ಬನ್ನೇರುಘಟ್ಟದಲ್ಲಿ ಆನೆ ದಾಳಿ, ಮಹಿಳೆ ಬಲಿ
ಬೆಂಗಳೂರು, ಜೂ. 17 : ಮಂಗಳವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂಟಿ ಸಲಗದ ದಾಳಿಯಿಂದ ಗಾಯಗೊಂಡಿದ್ದ ಮಹಿಳೆ ಬುಧವಾರ ಸಾವನ್ನಪ್ಪಿದ್ದಾಳೆ. ಐವರು ಕೂಲಿ ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು.
ಆನೆದಾಳಿಯಿಂದ ಗಾಯಗೊಂಡ ನಾಗಮ್ಮ (60) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆನೆ ದಾಳಿಯಿಂದಾಗಿ ನಾಗಮ್ಮ ಅವರು ಸೊಂಟ ಮುರಿದಿತ್ತು. [ಒಂಟಿ ಸಲಗ ದಾಳಿ, ಐವರಿಗೆ ಗಾಯ]

ಬನ್ನೇರುಘಟ್ಟದ ಸಫಾರಿ ದಾರಿಯ ಸೀಗೆಕಟ್ಟೆ ಬಳಿ ಮಂಗಳವಾರ ಬೆಳಗ್ಗೆ ಒಂಟಿ ಸಲಗ ಮಹೇಶ್ವರಿ, ನಾಗಮ್ಮ ಮತ್ತು ಮೂವರು ಮಕ್ಕಳ ಮೇಲೆ ದಾಳಿ ಮಾಡಿತ್ತು. ದಾಳಿಯಿಂದಾಗಿ ಮಹೇಶ್ವರಿ ಅವರ ಕಾಲು ಮುರಿದಿದ್ದು, ಸಂಜರ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಬನ್ನೇರುಘಟ್ಟದಲ್ಲಿ ಸಿಬ್ಬಂದಿ ಮೇಲೆ ಸಿಂಹದ ದಾಳಿ]
ಮಂಗಳವಾರ ಬೆಳಗ್ಗೆ ಬನ್ನೇರುಘಟ್ಟದ ಸಫಾರಿ ರಸ್ತೆಯ ಕಾಮಗಾರಿಗಾಗಿ ಆಗಮಿಸುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು.












Click it and Unblock the Notifications