ಬೆಂಗಳೂರು ಪೂರ್ವದಲ್ಲಿ ಕೊವಿಡ್ ನಿಯಂತ್ರಣಕ್ಕೆ ಸೋಮಣ್ಣ ತಯಾರಿ

ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ವಲಯವಾರು ಉಸ್ತುವಾರಿ ನೀಡಲಾಗಿದ್ದು, ಬೆಂಗಳೂರು ಪೂರ್ವ ವಲಯದ ಜವಾಬ್ದಾರಿ ವಹಿಸಿಕೊಂಡಿರುವ ವಿ ಸೋಮಣ್ಣ ತಮ್ಮ ಕ್ಷೇತ್ರದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

Recommended Video

      Obama , Musk , Apple , Uber and may Twitter account Hacked | Oneindia Kannada

      ಡಾ.ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಮಾಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. 500 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ನಾಳೆ ಮಧ್ಯಾಹ್ನದೊಳಗೆ ಅದನ್ನು ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ. 10 ವೆಂಟಿಲೇಟರ್ ವ್ಯವಸ್ಥೆ ಇರಲಿದೆ ಎಂದು ಸೋಮಣ್ಣ ಮಾಹಿತಿ ನೀಡಿದ್ದಾರೆ.

      ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಗೋವಿಂದರಾಜನಗರದಲ್ಲಿ 150 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದೇವೆ. ಕೋವಿಡ್ ಮತ್ತು ನಾನ್ ಕೋವಿಡ್ 150 ಬೆಡ್‌ಗಳ ಮದುವೆ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಒಂದು ಕ್ಷೇತ್ರಕ್ಕೆ ಪ್ರತಿ ವಾರ್ಡ್‌ಗಳಲ್ಲಿ 2 ಅಂಬ್ಯುಲೆನ್ಸ್, 10 ಟಿಟಿ ವಾಹನಗಳು ಹಾಗೂ 2 ಮೃತದೇಹ ಸಾಗಿಸುವ ವಾಹನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

      Dr Ambedkar Medical Hospital will be completely converted into Covid Hospital Said Somanna

      'ಶಿವಾಜಿನಗರದಲ್ಲೂ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಶಾಂತಿನಗರದ ಕೋವಿಡ್ ಕೇರ್ ಸೆಂಟರ್, ಫೀವರ್ ಸೆಂಟರ್ ಉದ್ಘಾಟನೆ ಮಾಡಿದ್ದೇವೆ. ಶಾಂತಿನಗರದಲ್ಲಿ 200 ಬೆಡ್‌ಗಳ ಆಸ್ಪತ್ರೆಯನ್ನು ಹೊಟೇಲ್‌ನಲ್ಲಿ ಮಾಡಲು ನಿರ್ಧರಿಸಿದ್ದೇವೆ. 1438 ಬೂತ್‌ಗಳು ನನ್ನ ಉಸ್ತುವಾರಿಗೆ ಬರುವ 6 ಕ್ಷೇತ್ರಗಳಲ್ಲಿ ಬರುತ್ತದೆ. ಈ ಎಲ್ಲಾ ಬೂತ್‌ಗಳನ್ನು ಕ್ರಿಯಾಶೀಲ ಮಾಡಿದ್ದೇವೆ. ಬೆಂಗಳೂರು ಪೂರ್ವ ವಲಯದ ಕಂಟೈನ್‌ಮೆಂಟ್ ಜೋನ್‌ಗಳ ಮನೆಗಳಿಗೆ ರೇಷನ್ ಕಿಟ್ ಕೊಟ್ಟಿದ್ದೇವೆ' ಎಂದಿದ್ದಾರೆ.

      'ಬೆಂಗಳೂರು ಪೂರ್ವ ವಲಯದಲ್ಲಿ 6 ಕಂಟ್ರೋಲ್ ರೂಂ ಮಾಡಿದ್ದೇವೆ. ಹೋಂ ಕ್ವಾರೆಂಟೈನ್‌‌ಗೆ ಒಳಗಾಗುವವರಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ. ಶಿವಾಜಿನಗರ, ಸರ್ವಜ್ಞನಗರ, ಹೆಬ್ಬಾಳ, ಶಾಂತಿನಗರ, ಪುಲಿಕೇಶಿನಗರ ಎಲ್ಲಾ ಕಡೆಗಳಲ್ಲೂ ವ್ಯವಸ್ಥೆ ಮಾಡಲಾಗಿದೆ' ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+