ಬೆಂಗಳೂರು: ಲಾರಿ ಚಾಲಕನನ್ನು ಬಲಿ ಪಡೆದ ಸೊಳ್ಳೆ ಬತ್ತಿ!
ಬೆಂಗಳೂರು, ಡಿಸೆಂಬರ್ 12 : ಕಂಟೈನರ್ ಲಾರಿಯೊಂದು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ನಡೆದಿದೆ.
ರಾಜಸ್ಥಾನ ಮೂಲದ ಲಾರಿ ಚಾಲಕ ಸುರೆಂದರ್ ಸಾವನ್ನಪ್ಪಿದ್ದ ದುರ್ದೈವಿ. ಸುರೆಂದರ್ ಸೋಮವಾರ ರಾತ್ರಿ ಪಾರ್ಕಿಂಗ್ ಲಾಟ್ ನಲ್ಲಿ ಲಾರಿ ನಿಲ್ಲಿಸಿ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದಾರೆ. ಸೊಳ್ಳೆ ಬತ್ತಿಯ ಕಿಡಿಯಿಂದ ಲಾರಿ ಧಗಧಗನೆ ಹೊತ್ತಿ ಉರಿದಿದ್ದು, ನಿದ್ರೆಗೆ ಜಾರಿದ್ದ ಸುರೆಂದರ್ ಸಜೀವ ದಹನವಾಗಿದ್ದಾನೆ.

ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications