ಡ್ರಗ್ ಡೀಲ್ ಭಾಗ 2 : ಹೈದರಾಬಾದ್‌ನ ನಟ ಸೇರಿ ಐವರಿಗೆ ನೋಟಿಸ್ ಜಾರಿ

ಬೆಂಗಳೂರು, ಮಾರ್ಚ್ 12: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದ ಎರಡನೇ ಅಧ್ಯಾಯ ಮತ್ತೆ ಆರಂಭವಾಗಿದೆ. ಗೋವಿಂದಪುರ ಪೊಲೀಸರು ಇತ್ತೀಚೆಗೆ ಪತ್ತೆ ಮಾಡಿದ ಡ್ರಗ್ ಡೀಲ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರ ಜತೆಗೆ ಟಾಲಿವುಡ್ ನಂಟು ಇರುವ ಸಂಗತಿ ಹೊರ ಬಿದ್ದಿದೆ. ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ, ನಿರ್ಮಾಪಕ ಶಂಕರೇಗೌಡ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣ ಸಿನಿಮಾ ಲೋಕದ ಮಾದಕ ಲೋಕವನ್ನು ಮತ್ತೆ ಬೆತ್ತಲೆ ಮಾಡುವ ಮುನ್ಸೂಚನೆ ನೀಡಿದೆ.

ವಿಕ್ಕಿ ಮಲ್ಹೋತ್ರ ಎಂಬ ಸೂತ್ರಧಾರ

ವಿಕ್ಕಿ ಮಲ್ಹೋತ್ರ ಎಂಬ ಸೂತ್ರಧಾರ

ನಿರ್ಮಾಪಕ ಶಂಕರೇಗೌಡ ಮನೆ ಮೇಲೆ ದಾಳಿ ನಡೆಸಿದ ಬಳಿಕ ಫ್ಯಾಷನ್ ಮನೋರಂಜನೆ ಹೆಸರಿನಲ್ಲಿ ಡ್ರಗ್ ಪಾರ್ಟಿ ಆಯೋಜಿಸುತ್ತಿದ್ದ ಸಂಗತಿಯನ್ನು ಗೋವಿಂದಪುರ ಪೊಲೀಸರು ಪತ್ತೆ ಮಾಡಿದ್ದರು. ಬೆಂಗಳೂರಿನಲ್ಲಿ ಲೇಟ್ ನೈಟ್ ಪಾರ್ಟಿ ಆಯೋಜಿಸಿ ಡ್ರಗ್ ಪೂರೈಸುತ್ತಿದ್ದ ಪಂಜಾಬ್ ಮೂಲದ ವಿಕ್ಕಿ ಮಲ್ಹೋತ್ರ ಎಂಬ ಸಂಗತಿ ಹೊರ ಬಿದ್ದಿತ್ತು. ಕೇವಲ ನಾಲ್ಕನೇ ತರಗತಿ ಓದು ಕೊಂಡಿದ್ದ ಮಲ್ಹೋತ್ರಾ, ಬೆಂಗಳೂರಿನ ಫ್ಯಾಷನ್ ಪಾರ್ಟಿ ಹೆಸರಿನಲ್ಲಿ ಸೆಲಬ್ರಿಟಿಗಳಿಗೆ ಗಾಳ ಹಾಕುತ್ತಿದ್ದ. ಇದೀಗ ಪೊಲೀಸರ ಬಲೆಗೆ ಬಿದ್ದರುವ ಮಲ್ಹೋತ್ರಾ ವಿಚಾರಣೆ ವೇಳೆ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಲಿಂಕ್ ಇರುವ ರಹಸ್ಯ ಬಾಯಿ ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಟಾಲಿವುಡ್ ನ ಐವರಿಗೆ ನೋಟಿಸ್ ನೋಡಿದ್ದಾರೆ.

