ಚಿತ್ರ ಸಂಪುಟ: ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್ ಜನ್ಮ ದಿನಾಚರಣೆ

ರಾಜ್ ಕುಮಾರ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಬೆಂಗಳೂರು, ಏಪ್ರಿಲ್ 24: ನಟ ಸಾರ್ವಭೌಮ, ಗಾನ ಗಂಧರ್ವ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ 89ನೇ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಸಂತಸ, ಸಂಭ್ರಮದಿಂದ ಆಚರಿಸಲಾಯಿತು.

ರಾಜ್ ಕುಮಾರ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು.[ಅಣ್ಣಾವ್ರ ಹಾಡಿಗೆ ಹೊಸ ಮೆರಗು ನೀಡಿದ ಮಲ್ನಾಡ್ ಸಿಸ್ಟರ್ಸ್]

ಕಾರ್ಯಕ್ರಮದಲ್ಲಿ ಮನರಂಜನೆ ಕಾರ್ಯಕ್ರಮಗಳ ಜತೆ ಸಭಾ ಕಾರ್ಯಕ್ರಮವೂ ನಡೆಯಿತು. ಸಾವಿರಾರು ಜನ ಪ್ರೇಕ್ಷಕರು, ಗಣ್ಯರು, ಸಚಿವರು ಹಾಗೂ ಕಲಾವಿದರು ಪಾಲ್ಗೊಂಡಿದ್ದರು. ಇನ್ನು ಕಾರ್ಯಕ್ರಮದಲ್ಲಿ ರಾಜ್ ಕುಮಾರ್ ಮಕ್ಕಳು ಹಾಗೂ ಕುಟುಂಬಸ್ಥರೂ ಪಾಲ್ಗೊಂಡಿದ್ದರು.

 ರಾಜ್ ಕುಟುಂಬಸ್ಥರು ಭಾಗಿ

ರಾಜ್ ಕುಟುಂಬಸ್ಥರು ಭಾಗಿ

ಡಾ ರಾಜ್ ಕುಮಾರ್ ಪುತ್ರರಾದ ರಾಘವೇಂದ್ರ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೆನಪಿನ ಚಿತ್ರಗಳ ಪ್ರದರ್ಶನ

ನೆನಪಿನ ಚಿತ್ರಗಳ ಪ್ರದರ್ಶನ

ರಾಜ್ ಕುಮಾರ್ ಬುದುಕಿನ ಚಿತ್ರಗಳ ನೆನಪುಗಳನ್ನು ಸಾರುವ ವಿಡಿಯೋ, ಕಲಾಕೃತಿ, ಸಂಗೀತ ಮುದ್ರಿಕೆಗಳನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.[ಕನ್ನಡದ ಯಾವ ನಟಿ ಡಾ.ರಾಜ್ ಗೆ ಅತ್ಯುತ್ತಮ ಜೋಡಿ ಆಗಿದ್ದರು?]

ರವೀಂದ್ರ ಕಲಾಕ್ಷೇತ್ರಕ್ಕೆ ರಾಜ್ ಮೆರುಗು

ರವೀಂದ್ರ ಕಲಾಕ್ಷೇತ್ರಕ್ಕೆ ರಾಜ್ ಮೆರುಗು

ರಾಜ್ ಕುಮಾರ್ ಜನ್ಮ ದಿನಾಚರಣೆ ನಿಮಿತ್ತ ಇಡೀ ರವೀಂದ್ರ ಕಲಾಕ್ಷೇತ್ರಕ್ಕೆ ಹೊಸ ಮೆರುಗು ಬಂದಿತ್ತು. ಇಡೀ ರವೀಂದ್ರ ಕಲಾಕ್ಷೇತ್ರವನ್ನು ವಿಭಿನ್ನವಾಗಿ ಸಿಂಗಾರಗೊಳಿಸಲಾಗಿತ್ತು. ಕಲಾಕ್ಷೇತ್ರದ ಒಳ ರಾಜ್ ಲೋಕವೇ ಸೃಷ್ಟಿಯಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ಡಾ ರಾಜ್ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಚಿತ್ರ ನಟಿ ಜಯಂತಿ ಕೂಡಾ ಆಗಮಿಸಿದ್ದರು. ಇನ್ನು ಸಮಾರಂಭದಲ್ಲಿ ಖ್ಯಾತ ಗಾಯಕರು ರಾಜ್ ಕುಮಾರ್ ಹಾಡಿದ ಹಾಗೂ ಅವರ ಚಿತ್ರಗಳ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.[ಡಾ.ರಾಜ್ ಹುಟ್ಟುಹಬ್ಬಕ್ಕೆ 'ಟಗರು' ಚಿತ್ರತಂಡ ಕೊಟ್ಟ ಗಿಫ್ಟ್ ನೋಡಿ!]

ಕಕ್ಕಿರಿದ ಜನಸ್ತೋಮ

ಕಕ್ಕಿರಿದ ಜನಸ್ತೋಮ

ಡಾ ರಾಜ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜೆ.ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.

ಗಣ್ಯರ ಉಪಸ್ಥಿತಿ

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೆ. ಜೆ. ಜಾರ್ಜ್, ಕೇಂದ್ರ ಸಚಿವರಾದ ಅನಂತ ಕುಮಾರ್, ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್ ವಿ ರಾಜೇಂದ್ರಸಿಂಗ್ ಬಾಬು, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ ರಾ ಗೋವಿಂದು, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+