ಸಿದ್ದರಾಮಯ್ಯ ಅವರ 'ಸಗಣಿ' ಹೇಳಿಕೆ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 21: ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ಇಡೀ ಉತ್ತರ ಕರ್ನಾಟಕ ಪ್ರವಾದಲ್ಲಿ ಮುಳಿಗಿ ಕೊಚ್ಚಿ ಹೋದಾಗ ನೀವು ಬಿರಿಯಾನಿ ತಿನ್ನುತ್ತಾ ಇದ್ದಿರಿ,ಈಗ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಅವರು ಸಗಣಿ ಎತ್ತುತ್ತಿದ್ದಾರಾ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಪ್ರವಾಹ ಪೀಡಿತರ ಕೆಸರಾದ ಮನೆಗಳನ್ನು ದೇವಸ್ಥಾನ, ಮಸೀದಿಗಳನ್ನು ಕೂಡ ಆರ್‌ಎಸ್‌ಎಸ್ ಸ್ವಚ್ಛ ಮಾಡಿದ್ದಾರೆ. ಮೂಕ ಪ್ರಾಣಿಗಳನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಹೋಗಿದ್ದಾರೆ.

ಆದರೆ ನೀವೇನು ಮಾಡಿದ್ದೀರ, ಪ್ರವಾಹದ ಸಂದರ್ಭದಲ್ಲಿ ಕೂತು ಬಿರಿಯಾನಿ ತಿಂದಿರಿ, ಈಗ ನಿಮಗೆ ಯಾವ ನೈತಿಕ ಹಕ್ಕಿದೆ ಎಂದು ಹೇಳಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಗೋ ಸಂರಕ್ಷಣೆಯ ಹೆಸರಿನಲ್ಲಿ ಇಂದು ಗುಂಪು ಹತ್ಯೆಗಳು ನಡೆಯುತ್ತಿವೆ. ಎಂದಾದರೂ ಆರ್ ಎಸ್ ಎಸ್ ನವರು ಸಗಣಿ ಎತ್ತಿ, ಬೆರಣಿ ತಟ್ಟಿದ್ದಾರಾ? ಅವರೆಲ್ಲಾ ಗೋವಿನ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಸಿದ್ದರಾಮಯ್ಯ, ಬಿಜೆಪಿಯವರನ್ನು ಲೇವಡಿ ಮಾಡಿದ್ದರು.












Click it and Unblock the Notifications