Get Updates
Get notified of breaking news, exclusive insights, and must-see stories!

ಯೂರೋ ಕಿಡ್ಸ್ ಪ್ರಿಸ್ಕೂಲ್‍ಗೆ ಟೈಮ್ಸ್ ಎಜುಕೇಶನ್ ಎಕ್ಸಲೆನ್ಸ್-2019 ಪ್ರಶಸ್ತಿ

ಬೆಂಗಳೂರು, ನವೆಂಬರ್ 18: ಭಾರತದ ಅಗ್ರಗಣ್ಯ ಹಾಗೂ ಬೆಂಗಳೂರಿನಲ್ಲಿ 100 ಪ್ರಿಸ್ಕೂಲ್‍ಗಳನ್ನು ಹೊಂದಿರುವ ಯೂರೋ ಕಿಡ್ಸ್ ಗೆ ಟೈಮ್ಸ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್-2019ರ ಪ್ರಶಸ್ತಿ. ಸುರಕ್ಷತೆ ಮತ್ತು ಭದ್ರತೆಯ ವಿಭಾಗದಲ್ಲಿ ಹಾಗೂ ಅಗ್ರಗಣ್ಯ ಫ್ರಾಂಚೈಸಿ ಮಾದರಿಯ ಪ್ರಿಸ್ಕೂಲ್ ಸರಣಿ ಎಂಬ ಗೌರವಕ್ಕೆ ಪಾತ್ರವಾಗಿದೆ.

ಶೈಕ್ಷಣಿಕ ಜಗತ್ತಿನಲ್ಲಿ ವಿನೂತನ ಬೋಧನಾ ಕ್ರಮ ಅಳವಡಿಸಿಕೊಂಡಿರುವ ಮೂರು ಅಗ್ರ ಪ್ರಿಸ್ಕೂಲ್‍ಗಳಲ್ಲಿ ಯೂರೋ ಕಿಡ್ಸ್ ಕೂಡಾ ಸ್ಥಾನ ಪಡೆದಿದೆ. ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಈ ಬ್ರಾಂಡ್ ಈಗಾಗಲೇ, ವಿನೂತನ ಹಾಗೂ ಅತ್ಯಾಧುನಿಕ ಕಲಿಕಾ ವಿಧಾನವನ್ನು ಅಳಡಿಸಿಕೊಂಡಿದೆ.

ಹೊಸ ಅರ್ಥಗರ್ಭಿತ ಪಠ್ಯಕ್ರಮವಾದ ಯೂನಿಯಾ, ಫೋನಿಕ್ಸ್, ಗಣಿತ ಮತ್ತು ವಿಜ್ಞಾನದ ಜತೆಗೆ ಯೋಗ, ಸಂಗೀತ ಮತ್ತು ಫಿಟ್ನೆಸ್ ಅಂಶಗಳನ್ನು ಒಳಗೊಂಡಿದ್ದು, ಮಗುವಿಗೆ ಅಮೋಘ ಕಲಿಕಾ ಅನುಭವವನ್ನು ಒದಗಿಸುತ್ತದೆ. ಮಗು ಆಡುತ್ತಾ, ಕಲಿಯುತ್ತಾ ಸಮಗ್ರವಾಗಿ ಬೆಳವಣಿಗೆ ಹೊಂದಲು ಇದು ಪೂರಕವಾಗಿದೆ.

ಯೂರೋ ಕಿಡ್ಸ್, ಫ್ರಾಂಚೈಸಿ ಪಾಲುದಾರರ ಜತೆ ನಿಕಟವಾಗಿ ಸಂಬಂಧ ಹೊಂದಿ ಕಾರ್ಯ ನಿರ್ವಹಿಸುತ್ತಿದ್ದು, ಸಂಘಟನಾತ್ಮಕ ಸಾಧನೆಯನ್ನು ಇದು ಖಾತರಿಪಡಿಸುತ್ತದೆ.

ಯೂರೋ ಕಿಡ್ಸ್ ನ 360 ಡಿಗ್ರಿ ಫ್ರಾಂಚೈಸ್ ಬೆಂಬಲ ಯೋಜನೆಯು ಪಾಲುದಾರರಿಗೆ ಇಂಥ ಶಾಲೆಗಳ ಸ್ಥಾಪನೆಗೆ, ನಿರ್ವಹಣೆಗೆ ಮತ್ತು ಶಾಲೆಗಳನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿ ವಿಧಾನದಲ್ಲಿ ಅಭಿವೃದ್ಧಿಪಡಿಸಲು ನೆರವಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ, ಫ್ರಾಂಚೈಸಿ ಪಾಲುದಾರರು, ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲೇ ಅಪೂರ್ವ ಅನುಭವವನ್ನು ಧಾರೆ ಎರೆಯುವಂತೆ ಸಬಲಗೊಳಿಸುವುದು ಹಾಗೂ ಎಲ್ಲ ಹಂತಗಳಲ್ಲಿ ಮೌಲ್ಯ ವಿತರಣೆಯನ್ನು ಖಾತರಿಪಡಿಸುವುದು.

EuroKids Preschool win big at Times Education Excellence Award 2019

ಇದಲ್ಲದದೇ ಎಲ್ಲ ಪ್ರಿಸ್ಕೂಲ್‍ಗಳಲ್ಲಿ ಸಮಗ್ರವಾದ ಭದ್ರತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಎಲ್ಲ ಹಂತಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಲಾಗುತ್ತದೆ. ಪ್ರಿಸ್ಕೂಲ್ ಆವರಣವು ಸಿಸಿಟಿವಿ ಕಣ್ಗಾವಲಿನಿಂದ ಸುಸಜ್ಜಿತವಾಗಿದೆ.

ಸಿಬ್ಬಂದಿಯ ಆಯ್ಕೆಯಲ್ಲಿ ಕೂಡಾ ಅವರ ಹಿನ್ನೆಲೆಯ ದೃಢೀಕರಣ ಪರೀಕ್ಷೆಗಳನ್ನು ಮಾಡಲಾಗುತ್ತದೆ ಹಾಗೂ ಸುರಕ್ಷಾ ಕ್ರಮಗಳಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಮಕ್ಕಳ ಆಟಿಕೆ ಮತ್ತು ಪೀಠೋಪಕರಣಗಳ ವಿಚಾರದಲ್ಲಿ ಕೂಡಾ ಮಕ್ಕಳ ಸುರಕ್ಷತೆಗೆ ಅಂತಾರಾಷ್ಟ್ರೀಯ ಮಾನದಂಡವನ್ನು ಅನುಸರಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+