Bengaluru: ಬೆಂಗಳೂರಿನ ರಸ್ತೆಯಲ್ಲಿ ಖ್ಯಾತ ಬ್ರಿಟಿಷ್ ಸಂಗೀತಗಾರನ ಕಾರ್ಯಕ್ರಮಕ್ಕೆ ಪೊಲೀಸರ ಅಡ್ಡಿ
ಖ್ಯಾತ ಬ್ರಿಟಿಷ್ ಸಂಗೀತಗಾರ ಎಡ್ ಶಿರನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಕಾರ್ಯಕ್ರಮ ನೀಡುವ ಸಂದರ್ಭದಲ್ಲಿ ಪೊಲೀಸರು ಅಡ್ಡಿಪಡಿಸಿದ್ದಾರೆ. ಫೆಬ್ರವರಿ 9 ರಂದು ಈ ಘಟನೆ ನಡೆದಿದ್ದು ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಪೊಲೀಸರ ಕ್ರಮವನ್ನು ಟೀಕಸಿದ್ದರೆ ಇನ್ನೂ ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಚರ್ಚ್ ಸ್ಟ್ರೀಟ್‌ನಲ್ಲಿ ಪ್ರದರ್ಶನ ನೀಡುವಾಗ ಮಧ್ಯಪ್ರವೇಶಿಸಿದ ಪೊಲೀಸರು, ಮೈಕ್ರೋಫೋನ್ ಅನ್ನು ಅನ್‌ಪ್ಲಗ್ ಮಾಡಿದ್ದಾರೆ. ತನ್ನ ಜನಪ್ರಿಯವಾದ ಶೇಪ್ ಆಫ್ ಯು ಪ್ರದರ್ಶಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪೊಲೀಸರು ಆತ ಅನುಮತಿ ಪಡೆಯದ ಕಾರಣ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಎಡ್ ಶೀರನ್ ತಮ್ಮ ಭದ್ರತಾ ತಂಡದ ಜೊತೆ ಸ್ಥಳಕ್ಕೆ ಬಂದಾಗ ಪ್ರೇಕ್ಷಕರು ಅವರನ್ನು ಸಂಭ್ರಮದಿಂದ ಸ್ವಾಗತಿಸಿದರು. ಕಾರ್ಯಕ್ರಮಮ ಆರಂಭಿಸುವ ಮೊದಲು, ಶೀರನ್ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು, ನಾವು ಹಲವು ಹಾಡುಗಳನ್ನು ಹಾಡಬೇಕೆಂದುಕೊಂಡಿದ್ದೆವು, ಆದರೆ ನಮಗೆ ಒಂದೇ ಒಂದು ಹಾಡನ್ನು ಹಾಡನು ಕೇಳಲಾಗಿದೆ ಎಂದರು.
ಅವರು ತಮ್ಮ ಜನಪ್ರಿಯ ಶೇಪ್ ಆಫ್ ಯು ಸಂಗೀತವನ್ನು ನುಡಿಸಲು ಆರಂಭಿಸುತ್ತಿದ್ದಂತೆ ಜನರ ಉತ್ಸಾಹ ಹೆಚ್ಚಾಯಿತು. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಪ್ರದರ್ಶನವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಅವರ ಮೈಕ್ರೋಫೋನ್ ಮತ್ತು ಮ್ಯೂಸಿಕ್ ವಾದ್ಯಗಳನ್ನು ಅನ್‌ಪ್ಲಗ್ ಮಾಡಿದರು.
ಕಾರ್ಯಕ್ರಮಕ್ಕೆ ಸರಿಯಾದ ಅನುಮತಿ ಪಡೆಯದ ಕಾರಣ ಅರ್ಧದಲ್ಲೇ ನಿಲ್ಲಿಸಬೇಕಾಯಿತು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಯಾರೋ ಸಾರ್ವಜನಿಕವಾಗಿ ಕಿರಿ ಕಿರಿ ಮಾಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದರಿಂದಲೇ ಪೊಲೀಸರು ಅಲ್ಲಿಗೆ ಬಂದರು. ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದರೆ ಅವರು ಪೊಲೀಸರಿಗೆ ತೋರಿಸಬೇಕಿದ್ದು ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಅಭಿಮಾನಿಗಳು ಈ ಘಟನೆಯ ವಿಡಿಯೋವನ್ನು ಸೆರೆಹಿಡಿದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬಗೆ ಬಗೆಯ ಪ್ರತಿಕ್ರಿಯೆಗಳು ಬರುತ್ತಿದೆ. ಹಲವರು ಭಾರತದಲ್ಲಿ ಮಾತ್ರ ಇಂತಹ ಘಟನೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಅಂತಾರಾಷ್ಟ್ರೀಯ ಕಲಾವಿದ ಎಡ್ ಶೀರನ್ ಅವರ ಕಾರ್ಯಕ್ರಮವ್ನನು ಅರ್ಧಕ್ಕೆ ನಿಲ್ಲಿಸಲಾಗಿದೆ, ಅವರು ಅನುಮತಿ ಪಡೆದಿದ್ದರೂ ಪೊಲೀಸರು ಕಾರ್ಯಕ್ರಮಕ್ಕೆ ಅಡ್ಡಿಯಾಗಿದ್ದಾರೆ, ಇದರಿಂದ ಬೇಜಾರಾಗಿದೆ ಎಂದು ಒಬ್ಬರು ಬರೆದಿದ್ದಾರೆ.
ಒಂದಷ್ಟು ಜನ ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಅಧಿಕಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಎಂತಹ ದೊಡ್ಡ ಕಲಾವಿದರು ಮತ್ತು ಬೀದಿ ನಾಯಕರ ನಡುವೆ ತಾರತಮ್ಯ ಮಾಡಿಲ್ಲ, ಇದಕ್ಕಾಗಿ ಅವರಿಗೆ ಪ್ರಶಸ್ತಿ ನೀಡಬೇಕು ಎಂದಿದ್ದಾರೆ.












Click it and Unblock the Notifications