ಕೊರೊನಾ: ಪ್ರಧಾನಿ ಮೋದಿ ವಿರುದ್ದ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

ಬೆಂಗಳೂರು, ಮೇ 24: "ಭಾರತದಲ್ಲಿ ಮಾರಣಾಂತಿಕ ಕೊರೊನಾ ವಕ್ಕರಿಸಿದ್ದು ಪ್ರಧಾನಿ ಮೋದಿಯವರ ಅಸಮರ್ಥತೆಯಿಂದ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Recommended Video

      ದೇವಸ್ಥಾನದ ಅರ್ಚಕರಿಗೆ ಸರ್ಕಾರ ಎಷ್ಟು ಹಣ ಕೊಡ್ತಿದೆ | Srinivas poojari | Oneindia Kannada

      ಮಾಗಡಿ ತಾಲೂಕಿನ ಕದೂರಿನಲ್ಲಿ ಪಕ್ಷದ ವತಿಯಿಂದ ರಂಜಾನ್ ಪ್ರಯುಕ್ತ ಮುಸ್ಲಿಮರಿಗೆ ಫುಡ್ ಕಿಟ್ ವಿತರಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

      "ಬಿಜೆಪಿ ಮತ್ತು ಸಂಘ ಪರಿವಾರದವರು ಭಾರತಕ್ಕೆ ಕೊರೊನಾ ಬಂದಿದ್ದು ತಬ್ಲಿಘಿಗಳಿಂದ ಎಂದು ಹೇಳುತ್ತಾರೆ. ನಮ್ಮ ದೇಶಕ್ಕೆ ಆ ವೈರಸ್ ಬಂದಿದ್ದು ಖುದ್ದು ಪ್ರಧಾನಿಯವರಿಂದಲೇ"ಎಂದು ಸಿದ್ದರಾಮಯ್ಯ ಹೇಳಿದರು.

      Due To PM Modi Inefficiency Coronavirus Spreaded In India:Siddaramaiah Statement

      "ಕೇರಳದಲ್ಲಿ ಮೊದಲು ಸೋಂಕು ಪತ್ತೆಯಾದಾಗಲೇ ಅಂತರಾಷ್ಟ್ರೀಯ ವಿಮಾನಯಾನವನ್ನು ಬಂದ್ ಮಾಡಿದ್ದರೆ, ನಮ್ಮ ದೇಶಕ್ಕೆ ಕೊರೊನಾ ಬರುತ್ತಿರಲಿಲ್ಲ. ತಾವು ಮಾಡಿದ ತಪ್ಪನ್ನು ತಬ್ಲಿಘಿಗಳ ಮೇಲೆ ಹಾಕಲಾಗುತ್ತಿದೆ"ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

      "ಚೀನಾ, ಇಟೆಲಿ, ಸ್ಪೇನ್ ಮುಂತಾದ ಕಡೆ ಕೊರೊನಾ ತಾಂಡವಾಡುತ್ತಿದೆ. ಅಲ್ಲೇನು ತಬ್ಲಿಘಿಗಳು ಇದ್ದರೇ" ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, "ಮೋದಿಯಿಂದ ದೇಶಕ್ಕೆ ಕೊರೊನಾ ಬಂದಿದೆಯೇ ವಿನಃ, ತಬ್ಲಿಘಿಗಳಿಂದ ಅಲ್ಲ"ಎಂದು ಹೇಳಿದರು.

      "ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ"ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+