ಹೈದರಾಬಾದ್ ಲಿಂಕ್

ಹೈದರಾಬಾದ್ ಲಿಂಕ್

ಇನ್ನು ವಿಕ್ಕಿ ಮಲ್ಹೋತ್ರಾ ಮೊಬೈಲ್ ಸಂಪರ್ಕದಲ್ಲಿ ಪ್ರತಿ‍ಷ್ಟಿತ ವ್ಯಕ್ತಿಗಳ ವಿವರಗಳು ಲಭ್ಯವಾಗಿವೆ. ಅವರು ಫ್ಯಾಷನ್ ನೈಟ್ ಪಾರ್ಟಿ ಹೆಸರಿನ ಡ್ರಗ್ ಪಾರ್ಟಿಯಲ್ಲಿ ಪಾಲ್ಗೊಂಡಿರುವ ಪೋಟೋಗಳು ಪೊಲೀಸರ ಕೈಗೆ ಸಿಕ್ಕಿವೆ. ಹೈದರಾಬಾದ್ ನಂಟು ಬಯಲಿಗೆ ಎಳೆದಿರುವ ಗೋವಿಂದಪುರ ಪೊಲೀಸರು ಟಾಲಿವುಡ್‌ನ ನಟ, ನಿರ್ಮಾಪಕ, ಉದ್ಯಮಿ ಸೇರಿದಂತೆ ಐವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ವಿಚಾರಣೆಗೆ ಸೂಚಿಸಿ ಎರಡು ದಿನದ ಹಿಂದೆಯೇ ನೋಟಿಸ್ ರವಾನಿಸಿದ್ದಾರೆ. ನಿರ್ಮಾಪಕ ಶಂಕರ್ ಗೌಡ ಆಯೋಜಿಸಿದ್ದ ಪಾರ್ಟಿಗಳಲ್ಲಿ ಈ ಐವರು ಪಾಲ್ಗೊಳ್ಳುತ್ತಿದ್ದರು. ಮಸ್ತಾನ್ ಚಂದ್ರ, ಫಯೂಮ್ ಜಾನ್ ಬಂಧನದ ವೇಳೆ ನಿರ್ಮಾಪಕ ಶಂಕರ್ ಗೌಡ ಅವರ ಡ್ರಗ್ ಲಿಂಕ್ ಬಯಲಿಗೆ ಬಂದಿತ್ತು. ಶಂಕರ್ ಗೌಡ ಮನೆ ಮೇಲಿನ ದಾಳಿ ಬಳಿಕ ಹೈದರಾಬಾದ್‌ನಲ್ಲಿರುವ ನಟ ಸೇರಿ ಐವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸ್ಯಾಂಡಲ್ ವುಡ್ ಗೆ ಸಮಸ್ಯೆ

ಸ್ಯಾಂಡಲ್ ವುಡ್ ಗೆ ಸಮಸ್ಯೆ

ಪಂಚಾಬ್ ಮೂಲದ ಕಾರ್ಯಕ್ರಮ ಆಯೋಜಕ ವಿಕ್ಕಿ ಮಲ್ಹೋತ್ರಾ ಮೊಬೈಲ್ ಗ್ಯಾಲರಿಯಲ್ಲಿ ಸ್ಯಾಂಡಲ್ ವುಡ್‌ನ ಟಾಪ್ ನಟಿಯರ ಚಿತ್ರಗಳು ಸಿಕ್ಕಿವೆ. ಇವರು ಕೂಡ ಈ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರೇ ಎಂಬ ಅನುಮಾನ ಮೂಡಿಸಿದೆ. ಸದ್ಯದ ಮಟ್ಟಿಗೆ ವಿಕ್ಕಿ ಮಲ್ಹೋತ್ರ ವಿಚಾರಣೆ ಎದುರಿಸುತ್ತಿದ್ದು, ಸ್ಫೋಟಕ ರಹಸ್ಯಗಳನ್ನು ಬಾಯಿಬಿಟ್ಟದ್ದಾನೆ. ಫ್ಯಾಷನ್ ಇವೆಂಟ್ ಹೆಸರಿನಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಅದರಲ್ಲಿ ನಟಿಯರ ಜತೆಗೆ ಶ್ರೀಮಂತರ ಉದ್ಯಮಿಗಳ ಮಕ್ಕಳು ಪಾಲ್ಗೊಳ್ಳುತ್ತಿದ್ದರು. 1 ನೇ ಮಹಡಿಯಲ್ಲಿ ಫ್ಯಾಷನ್ ಇವೆಂಟ್ ಆದರೆ, ತಳ ಮಹಡಿಯಲ್ಲಿ ಡ್ರಗ್ ಸಮಾರಾಧನೆ ನಡೆಯುತ್ತಿತ್ತು. ಮಧ್ಯರಾತ್ರಿಯಲ್ಲಿ ಡ್ರಗ್ ಫಯೂಮ್ ಜಾನ್ ಮೂಲಕ ಡ್ರಗ್ ಪೂರೈಸಲಾಗುತ್ತತ್ತು ಎಂಬ ಸಂಗತಿ ತನಿಖೆ ವೇಳೆ ಬಯಲಾಗಿದೆ.

