ಡ್ರಗ್ ಮಾಫಿಯಾ ಕಿಂಗ್ ಪಿನ್ ಬಂಧಿಸಿದ ಸಿಸಿಬಿ ಪೊಲೀಸರು
ಬೆಂಗಳೂರು, ಡಿಸೆಂಬರ್ 15: ಬೆಂಗಳೂರಿನಲ್ಲಿ ಕೊಕೇನ್ ಪೂರೈಕೆ ಜಾಲ ನಿರ್ವಹಿಸುತ್ತಿದ್ದ ವಿದೇಶಿ ಕಿಂಗ್ ಪಿನ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಈತನನ್ನು ಬಂಧಿಸಲಾಗಿದ್ದು, ಬಂಧಿತನನ್ನು ಚೀಡಿಬೀರ್ ಆಂಬ್ರೋಸ್ ಅಲಿಯಾಸ್ ಚೀಫ್ ಎಂದು ಗುರುತಿಸಲಾಗಿದೆ. ಆಂಬ್ರೋಸ್, ಚೀಫ್ ಎಂದೇ ಡ್ರಗ್ ಮಾಫಿಯಾದಲ್ಲಿ ಕುಖ್ಯಾತಿ ಪಡೆದಿದ್ದ. ಈ ಮುನ್ನ ಇಲ್ಲಿ ಬಂಧಿಸಲಾಗಿದ್ದ ನೈಜೀರಿಯಾ ಡ್ರಗ್ ಪೆಡ್ಲರ್ ಗಳ ಜೊತೆ ಈತನ ಸಂಪರ್ಕವಿದ್ದುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಡ್ರಗ್ ಜಾಲದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು ಈ ಸಂಬಂಧ ಹಲವರನ್ನು ಬಂಧಿಸಿದ್ದರು. ಈಚೆಗೆ ನೈಜೀರಿಯಾ ಮೂಲದ ಕೆಲವರನ್ನು ಬಂಧನಕ್ಕೆ ಒಳಪಡಿಸಿದ್ದರು. ಇದೀಗ ಜಾಲವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯನ್ನೂ ಬಂಧಿಸಿದ್ದಾರೆ.

ಆಂಬ್ರೋಸ್ ನಿಂದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಗಳು ಕೊಕೇನ್ ಖರೀದಿಸಿ ಇಲ್ಲಿ ಮಾರಾಟ ಮಾಡುತ್ತಿದ್ದ ವಿಷಯ ತನಿಖೆ ವೇಳೆ ತಿಳಿದುಬಂದಿದೆ. ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.












Click it and Unblock the Notifications