ಬೆಂಗಳೂರಿನಲ್ಲಿ ಭಿಕ್ಷಾಟನೆಗಿಳಿದ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಇಂಜಿನಿಯರ್-ನೆಟ್ಟಿಗರು ಹೇಳೋದೇನು?
ವಿಧಿ ಹೇಗೆ ಆಡಿಸುತ್ತೋ, ಯಾವಾಗ ಏನು ಆಗುತ್ತದೆಯೋ ಗೊತ್ತಿಲ್ಲ. ಸಾಮಾನ್ಯವಾಗಿ ಹುಡುಗಿ ಕೈಕೊಟ್ಟರೆ, ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಈ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳದೇ ದೊಡ್ಡ ಮಟ್ಟದ ಸಾಧಾನೆ ಮಾಡಿರುವವರನ್ನು ನೋಡಿರುತ್ತೇವೆ. ಮತ್ತೊಂದೆಡೆ ಇನ್ನೂ ಕೆಲವರು ತಲೆ ಕೆಡಿಸಿಕೊಂಡು ಕುಡಿತದ ದಾಸರಾಗಿ ಜೀವನ್ನವನ್ನು ಹಾಳು ಮಾಡಿಕೊಂಡಿರುವ ಉದಾಹರಣೆಗಳಿವೆ. ಇದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ ಎನ್ನಬಹುದು.
ಕೆಲವರು ಬಂದು-ಬಳಗವನ್ನೆಲ್ಲಾ ಕಳೆದುಕೊಂಡಿದ್ದರೂ ದೊಡ್ಡ ಮಟ್ಟದಲ್ಲಿ ಬೆಳೆದರೆ, ಇದೇ ಸಾಲಿನ ಇನ್ನೂ ಕೆಲವರು ಬೇರೆ ದಾರಿಯಿಲ್ಲದೆ, ಭೀಕ್ಷಾಟನೆಗೆ ಇಳಿದ ಘಟನೆಗಳು ಬೆಳಕಿಗೆ ಬರುತ್ತಿವೆ. ಹೀಗೆ ವೃತ್ತಿಪರನಾಗಿದ್ದ ವ್ಯಕ್ತಿಯೊಬ್ಬ ತಂದೆ-ತಾಯಿ ಕಳೆದುಕೊಂಡು ಕರ್ನಾಟಕ ರಾಜಧಾನಿ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕೈತುಂಬಾ ಸಂಬಳ ಸಿಗುವ ಕೆಲಸ, ಮನೆ, ಕುಟುಂಬ ಎಲ್ಲವೂ ಇದ್ದವರು ಸಹ ಕೊನೆಗೆ ಒಂದು ದಿನ ಏನು ಇಲ್ಲದವರಂತೆ ಬದುಕುತ್ತಿರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬ ವ್ಯಕ್ತಿಯೂ, ಒಂದು ಕಾಲದಲ್ಲಿ ಯಶಸ್ವಿ ವೃತ್ತಿಪರನಾಗಿದ್ದನು. ಜರ್ಮನಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕೈ ತುಂಬಾ ಸಂಬಳ ಸಿಗುವ ಉದ್ಯೋಗದಲ್ಲಿದ್ದನು. ಆದರೆ ಇದೀಗ ಬೆಂಗಳೂರಿನಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾನೆ.
ಕರ್ನಾಟಕ ಪೋರ್ಟ್ ಪೋಲಿಯೊ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವ್ಯಕ್ತಿಯ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ವ್ಯಕ್ತಿಯೂ, ನಾನು 2013ರಲ್ಲಿ ಫ್ರಾಂಕರ್ಟ್‌ನಲ್ಲಿದ್ದೆ, ನಂತರ ಬೆಂಗಳೂರಿಗೆ ಬಂದೆ. ಬಳಿಕ ನಾನು ಗ್ಲೋಬಲ್ ವಿಲೇಜ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಹೆತ್ತವರನ್ನು ಕಳೆದುಕೊಂಡೆ, ಎಂದು ಹೇಳಿದ್ದಾರೆ.
ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಎಂಎಸ್ ಶಿಕ್ಷಣವನ್ನು ಪೂರ್ಣಗೊಳಿಸಿ, ಗ್ಲೋಬಲ್ ವಿಲೇಜ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಈ ವ್ಯಕ್ತಿಯೂ ಜೀವನದಲ್ಲಿ ವಿಧಿ ಆಟ ಆಡಿದೆ. ಹೆತ್ತವರನ್ನು ಹಾಗೂ ಪ್ರೀತಿಸುತ್ತಿದ್ದ ಹುಡುಗಿಯೂ ಕಳೆದುಕೊಂಡ ವ್ಯಕ್ತಿಯೂ ಕುಡಿತದ ದಾಸನಾಗಿದ್ದಾನೆ. ಇದೀಗ ಜೀವನ ಸಾಗಿಸಲು ಬೆಂಗಳೂರಿನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾನೆ.
