ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ

ಬೆಂಗಳೂರು ನಗರದ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ. ಟೆಂಡರ್ ಕರೆಯದೇ ಬಿಬಿಎಂಪಿ ವಿಳಂಬ ಮಾಡುತ್ತದೆ. ಈ ಕುರಿತು ಈಜಿಪುರ ಸ್ಥಳಿಯ ನಿವಾಸಿಗಳು ಬಿಬಿಎಂಪಿಗೆ ಎಚ್ಚರಿಕೆ ನೀಡಿದ್ದಾರೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ಬೆಂಗಳೂರು ನಗರದ ಸಂಚಾರದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಹಿಂದೆ ನೀಡಿದ್ದ ಭರವಸೆ ಮತ್ತೆ ಹುಸಿಗೊಳಿಸುವ ಮೂಲಕ ಜನರ ಆಕ್ರೋಶ ಗುರಿಯಾಗಿದೆ.

ಈ ಹಿಂದೆ 2 ಬಾರಿ ಟೆಂಡರ್ ರದ್ದು ಮಾಡಿದ್ದ ಬಿಬಿಎಂಪಿಯು ಮೂರನೇ ಬಾರಿಗೆ ಕರೆಯಲಾಗಿರುವ ಟೆಂಡರ್‌ ಅಂತಿಮಗೊಳಿಸವುಲ್ಲಿ ಸಮಯ ಮೀರಿ ಹೋಗಿದೆ. ಹೀಗಿದ್ದರು ಅಗ್ಯ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಹೀಗಾಗಿ ಉದ್ದೇಶಿತ ಈಜಿಪುರ ಮೇಲ್ಸೇತುವೆ ಸುತ್ತಮುತ್ತಲಿನ ನಿವಾಸಿಗಳು ಹೋರಾಟಕ್ಕೆ ನೀರ್ಧರಿಸಿದ್ದಾರೆ.

ಬೆಂಗಳೂರು ಹೊರ ವಲಯದಲ್ಲಿ ವಿಕಿರಣಶೀಲ ರೇಡಾನ್ ಪತ್ತೆ, ಐಐಎಸ್‌ಸಿ ಹೇಳೋದೇನು? ಬೆಂಗಳೂರು ಹೊರ ವಲಯದಲ್ಲಿ ವಿಕಿರಣಶೀಲ ರೇಡಾನ್ ಪತ್ತೆ, ಐಐಎಸ್‌ಸಿ ಹೇಳೋದೇನು?

ಆರು ವರ್ಷಗಳ ಹಿಂದೆ ಆರಂಭವಾಗಿದ್ದ (2017) ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಈ ಯೋಜನೆ ಆರಂಭದಿಂದಲೂ ಹಿನ್ನೆಡೆ ಅನುಭವಿಸುತ್ತಲೇ ಬಂತು. ಗುತ್ತಿಗೆದಾರರ ವಿಳಂಬ, ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಬಿಬಿಎಂಪಿ ಗುತ್ತಿಗೆಯನ್ನು 2022ರ ಮಾರ್ಚ್‌ 9ರಂದು ರದ್ದುಪಡಿಸಿದ್ದು ಸೇರಿದಂತೆ ಅನೇಕ ಸಮಸ್ಯೆಗಳು ಈ ಕಾಮಗಾರಿಗೆ ಎದುರಾದವು.

Ejipura Flyover: BBMP Again Delaying In Inviting Tender For Ejipura Flyover Work

ಹೈಕೋರ್ಟ್‌ ಮೂರು ತಿಂಗಳಲ್ಲಿ ಮರು ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು. ಆದಷ್ಟು ತ್ವರಿತಗತಿಯಲ್ಲಿ ಕಾಮಗಾರಿ ಮಾಡಿ ಮುಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಾಗಿ ವರ್ಷ ಕಳೆದರೂ ಇನ್ನೂ ಸಹ ನೀಡಿದ ಭರವಸೆಯಂತೆ ಟೆಂಡರ್ ಪ್ರಕ್ರಿಯೆಯನ್ನು ಬಿಬಿಎಂಪಿ ನಡೆಸಲಿಲ್ಲ. ಹೀಗಾಗಿ ಕಾಮಗಾರಿ ಮತ್ತಷ್ಟು ವಿಳಂಬವಾಗುವ ನಿರೀಕ್ಷೆ ಇದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಮ್ಮೆ ಮತ್ತು ಜನವರಿಯಲ್ಲಿ ಎರಡನೇ ಬಾರಿ ಟೆಂಡರ್‌ ಅನ್ನು ಬಿಬಿಎಂಪಿ ರದ್ದುಗೊಳಿಸಿತು. ಇದರಿಂದ ಈಜಿಪುರ ಭಾಗದ ನಿವಾಸಿಗಳ ಒತ್ತಾಯ ಹೆಚ್ಚಾದ ಬೆನ್ನಲ್ಲೆ ಎಚ್ಚೆತ್ತುಕೊಂಡಂತೆ ನಟಿಸಿದ ಬಿಬಿಎಂಪಿ ಡಿಸೆಂಬರ್‌ನಲ್ಲಿ ನಡೆದ ನಾಗರಿಕರ ಸಭೆ ನಡೆಸಿತು. ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಆ ಭರವಸೆ ಈಡೇರಿಲ್ಲ. ಫೆಬ್ರವರಿ ಆರಂಭವಾಗಿ ವಾರದ ಕಳೆದರೂ ಯೋಜನೆ ಆರಂಭವಾಗಿಲ್ಲ.

