ಸಂಚಾರಿ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತು
ಬೆಂಗಳೂರು, ಡಿ. 23: ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವಾಹನ ಸವಾರರು ಮೊದಲ ಬಾರಿಗೆ ಸಂಚಾರ ನಿಯಮ ಉಲ್ಲಂಘಿಸಿದ್ದರೆ ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. [ಹೊಸ ವರ್ಷ : ಎಂ.ಜಿ. ರಸ್ತೆಯಲ್ಲಿ ಪೊಲೀಸ್ ಗಸ್ತು]
ಏನೇನು ಮಾಡಿದರೆ ಚಾಲನಾ ಪರವಾನಗಿ ಅಮಾನತು...?
- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು
- ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು
- ಬಾಡಿಗೆಗೆ ಹೋಗಲು ನಿರಾಕರಿಸುವುದು
- ನಿಗದಿಗಿಂತ ಹೆಚ್ಚು ಬಾಡಿಗೆ ಕೇಳುವುದು
- ಸರಕು ಸಾಗಣೆ ವಾಹನದಲ್ಲಿ ಜನರನ್ನು ಒಯ್ಯುವುದು
- ಅಪಘಾತ ಮಾಡಿದಾಗ ಅಲ್ಲಿ ನಿಲ್ಲದೆ ವಾಹನ ಓಡಿಸಿಕೊಂಡು ಹೋಗುವುದು
- ಪಾದಚಾರಿ ಮಾರ್ಗದಲ್ಲಿ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸುವುದು
- ವ್ಹೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದು













Click it and Unblock the Notifications