ಆಸ್ಪತ್ರೆಯಿಂದ ಮಧ್ಯ ರಾತ್ರಿ ಸುಧಾಕರ್‌ಗೆ ಬಂತು ಪತ್ನಿಯ ಸಂದೇಶ

ಬೆಂಗಳೂರು, ಜೂನ್ 27: ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ರಿಗೆ ಆಸ್ಪತ್ರೆಯಿಂದ ಸಂದೇಶವೊಂದು ಬಂದಿದೆ. ಇದನ್ನು ಅವರ ಪ್ರೀತಿಯ ಪತ್ನಿ ಹಾಗೂ ಮಗಳು ಕಳುಹಿಸಿದ್ದಾರೆ.

ಇಂದು ಸುಧಾಕರ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನ ಸುಧಾಕರ್ ಪತ್ನಿ ಹಾಗೂ ಮಗಳು ವಿಡಿಯೋ ಸಂದೇಶದ ಮೂಲಕ ಶುಭಾಶಯ ತಿಳಿಸಿದ್ದಾರೆ. ಹಾಡಿನ ಮೂಲಕ ಮಗಳು ಅಪ್ಪನಿಗೆ ವಿಶ್ ಮಾಡಿದ್ದಾಳೆ.

ಸುಧಾಕರ್ ಕುಟುಂಬಕ್ಕೆ ಸಹ ಕೊರೊನಾ ಸೋಂಕು ಹರಡಿದ್ದು, ಅವರ ಪತ್ನಿ, ಮಗಳು ಹಾಗೂ ತಂದೆ ಆಸ್ಪತ್ರೆಯಲ್ಲಿ ಇದ್ದಾರೆ. ಹೀಗಾಗಿ, ಆಸ್ಪತ್ರೆಯ ಮೂಲಕವೇ ವಿಶ್ ಮಾಡಿದ್ದಾರೆ. ಪ್ರತಿ ವರ್ಷ ಕುಟುಂಬದ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದು, ಈ ವರ್ಷ ಅದು ಸಾಧ್ಯವಾಗುತ್ತಿಲ್ಲ.

DR Sudhakar Family Sent A Birthday Wishes From Hospital

''ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮಧುರವಾದದ್ದು, ಪವಿತ್ರ ಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್'' ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

''ಆತ್ಮೀಯ ಬಂಧುಗಳೇ, ತಮ್ಮೆಲ್ಲರ ಶುಭಹಾರೈಕೆ, ಆಶೀರ್ವಾದಗಳಿಂದ ನನ್ನ ಕುಟುಂಬ ಸದಸ್ಯರು ಕ್ಷೇಮದಿಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರಾಥಮಿಕ ಸಂಪರ್ಕಿತನಾಗಿ ಕ್ವಾರಂಟೈನ್ ನಲ್ಲಿರುವುದರಿಂದ, ನಾಳೆ ನನ್ನ ಜನ್ಮದಿನದಂದು ನೀವು ಇರುವಲ್ಲಿಂದಲೇ ಹಾರೈಸಿ, ಆಶೀರ್ವದಿಸಿ, ನಿಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿಯಾಗಿದ್ದೇನೆ.'' ಎಂದು ಸುಧಾಕರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+