ಡಿಆರ್ ಡಿಒ ಪ್ರಶಸ್ತಿಗೆ ಬೆಂಗಳೂರಿನ 12 ವಿಜ್ಞಾನಿಗಳು

ಬೆಂಗಳೂರು, ಸೆಪ್ಟೆಂಬರ್, 24 : ರಕ್ಚಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ನೀಡಿದ 2014ನೇ ಸಾಲಿನ ಹಲವು ಪ್ರಶಸ್ತಿಗಳಿಗೆ ನಗರದ 12 ವಿಜ್ಞಾನಿಗಳು ಭಾಜನರಾಗಿದ್ದಾರೆ.

ಡಿರ್ ಡಿಒ ಸಂಸ್ಥೆಯು ನವದೆಹಲಿಯ ಮುಖ್ಯ ಕಾರ್ಯಾಲಯದಲ್ಲಿ ನಡೆಸಿದ ಸಮಾರಂಭದಲ್ಲಿ ಸೆಪ್ಟೆಂಬರ್ 23ರ ಬುಧವಾರದಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ 12 ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಶುಭಾಶಯ ಕೋರಿದರು.[ಡಿಆರ್ ಡಿಒ ಡೈರೆಕ್ಟರ್ ಆಗಿ ಜೆ.ಮಂಜುಳಾ ನೇಮಕ]

DRD0

ಯಾರು ಯಾವ ಪ್ರಶಸ್ತಿ ಪಡೆದರು?

ಡಿಆರ್ ಡಿಒ ಮಾಜಿ ಕಾರ್ಯದರ್ಶಿ, ರಕ್ಷಣಾ ಸಚಿವರ ಮಾಜಿ ಸಲಹೆಗಾರ ಡಾ.ವಿ.ಎಸ್ ಅರುಣಾಚಲಂ ಅವರು 'ಡಿಆರ್ ಡಿಒ ಜೀವಮಾನ ಸಾಧನೆ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಏರೋನಾಟಿಕಲ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್(ಎಡಿಇ) ಮಾಜಿ ನಿರ್ದೇಶಕ ಪಿ. ಶ್ರೀ ಕುಮಾರ್ ಅವರಿಗೆ 'ಉತ್ಕೃಷ್ಠ ಕಾರ್ಯಕ್ಷಮತೆ' ಪ್ರಶಸ್ತಿ ದೊರೆತಿದೆ.

ಎಂಟಿಆರ್ ಡಿಸಿ (ಮೈಕ್ರೋವೇವ್ ಟ್ಯೂಬ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಸೆಂಟರ್) ನ ಮುಖ್ಯ ಕಾರ್ಯನಿರ್ವಾಹಕ ಡಾ.ಕೆ. ಸೀತಾರಾಮ ಭಟ್, ಎಡಿಎ (ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ)ಎನ್.ಎನ್.ಎಸ್.ಎಸ್.ಆರ್.ಕೆ ಪ್ರಸಾದ್, ಎಡಿಇ (ಏರೋನಾಟಿಕಲ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್) ಡಾ. ಎಂ ಸುರೇಶ್, ಹಾಗೂ ಎಲ್ ಆರ್ ಡಿಇ (ಎಲೆಕ್ಟ್ರಾನಿಕ್ಸ್ ಆಂಡ್ ರಾಡರ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್) ಯ ಎಲ್ ಜ್ಞಾನ ಮೈಕೆಲ್ ಪ್ರಕಾಶಂ ಅವರಿಗೆ 'ವರ್ಷದ ವಿಜ್ಞಾನಿ' ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಡಿಆರ್ ಡಿಒ ದಕ್ಷಿಣ ವಿಭಾಗದ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಎನ್. ಎಂ ಕಾವೇರಪ್ಪ ಮತ್ತು ಸಿಎಐಆರ್ (ಸೆಂಟರ್ಫಾರ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಂಡ್ ರೋಬೋಟಿಕ್ಸ್) ನ ಹಿರಿಯ ತಾಂತ್ರಿಕ ಅಧಿಕಾರಿ ಎ.ಎಸ್ ಮನೋಹರ್ ಅವರು 'ಉತ್ತಮ ಕಾರ್ಯಕ್ಷಮತೆ' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆರ್. ರಾಮಲಿಂಗಂ, ಮಲ್ಲಿಕಾರ್ಜುನ ಉಪ್ಪಾರ್, ಡೇವಿಡ್ ಜಾನ್ ಮತ್ತು ರವಿ ದೋಮಲ ಅವರಿಗೆ 'ಯುವ ವಿಜ್ಞಾನಿ' ಎಂಬ ಗೌರವ ಪಡೆದಿದ್ದಾರೆ. ಹಾಗೆಯೇ ಬೆಂಗಳೂರಿನ ಎಡಿಇ ಯು ಸಿಲಿಕಾನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+