ಎನ್ ಆರ್ ಕಾಲೋನಿಯಲ್ಲಿ ದೋಸೆ ಧ್ವನಿ ಸಾಂದ್ರಿಕೆ ಬಿಡುಗಡೆ: ವಿ. ಮನೋಹರ್ ಭಾಗಿ
ಬೆಂಗಳೂರು, ಡಿಸೆಂಬರ್ 07: ಶ್ರೀ ಹರಿ ಸಂಕೀರ್ತನ ಟ್ರಸ್ಟ್ ವತಿಯಿಂದ ಕಾರ್ತಿಕ ಸಂಗೀತೋತ್ಸವ ಹಾಗೂ "ದೋಸೆ" ಧ್ವನಿ ಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಡಿ.09 ರಂದು ಭಾನುವಾರ ನಗರದ ಬಸವನಗುಡಿ ಬಳಿ ಇರುವ ಎನ್ ಆರ್ ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ಹಾಗೂ ಸಂಗೀತ ನಿರ್ದೇಶಕ ವಿ. ಮನೋಹರ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಂತಾರಾಷ್ಟ್ರೀಯ ಖ್ಯಾತ ತಬಲಾ ವಾದಕರಾದ ಶತತಬಲಾ ಪಂಡಿತ್ ಸತೀಶ್ ಹಂಪಿಹೊಳಿ ರವರು ವಹಿಸಲಿದ್ದು, ಉದ್ಘಾಟನೆಯನ್ನು ಖ್ಯಾತ ಹಿಂದೂಸ್ತಾನಿ ಗಾಯಕರಾದ ಡಾ| ಮುದ್ದುಮೋಹನ್ ರವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ವಿ.ಎಮ್ ನಾಗರಾಜ್ ಹಾಗೂ ಅಹೋರಾತ್ರಾ ಭಾಗವಹಿಸುವರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯತ್ರಿ ಶ್ರೀಧರ್ (ವಾಯ್ಸ್ ನೇಮ್-ಸಂಕಲ್ಪ) ರವರ ಗಾಯನ ಕಾರ್ಯಕ್ರಮ, ಶ್ರೀ ಸದ್ಗುರು ಮ್ಯುಜಿಕ್ ಅಕಾಡೆಮಿ ವಿದ್ಯಾರ್ಥಿಗಳಿಂದ ತಬಲಾ ವಾದನ, ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಹಾಗೂ ಸಂಗೀತ ಸ್ವರ ಸಂಸ್ಕಾರ ಸೇವಾ ಟ್ರಸ್ಟ್ ಶಿಷ್ಯ ವೃಂದದವರಿಂದ ಸಮೂಹ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.












Click it and Unblock the Notifications