Get Updates
Get notified of breaking news, exclusive insights, and must-see stories!

ಬೆಂಗಳೂರು : ವೃದ್ಧ ದಂಪತಿಗಳ ಮೇಲೆ ಹಲ್ಲೆ, ಪತಿ ಸಾವು

ಬೆಂಗಳೂರು, ಡಿ.18 : ಬೆಂಗಳೂರಿನಲ್ಲಿ ವೃದ್ಧ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನ ದೋಚಿರುವ ಘಟನೆ ನಡೆದಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ರಾಘವೇಂದ್ರ ರಾವ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬನಶಂಕರಿ ಮೂರನೇ ಹಂತದ ಇಟ್ಟಮಡುವಿನ 10ನೇ ತಿರುವಿನಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಿವೃತ್ತ ನ್ಯಾಯಾಲಯ ಅಧಿಕಾರಿ ರಾಘವೇಂದ್ರರಾವ್ (70) ಮತ್ತು ಅವರ ಪತ್ನಿ ಸುಧಾ (68) ಅವರ ಮೇಲೆ ಹಲ್ಲೆ ನಡೆದಿದೆ.

Ittamadu

ರಾಘವೇಂದ್ರ ರಾವ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬರು ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ಮಧು ಎನ್ನುವವರು ಹತ್ಯೆ ನಡೆದ ಮನೆಯಿಂದ 100 ಮೀಟರ್ ಅಂತರದಲ್ಲೇ ಇರುವ ಮತ್ತೊಂದು ಮನೆಯಲ್ಲಿ ವಾಸವಾಗಿದ್ದರು. [ಜಯನಗರ ತ್ರಿವಳಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ]

ಮಗ ಬಂದಾಗ ಬೆಳಕಿಗೆ ಬಂತು : ಮಧು ತಂದೆ-ತಾಯಿಯನ್ನು ಮಾತನಾಡಿಸಿಕೊಂಡು ಹೋಗಲು ಪ್ರತಿದಿನ ಮನೆಗೆ ಬರುತ್ತಿದ್ದರು. ಅಂತೆಯೇ ಬುಧವಾರ ರಾತ್ರಿ 8.30ರ ಸುಮಾರಿಗೆ ತಂದೆಯ ಮನೆಗೆ ಬಂದಾಗ, ಲೈಟ್‌ಗಳು ಆಫ್ ಆಗಿದ್ದವು, ಟಿವಿ ಮಾತ್ರ ಆನ್ ಆಗಿತ್ತು. [ಜಯನಗರದಲ್ಲಿ ಒಂಟಿ ಮಹಿಳೆ ಕೊಲೆ]

ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆ ತಾಯಿಯನ್ನು ಅವರು ನೋಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಾಯದಿಂದ ತೀವ್ರವಾಗಿ ಗಾಯಗೊಂಡಿದ್ದ ತಾಯಿಯನ್ನು ಸಮೀಪದ ದೇವೇಗೌಡ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ರಾಘವೇಂದ್ರ ರಾವ್ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆದಾರರಿದ್ದು ಅಕ್ಕ ಪಕ್ಕದ ಮನೆಯವರೂ ಬಾಗಿಲು ತೆರೆದುಕೊಂಡೇ ಇದ್ದರು. ಆದರೂ ಸಂಜೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ರಾಘವೇಂದ್ರ ರಾವ್ ಪತ್ನಿಯ ಕೊರಳಿನಲ್ಲಿದ್ದ ಚಿನ್ನದ ಸರ ಕಾಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಚನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+