ ಗೆಳೆಯರ ಜೊತೆಗೆ ಬಂದ ಕಿರಣ್ ಗಲಾಟೆ ಮಾಡಿ ಸಮರ್ಥ್ ಮೇಲೆೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಮರ್ಥ್ ತಲೆಗೆ ಪೆಟ್ಟಾಗಿ ಜ್ಞಾನತಪ್ಪಿದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಮರ್ಥ್‌ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸಾವನಪ್ಪಿದ್ದಾನೆ. ಕೊಲೆ ಮಾಡಿದ್ದ ಮೂವರನ್ನು ಬೊಮ್ಮನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹೇಳಿದ್ದೇನು..?

ಯುವತಿ ಮತ್ತು ಸಮರ್ಥ್ ಇದ್ದ ಮನೆಗೆ ಆರೋಪಿಗಳು ಹುಡುಕಿಕೊಂಡು ಹೋಗಿದ್ದಾರೆ. ಜಗಳ ತೆಗೆದು ಸಮರ್ಥ್ ತಲೆಗೆ ಬಲವಾಗಿ ಹೊಡೆದು ಹೋಗಿದ್ದಾರೆೆ. ಯುವತಿಯೇ ಸಮರ್ಥ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಮರ್ಥ್ ಸಾವನ್ನಪ್ಪಿದ್ದ. ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿದ್ದಾರೆ.

Bengaluru: Ex Lover Kill her New boyfriend

ಸದ್ಯ ಕೇಸ್ ದಾಖಲು ಮಾಡಿದ್ದ ಬೊಮ್ಮನಹಳ್ಳಿ ಪೊಲೀಸರು ಮೂವರು ಅರೋಪಿಗಳಾದ ಕಿರಣ್, ಅರುಣ್ ಹಾಗು ರಾಕೇಶ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಿಟ್ಟು ಹೋದವಳನ್ನು ಮತ್ತೆ ತನ್ನ ಜೊತೆಗೆ ಕಟ್ಟಿಕೊಂಡು ಬಾಳಬೇಕು ಅಂತ ಹುಚ್ಚುತನ ಮೆರದವನು ಅಂದರ್ ಆಗಿದ್ದಾನೆ. ಸ್ನೇಹಿತನ ಜೊತೆಗೆ ಅವನ ಹುಚ್ಚಿಗೆ ಸಹಕಾರ ಕೊಟ್ಟ ಇಬ್ಬರು ಗೆಳೆಯರು ಜೈಲು ಸೇರಿದ್ದಾರೆ. ತನ್ನದಲ್ಲದ ತಪ್ಪಿಗೆ ಜೀವವನ್ನೇ ಕಳೆದುಕೊಂಡ ಸಮರ್ಥ್ ದುಡಿಯುವ ಮಗನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

Recommended Video

      KL Rahul ಪವರ್ ಪ್ಲೇ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಕ್ಕೆ ಬೇಸರ ಹೊರಹಾಕಿದ್ದು ಹೀಗೆ.. | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+