Recommended Video

    ಡ್ರಗ್‌ ಡೀಲರ್‌ ಮಸ್ತಾನ್‌ ಜೊತೆ ಸಂಪರ್ಕದಲ್ಲಿದ್ದ ರಾಗಿಣಿ , ಸಂಜನಾ...ಮತ್ತೆ ವಿಚಾರಣೆ ಸಾಧ್ಯತೆ | Oneindia Kannada
    ಸಿಸಿಬಿ ಪ್ರಕರಣ ಕೂಡ ಇದೇ ರೀತಿ ಇ

    ಸಿಸಿಬಿ ಪ್ರಕರಣ ಕೂಡ ಇದೇ ರೀತಿ ಇ

    ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಳೇ ಡ್ರಗ್ ಡೀಲ್ ಪ್ರಕರಣ ಜಾಡು ಹಿಡಿದು ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣ ಬಯಲಿಗೆ ಎಳೆದಿದ್ದರು. ನಟಿ ರಾಗಿಣಿ, ಸಂಜನಾ ಜೈಲಿಗೆ ಹೋಗಿದ್ದರು. ಈ ಪ್ರಕರಣದಲ್ಲಿ ಕೂಡ ಪ್ರಮುಖ ಪಾತರ ವಹಿಸಿದ್ದು ಮಾತ್ರ ಇವೆಂಟ್ ಮ್ಯಾನೇಜರ್ ವೀರೇನ್ ಖನ್ನಾ. ಈತ ಆಯೋಜಿಸುತ್ತಿದ್ದ ವೀಕೆಂಟ್ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಆಗುತ್ತಿತ್ತು. ಈ ಪ್ರಕರಣದಲ್ಲಿ ಸುಮಾರು 25 ಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದರು. ಅದರಲ್ಲೂ ಸ್ಯಾಂಡಲ್ ವುಡ್ ನಟಿಯರ ನೇರ ಭಾಗಿಯಾಗಿರುವುದು ಬೆಳಕಿಗೆ ಬಂತು. ಗೋವಿಂದಪುರ ಪೊಲೀಸರು ದಾಖಲಿಸಿರುವ ಪ್ರಕರಣ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ವಿಪರ್ಯಾಸವೆಂದರೆ ಸಿಸಿಬಿ ಪೊಲೀಸರು ತನಿಖೆ ನಡೆಸಿದ ಪ್ರಕರಣದಲ್ಲಿ ಕೂಡ ಇವೆಂಟ್‌ ಮ್ಯಾನೇಜರ್ ವೀರೇನ್ ಖನ್ನಾ ಪಾತ್ರ ಪ್ರಮುಖವಾಗಿತ್ತು. ಇದೀಗ ಗೋವಿಂದಪುರ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಕೂಡ ವಿಕ್ಕಿ ಮಲ್ಹೋತ್ರಾ ಪಾರ್ಟಿ ಆಯೋಜಕನಾಗಿ ಡ್ರಗ್ ಡೀಲ್ ಮಾಡುತ್ತಿರುವುದು ವಿಶೇಷ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+