ಕಳೆದ ಜನವರಿ 6ರಂದು ಟೆಂಡರ್‌ ಆಹ್ವಾನಿಸಿ 25 ರಂದು ಅದನ್ನು ತೆರವು ಮಾಡಬೇಕಿತ್ತು. ಆದರೆ ಅದನ್ನು ಮೊನ್ನೆ ಶನಿವಾರ (ಫೆ.4) ದಂದು ತೆರೆಯಲಾಗಿದೆ. ಈ ಮೂಲಕ ಮತ್ತೆ ವಿಳಂಬ ನೀತಿ ಅನುಸರಿಸಲು ಬಿಬಿಎಂಪಿ ಮುಂದಾಗಿದೆ ಎಂದು ಸ್ಥಳಿಯರು ದೂರಿದರು.

Ejipura Flyover: BBMP Again Delaying In Inviting Tender For Ejipura Flyover Work

ಯೋಜನೆಯಲ್ಲಿ ಈಜಿಪುರ ಮೇಲ್ಸೇತುವೆ 2.5 ಕಿಲೋ ಮೀಟರ್ ಉದ್ದದ ಸಿಗ್ನಲ್ ಫ್ರಿ ಕಾರಿಡಾರ್‌ ಆಗಿದೆ. 2014ರಲ್ಲಿ ಇದರ ಯೋಜನೆ ರೂಪಿಸಲಾಗಿದೆ. 2017ರಲ್ಲಿ 157.66 ಕೋಟಿಗೆ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿತ್ತು. ನಿಗದಿಯಂತೆ 2019ರ ವೇಳೆಗೆ ಮೇಲ್ಸೇತುವೆ ಪೂರ್ಣಗೊಳ್ಳಬೇಕಿತ್ತು. ಆದರೆ ಗುತ್ತಿಗೆದಾರರು ವಿಳಂಬ, ಕಾನೂನು ತೊಡಕಿನಿಂದ ತಡವಾಯಿತು.

ಯೋಜನೆ ವೆಚ್ಚ 218 ಕೋಟಿ ರೂ.ಗೆ ಏರಿಕೆ!

2023ರವರೆಗೂ ಹೋಲಿಕೆ ಮಾಡಿದರೆ ಯೋಜನೆಯ ಶೇಕಡಾ 42ರಷ್ಟು ಕಾಮಗಾರಿ ಮಾತ್ರವೇ ಮಾಡಲಾಗಿದೆ. ರೂ.75.11 ಕೋಟಿ ಹಣ ಗುತ್ತಿಗೆದಾರರಿಗೆ ಪಾವತಿಯಾಗಿತ್ತು. ಸದ್ಯ ಬಾಕಿ ಉಳಿದ ಕೆಲಸಕ್ಕೆ ರೂಪಾಯಿ 143.80 ಕೋಟಿ ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದೆ. ಮುಂದಿನ 15 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ. ರೂ.157 ಕೋಟಿ ಯೋಜನೆಯ ಅಂದಾಜು ವೆಚ್ಚ ಸದ್ಯಕ್ಕೆ ರೂ. 218 ಕೋಟಿಗೆ ಏರಿಕೆ ಗಿದೆ. ಕೋಟಿಗಟ್ಟಲೆ ವ್ಯಯಿಸುವ ಯೋಜನೆ ಜನರ ಬಳಕೆ ಯಾವಾಗ? ಎಂಬುದೇ ಯಕ್ಷಪ್ರಶ್ನೆಯಾಗಿದೆ. ಕಾಮಗಾರಿ ಆರಂಭಿಸದಿದ್ದರೆ ಬೀದಿಗಳಿಯುತ್ತೇವೆ ಎಂದು ಕೋರಮಂಗಲ ಎಸ್‌ಟಿ ಬೆಡ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಎಚ್ಚರಿಸಿದ್ದಾರೆ.

ನೀಡಿದ ಭರವಸೆಯಂತೆ ಬಿಬಿಎಂಪಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ನಿರತವಾಗಿದೆ. 3-4 ದಿನದಲ್ಲಿ ಟೆಂಡರ್ ಅನುಮೋದನೆಗೆ ಸಮಿತಿ ಮುಂದಿಡುತ್ತೇವೆ. ನಂತರವೇ ಎಲ್ಲ ಕೆಲಸವು ಮುಂದುವರಿಯಲಿದೆ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ವಿನಾಯಕ ಎಸ್‌. ಸುಗೂರ ತಿಳಿಸಿದರು.

English summary
Ejipura Flyover: Bruhat Bengaluru Mahanagara Palike (BBMP) delaying in inviting tender for Ejipura flyover work,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X