ನೆಟ್ಟಿಗರೊಬ್ಬರು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರತಿಕ್ರಿಯಿಸಿ ಇದು ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ತಂದೆ-ತಾಯಿ ಬಿಟ್ಟು ಅವನಿಗೆ ಕುಟುಂಬದ ಸದಸ್ಯರಿದ್ದಾರೆಯೇ, ಅವರು ಆತನನ್ನು ಹುಡುಕುತ್ತಿರಬಹುದು. ಆದರೆ, ಈ ವ್ಯಕ್ತಿ ಕುಟುಂಬದ ಸದಸ್ಯರಿಗೆ ಸಿಗದೇ ಇರಬಹುದು ಎಂದಿದ್ದಾರೆ. ಮತ್ತೊಬ್ಬರು ನೀವು ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದರಿಂದ ದಯವಿಟ್ಟು ಆತನಿಗೆ ಸರಿಯಾದ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಹೀಗೆ ಹಲವರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಗಮನಿಸುವುದಾದರೆ, ಎಷ್ಟು ಜನ ತಂದೆ-ತಾಯಿ ಬಂದು ಬಳಗವನ್ನೆಲ್ಲ ಕಳೆದುಕೊಂಡವರು ದೊಡ್ಡ ದೊಡ್ಡ ಸಾಧನೆ ಮಾಡಿರುವ ಉದಾಹರಣೆಗಳಿವೆ. ಇನ್ನು ಪ್ರೀತಿಯ ಬಲೆಗೆ ಬಿಂದು ಮೋಸ ಹೋದವರು ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೇ ಉನ್ನತ ಮಟ್ಟದಕ್ಕೆ ಬೆಳೆದಿರುವುದನ್ನು ಕೂಡ ನೋಡಿದ್ದೇವೆ. ಆದರೆ ಈ ಘಟನೆ ಮಾತ್ರ ಸ್ವಲ್ಪ ವಿಚಿತ್ರವಾಗಿದ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು: ಇತ್ತೀಚಿನ ಆಧನಿಕ ಯುಗದಲ್ಲಿ ಬದುಕು ಸಾಗಿಸಲು ಸಾವಿರಾರು ಉತ್ತಮ ದಾರಿಗಳಿವೆ. ಆದರೆ, ತಜ್ಞರು ಹೇಳುವ ಪ್ರಕಾರ ವಿದ್ಯೆ ಜೊತೆ ಬುದ್ಧಿ, ಪ್ರಯೋಗಿಕ ಜ್ಞಾನವು ಇರಬೇಕಾಗುತ್ತದೆ. ಬರೀ ವಿದ್ಯೆಯಷ್ಟೇ ಇದ್ದು ಬೇರೆನು ಗೊತ್ತಿರದಿದ್ದರೆ, ಕೊನೆಗೆ ತಾನು ಕೆಲಸ ಮಾಡುತ್ತಿದ್ದ ಕಂಪನಿ ಕೆಲಸದಿಂದ ತೆಗೆದುಹಾಕಿದರೆ ಏನು ಮಾಡುವುದಕ್ಕೂ ಆಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ.
ಇದು ಒಬ್ಬ ವ್ಯಕ್ತಿಗೆ ಅವಮಾನ ಆಗಲಿ ಎನ್ನುವ ಉದ್ದೇಶ ಇಟ್ಟುಕೊಂಡು ಈ ಮಾತನ್ನು ಹೇಳುತ್ತಿಲ್ಲ. ವಯಸ್ಸು ಇದ್ದಾಗಲೇ ತಂತ್ರಜ್ಞಾನದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕಾಗುತ್ತದೆ. ಅಲ್ಲದೆ, ಒಂದು ಕೆಲಸ ಹೋದರೆ, ಮತ್ತೊಂದು ಕೆಲಸ ಮಾಡಲು ಅಥವಾ ತಾವೇ ಸ್ವಂತ ಕಂಪನಿ ಕಟ್ಟಲಿಕ್ಕೆ ಆಗದಿದ್ದರೂ ಕೃಷಿ ಮಾಡುವುದಕ್ಕೂ ಜ್ಞಾನ ಬೇಕೇ ಬೇಕಾಗುತ್ತದೆ.
ಕೃಷಿಯ ಮೂಲಕ ಅದೆಷ್ಟೋ ಜನರು ದೇಶ, ವಿದೇಶ ಮಟ್ಟದಲ್ಲಿ ಗುರುತಿಸಿಕೊಂಡು ಬಾಳು ಬಂಗಾರವಾಗಿಸಿಕೊಂಡ ಉದಾಹರಣೆಗಳಿವೆ. ಅಂತಹ ಶಕ್ತಿ ನಮ್ಮ ಕೃಷಿ ಕ್ಷೇತ್ರಕ್ಕಿದೆ. ಇದಕ್ಕೂ ಕೂಡ ಜ್ಞಾನ ಇರಬೇಕಾಗುತ್ತದೆ. ಕೆಲವೊಬ್ಬರು ತಾವು ಮಾಡಿರುವ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸಗಳನ್ನು ಹುಡುಕುತ್ತಲೇ ಜೀವನ ಕಳೆಯುವುದನ್ನು ನಾವು ನೋಡಿದ್ದೇವೆ. ಕೊನೆಗೆ ಯಾವುದೇ ದಾರಿಯಿಲ್ಲದೆ, ಜೀವನ ಸಾಗಿಸಲಿಕ್ಕಾಗಿ ಸಿಕ್ಕ ಕೆಲಸವನ್ನು ಮಾಡುವರೇ ಹೆಚ್ಚಿದ್ದಾರೆ. ಆದರೆ, ಮೊದಲಿಗೆ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಕೊನೆವರೆಗೂ ಕೈಹಿಡಿಯುವಂತಹ ಕೆಲಸದ ಕಡೆ ಹೆಚ್ಚಿನ ಗಮನಹರಿಸಿ. ಇದರಿಂದ ಮುಂದೆ ಸುಖ ಕಾಣಬಹುದು ಎನ್ನುವುದೇ ನಮ್ಮ ಆಶಯವಾಗಿದೆ.












Click it and Unblock the Notifications