Get Updates
Get notified of breaking news, exclusive insights, and must-see stories!

ವರದಕ್ಷಿಣೆ ಕಿರುಕುಳ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಅನುಮಾನಸ್ಪದ ಸಾವು

ಬೆಂಗಳೂರು, ಜ. 23: ಎರಡು ತಿಂಗಳ ಹಿಂದೆ ಸೌದಿಯಿಂದ ಬಂದಿದ್ದ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಕೊಲೆ ಮಾಡಿ ವಿಮಾನದಲ್ಲಿ ಪರಾರಿಯಾಗಿದ್ದ ಕೊಲೆ ಆರೋಪಿಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ನಿವಾಸಿ ಸುಮ್ರಾ ಸಿಮೀನ್ ಮೃತಪಟ್ಟವರು. ಈಕೆಯ ಪತಿ ಶಹಬಾಜ್ ಖಾನ್‌ನನ್ನು ರಾಜಾಜಿನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವರದಕ್ಷಿಣೆ ಕಿರಕುಳದಿಂದ ಸುಮ್ರಾ ಸಿಮೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಆರು ವರ್ಷದ ಹಿಂದೆ ಶಹಬಾಜ್ ಖಾನ್‌ನನ್ನು ಮದುವೆಯಗಿದ್ದ ನುಮ್ರಾಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಕುಟುಂಬ ದುಬೈನಲ್ಲಿ ನೆಲೆಸಿತ್ತು. ಎರಡು ತಿಂಗಳ ಹಿಂದಷ್ಟೇ ವಾಪಸು ಬೆಂಗಳೂರಿಗೆ ಬಂದಿತ್ತು. ಶಹಬಾಜ್ ಸಹೋದರಿಯ ಮನೆಯಲ್ಲಿದ್ದರು. ವರದಕ್ಷಿಣೆ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದು, ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Dowry Harassment Allegation: Housewife Commits Suicide by Hanging in Rajajinagar

ಹಂತಕರ ಸೆರೆ: ಜಗಳ ಬಿಡಿಸಲು ಹೋದ ವ್ಯಕ್ತಿಯನ್ನು ಕೊಲೆ ಮಾಡಿ ವಿಮಾನದಲ್ಲಿ ಎಸ್ಕೇಪ್ ಆಗಿದ್ದ ಇಬ್ಬರು ಕೊಲೆ ಹಂತಕರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಆಂಥೋನಿ ಸಿಂಗ್, ಕಿಶನ್ ಸಿಂಗ್, ಬಂಧಿತ ಆರೋಪಿಗಳು. ಜ. 1 ರಂದು ಕೊತ್ತನೂರಿನ ಹನುಮಂತನಗರದಲ್ಲಿ ಮುರುಗನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಸ್ನೇಹಿತರ ಜಗಳ ಬಿಡಿಸಲು ಹೋಗಿದ್ದ ಮುರುಗನ್ ಮೇಲೆ ಆರು ಮಂದಿ ಹಲ್ಲೆ ಮಾಡಿದ್ದರು. ರಕ್ತ ಸಾವ್ರ ಉಂಟಾಗಿ ಐದು ದಿನಗಳ ನಂತರ ಮೃತಪಟ್ಟಿದ್ದ. ಮುರುಗನ್ ಸಾವಿನ ವಿಚಾರ ತಿಳಿದು ಹಂತಕರು ಪರಾರಿಯಾಗಿದ್ದರು. ಇದೀಗ ಇಬ್ಬರು ಸಿಕ್ಕಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+